Saturday, May 18, 2024

ಪ್ರಜ್ವಲ್​ ವೀಡಿಯೋಗಳು ನಾಲ್ಕೈದು ವರ್ಷಗಳದ್ದು: ಸಿಟಿ ರವಿ ಹೇಳಿಕೆಗೆ ಸಿಎಂ ತಿರುಗೇಟು

ಬೆಳಗಾವಿ: ಪ್ರಜ್ವಲ್​ ರೇವಣ್ಣ ವೀಡಿಯೋಗಳು ನಾಲ್ಕೈದು ವರ್ಷಗಳ ಹಿಂದಿನದು ಎಂದು ಹೇಳಿಕೆ ನೀಡಿರುವ ಸಿ.ಟಿ ರವಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್​ನವರು ಈ ಮೊದಲು ನಮ್ಮದು ಕಮ್ಯೂನಲ್​ ಪಾರ್ಟಿ ಎಂದು ಹೇಳುತ್ತಿದ್ದರು, ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಎನ್ನುತ್ತಿದ್ದರು, ಮೋದಿ ಪ್ರಧಾನಿ ಆಗಲ್ಲ, ಆದರೇ ನಾನು ದೇಶ ಬಿಟ್ಟು ಹೋಗ್ತೀನಿ ಎಂದು ಗೌಡರು ಹೇಳ್ತಿದ್ದರು. ಮೋದಿ ಪ್ರಧಾನಿಯಾದ ಮೇಲೆ ದೇವಗೌಡರು ದೇಶ ಬಿಟ್ಟು ಹೋದರಾ? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಬಿಜೆಪಿ ಸೋತಾಗಿದೆ, ಮೋದಿ ಮತ್ತೆ ಪ್ರಧಾನಿಯಾಗಲ್ಲ : ಸಿದ್ದರಾಮಯ್ಯ ಭವಿಷ್ಯ

ಪ್ರಜ್ವಲ್ ವೀಡಿಯೋಗಳು ನಾಲ್ಕೈದು ವರ್ಷಗಳ ಹಿಂದಿನದು ಎಂದು ಸಿಟಿ ರವಿ ಹೇಳಿಕೆ ನೀಡಿರಬಹುದು.  ಆದರೇ, ಆಗ ಯಾವ ಸಂತ್ರಸ್ತೆಯೂ ದೂರು ನೀಡಿರಲಿಲ್ಲ. ಈಗ ಕೊಟ್ಟಿದ್ದಾರೆ. ಡಿಸೆಂಬರ್ ತಿಂಗಳಿನಿಂದ ಪ್ರಜ್ವಲ್ ರೇವಣ್ಣನಿಗೆ ಸೇರಿದ ಅಶ್ಲೀಲ ವೀಡಿಯೋಗಳಿವೆ ಎಂಬ ಚರ್ಚೆಗಳು ನಡೆಯುತ್ತಿದ್ದವು, ವೀಡಿಯೋ ಇರುವ ಸಂಗತಿ ಗೊತ್ತಿದ್ದರೂ ಬಿಜೆಪಿಯವರು ಜೆಡಿಎಸ್​ ಜೊತೆಗೆ ಮೈತ್ರಿ ಮಾಡಿಕೊಂಡರು. ಅಲ್ಲದೇ, ಮೈತ್ರಿ ಅಭ್ಯರ್ಥಿ ಪರವಾಗಿ ಮೋದಿ ಹಾಗು ಅಮಿತ್​ ಶಾ ಪ್ರಚಾರ ನಡೆಸಿದ್ದಾರೆ.

ಈಗಾಗಲೇ ಪ್ರಜ್ವಲ್​ ರೇವಣ್ಣ ಬಂಧನಕ್ಕೆ ಬ್ಲೂಕಾರ್ನರ್​ ನೋಟೀಸ್​ ಜಾರಿಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

RELATED ARTICLES

Related Articles

TRENDING ARTICLES