Sunday, May 5, 2024

ಮೋದಿಗೆ ಚುನಾವಣಾ ಆಯೋಗದಿಂದ ಕ್ಲೀನ್​ಚಿಟ್, ರಾಹುಲ್‌ಗೆ ನೋಟಿಸ್‌

ನವದೆಹಲಿ : ಲೋಕಸಭಾ ಚುನಾವಣೆಯ ಸಂಭ್ರಮದ ನಡುವೆಯೇ ಪ್ರಧಾನಿ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.

ಪ್ರಧಾನಿ ಮೋದಿ ವಿರುದ್ಧದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರಿನಲ್ಲಿ ಚುನಾವಣಾ ಆಯೋಗದ ಮೊದಲ ನಿರ್ಧಾರ ಹೊರಬಿದ್ದಿದೆ. ಮೂಲಗಳ ಪ್ರಕಾರ, ಯುಪಿಯ ಪಿಲಿಭಿತ್ ರ್ಯಾಲಿಯಲ್ಲಿ ರಾಮಮಂದಿರ ಮತ್ತು ಕರ್ತಾರ್‌ಪುರ ಕಾರಿಡಾರ್‌ನ ಪ್ರಸ್ತಾಪವು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಧಾನಿ ಮೋದಿ ವಿರುದ್ಧದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಮೊದಲ ಪ್ರಕರಣದಲ್ಲಿ ಚುನಾವಣಾ ಆಯೋಗ ತೀರ್ಪು ನೀಡಿದೆ ಎಂದು ಮೂಲಗಳು ತಿಳಿಸಿವೆ. ರಾಮಮಂದಿರ ನಿರ್ಮಾಣದ ಪ್ರಸ್ತಾಪವನ್ನು ಧರ್ಮದ ಆಧಾರದ ಮೇಲೆ ಮತಕ್ಕಾಗಿ ಮನವಿ ಎಂದು ಪರಿಗಣಿಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಧಾನಿ ಮೋದಿ, ರಾಹುಲ್‌ಗೆ ನೋಟಿಸ್​

ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ತಮ್ಮ ಹೇಳಿಕೆಗಳ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಪರಿಶೀಲನೆ ನಡೆಸಿರುವ ಚುನಾವಣಾ ಆಯೋಗವು, ಏಪ್ರಿಲ್ 29ರ ಬೆಳಗ್ಗೆ 11 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆ.

ಈ ಸುದ್ದಿ ಓದಿದ್ದೀರಾ? : ‘ಪೆನ್​ಡ್ರೈವ್​’ ಸ್ವಾಮಿ ಗ್ಯಾರಂಟಿ ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ : ಡಿ.ಕೆ. ಶಿವಕುಮಾರ್

ದ್ವೇಷ ಹರಡುವ ಹೇಳಿಕೆ ನೀಡಲಾಗಿದೆ

ಮುಸ್ಲಿಂ ಎಂಬ ಪದ ಬಳಸದೆ ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದು ಮೋದಿ ಹೇಳಿದ್ದಾರೆ. ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜಾತಿ, ಧರ್ಮ, ಭಾಷೆ ಮತ್ತು ಸಮುದಾಯದ ಆಧಾರದ ಮೇಲೆ ಇಬ್ಬಾಗಿಸುವ ಮತ್ತು ದ್ವೇಷ ಹರಡುವ ಹೇಳಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪಿಸಿವೆ.

RELATED ARTICLES

Related Articles

TRENDING ARTICLES