Sunday, May 19, 2024

ಧೋನಿ, ದುಬೆ ಡಕ್ : ಹಳೆ ಚಾಳಿ ಮುಂದುವರೆಸಿದ ಚೆನ್ನೈ, ಪಂಜಾಬ್​ಗೆ 168 ರನ್ ಟಾರ್ಗೆಟ್

ಬೆಂಗಳೂರು : ಧೋನಿ, ದುಬೆ ಗೋಲ್ಡನ್ ಡಕ್. ಹಳೆ ಚಾಳಿ ಮುಂದುವರಿಸಿದ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್. ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೈಕೊಟ್ಟ ಚೆನ್ನೈ ಬ್ಯಾಟರ್​ಗಳು.

ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ಸವಾಲಿನ ಮೊತ್ತ ಕಲೆಹಾಕಿದೆ. ಪಂಜಾಬ್​ ಬೌಲರ್​ಗಳಿಗೆ ನಲುಗಿದ ಚೆನ್ನೈ, ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 167 ರನ್​ ಗಳಿಸಿದೆ.

ಇನ್ನಿಂಗ್ಸ್ ಆರಂಭಿಸಿದ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಸತತ ವೈಫಲ್ಯದ ನಡುವೆಯೂ ಅವಕಾಶ ಪಡೆದ ಅಜಿಂಕ್ಯ ರಹಾನೆ 9 ರನ್​ ಗಳಿಸಿ ಔಟಾದರು. ಬಳಿಕ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಡೇರಿಲ್ ಮಿಚೆಲ್ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು. ಗಾಯಕ್ವಾಡ್ 32 ಹಾಗೂ ಮಿಚೆಲ್ 30 ರನ್​ ಗಳಿಸಿ ಔಟಾದರು. ಬಳಿಕ ಬಂದ ಶಿವಂ ದುಬೆ ಗೋಲ್ಡನ್ ಡಕ್​ ಆಗಿ ನಿರಾಸೆ ಮೂಡಿಸಿದರು.

ಮೊಯಿನ್ ಅಲಿ ಕೇವಲ 17 ರನ್​ ಗಳಿಸಿ ಔಟಾದರು. ಒಂದೆಡೆ ವಿಕೆಟ್​ ಉರುಳುತ್ತಿದ್ದರೂ ರವೀಂದ್ರ ಜಡೇಜಾ ಏಕಾಂಗಿ ಹೋರಾಟ ನಡೆಸಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಬೇಕಿದ್ದ ಧೋನಿ ಕ್ರೀಸ್​ಗೆ ಬರಲೇ ಇಲ್ಲ. ತಮ್ಮ ಬದಲಿಗೆ ಮಿಚೆಲ್ ಸ್ಯಾಂಟ್ನರ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಕ್ರೀಸ್​ಗೆ ಕಳುಹಿಸಿದರು.

ಕ್ರೀಸ್​ಗೆ ಬಂದ ಬಾಲಂಗೋಚಿಗಳು ಪೆವಿಲಿಯನ್ ಪೆರೇಡ್ ನಡೆಸಿದರು. 18 ಓವರ್​ನ 4ನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಔಟಾದರು. ಆಗ ಕ್ರೀಸ್​ಗೆ ಬಂದ ಧೋನಿ ಗೋಲ್ಡನ್ ಡಕ್​ ಆಗಿ ಬಂದ ಹಾದಿಯಲ್ಲೇ ಪೆವಿಲಿಯನ್ ಕಡೆ ಮುಖ ಮಾಡಿದರು. ಪಂಜಾಬ್​ ಬೌಲರ್​ಗಳಿಗೆ ಕಾಟ ಕೊಟ್ಟ ರವೀಂದ್ರ ಜಡೇಜಾ 26 ಎಸೆತಗಳಲ್ಲಿ 43 ರನ್​ ಸಿಡಿಸಿದರು. ಉಳಿದ ಯಾವೊಬ್ಬ ಬ್ಯಾಟರ್​ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ.

ಪಂಜಾಬ್​​ ಪರ ರಾಹುಲ್ ಚಹಾರ್ ಹಾಗೂ ಹರ್ಷಲ್ ಪಟೇಲ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಅರ್ಷದೀಪ್ ಸಿಂಗ್ 2, ನಾಯಕ ಸ್ಯಾಮ್ ಕರನ್ ಒಂದು ವಿಕೆಟ್ ಪಡೆದರು. ಪಂಜಾಬ್ ಗೆಲ್ಲಲು 168 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES