Sunday, May 19, 2024

ಜಾರ್ಖಂಡ್​ನಲ್ಲಿ ಹಣದ ಬೆಟ್ಟವೇ ಪತ್ತೆಯಾಗಿದೆ : ಮೋದಿ ಅಚ್ಚರಿ

ಒಡಿಶಾ : ಜಾರ್ಖಂಡ್​ ಸಚಿವ ಅಲಂಗೀರ್ ಆಲಂ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಯಲ್ಲಿ 30 ಕೋಟಿ ನಗದು ಪತ್ತೆಯಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ಒಡಿಶಾದ ನಬರಂಗಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜಾರ್ಖಂಡ್‌ನಲ್ಲಿ ಹಣದ ಬೆಟ್ಟವೇ ಪತ್ತೆಯಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಮೋದಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ವಿಪಕ್ಷ ಹಾಗೂ ಜನ ಹೇಳ್ತಾರೆ, ಈ ರೀತಿಯಾಗಿ ಸಚಿವರು ಹಣವನ್ನು ಕಬಳಿಸುತ್ತಾರೆ. ಅದನ್ನು ಮೋದಿ ತೆಗೆದುಕೊಳ್ಳುತ್ತಾರೆ ಎಂದು ದೂರುತ್ತಾರೆ. ನಾನು ಅವರ ಭ್ರಷ್ಟಾರವನ್ನು ನಿಲ್ಲಿಸಿದರೆ, ಅವರ ಕಪ್ಪು ಹಣವನ್ನು ಪತ್ತೆ ಮಾಡಿದರೆ, ಅವರ ಲೂಟಿಗೆ ಕಡಿವಾಣ ಹಾಕಿದರೆ, ಖಂಡಿತ ಅವರು ಮೋದಿಯನ್ನೇ ನಿಂದಿಸುತ್ತಾರೆ. ಅದಕ್ಕೆ ಆ ಜನಗಳು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಾರೆ ಎಂದು ಕುಟುಕಿದ್ದಾರೆ.

ಇಡಿ ಅಧಿಕಾರಿಗಳು ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಸಂಜೀವ್ ಲಾಲ್ ಅವರ ಮನೆಯಲ್ಲಿ 30 ಕೋಟಿ ವಶಪಡಿಸಿಕೊಂಡಿದ್ದಾರೆ. ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿದ್ದ ವೀರೇಂದ್ರ ರಾಮ್ ಅವರನ್ನು 100 ಕೋಟಿ ಮೌಲ್ಯದ ಆಸ್ತಿ ಗಳಿಸಿದ ಆರೋಪದ ಮೇಲೆ ಕಳೆದ ವರ್ಷ ಬಂಧಿಸಲಾಗಿತ್ತು.

ವೀರೇಂದ್ರ ಅವರ ಬಳಿ ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವ್ಯವಹಾರದ ವಿವರಗಳನ್ನು ಹೊಂದಿರುವ ಪೆನ್‌ಡ್ರೈವ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದೇ ಪ್ರಕರಣ ಸಂಬಂಧ ಸಂಜೀವ್ ಲಾಲ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES