Sunday, May 5, 2024

ಹೊಸ ಇತಿಹಾಸ ಸೃಷ್ಟಿಸಿದ ವಿರಾಟ್ : 10 ಆವೃತ್ತಿಗಳಲ್ಲಿ ಕೊಹ್ಲಿ ‘ಕಿಂಗ್’

ಬೆಂಗಳೂರು : ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು​ (RCB) ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ 10 ಆವೃತ್ತಿಗಳಲ್ಲಿ 400ಕ್ಕೂ ಹೆಚ್ಚು ರನ್​ ಸಿಡಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಪ್ರಸಕ್ತ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ಮಿಂಚುತ್ತಿದ್ದಾರೆ. ಈ ಬಾರಿ ಆರಂಭಿಕ ಬ್ಯಾಟರ್​ ಆಗಿ ಕೊಹ್ಲಿ 401* ಗಳಿಸಿದ್ದಾರೆ.

ವಿರಾಟ್ ಕೊಹ್ಲಿ 2011ರಲ್ಲಿ 557 ರನ್ ಗಳಿಸಿದ್ದರು. 2013ರಲ್ಲಿ 634 ರನ್, 2015ರಲ್ಲಿ 505 ರನ್. 2016 ರಲ್ಲಿ ಬರೋಬ್ಬರಿ 973 ರನ್ ಗಳಿಸಿದ್ದರು. 2018 ರಲ್ಲಿ 530 ರನ್, 2019 ರಲ್ಲಿ 464 ರನ್, 2020 ರಲ್ಲಿ 466 ರನ್, 2021 ರಲ್ಲಿ 405 ರನ್, 2023 ರಲ್ಲಿ 639 ರನ್ ಹಾಗೂ 2024 ರಲ್ಲಿ 401* ರನ್ ಸಿಡಿಸಿದ್ದಾರೆ. ಇನ್ನೂ ಆರಂಭಿಕ ಆಟಗಾರನಾಗಿ ಕೊಹ್ಲಿ 4,000 ರನ್ ಪೂರೈಸಿದ್ದಾರೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನ ನಡೆದ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಬೃಹತ್ ಸ್ಕೋರ್ ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್​ ಗಳಿಸಿತು.

ಕೊಹ್ಲಿ, ರಜತ್ ಆಕರ್ಷಕ ಅರ್ಧಶತಕ

ಆರ್​ಸಿಬಿ ಪರ ವಿರಾಟ್ ಕೊಹ್ಲಿ 51 ಹಾಗೂ ರಜತ್ ಪಟಿದಾರ್ 50 ರನ್​ ಸಿಡಿಸಿದರು. ಕೊನೆಯಲ್ಲಿ ಗ್ರೀನ್​ 37 ರನ್​ ಸಿಡಿಸಿ ಆರ್​ಸಿಬಿ ಮೊತ್ತವನ್ನು 200ರ ಗಡಿ ದಾಟಿಸಿದರು. ನಾಯಕ ಡು ಪ್ಲೆಸಿಸ್ 25, ದಿನೇಶ್ ಕಾರ್ತಿಕ್ 11, ವಿಲ್ ಜಾಕ್ಸ್ 6 ರನ್​ ಗಳಿಸಿ ಕೊಂಚ ನಿರಾಸೆ ಮೂಡಿಸಿದರು. ಹೈದರಾಬಾದ್ ಪರ ಜಯದೇವ್ ಉನದ್ಕಟ್ 3, ಟಿ. ನಟರಾಜನ್ 2, ಕಮಿನ್ಸ್ ಹಾಗೂ ಮಾಕ್ರಂಡೆ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES