Sunday, May 5, 2024

ಕೊನೆಗೂ ಗೆದ್ದ RCB : ಹೈದರಾಬಾದ್ ವಿರುದ್ಧ RCBಗೆ ಭರ್ಜರಿ ಗೆಲುವು

ಬೆಂಗಳೂರು : ಕೊನೆಗೂ ಗೆದ್ದ ಆರ್​​ಸಿಬಿ. ತವರು ಅಂಗಳದಲ್ಲಿ ತಮ್ಮದೇ ಅಭಿಮಾನಿಗಳ ಎದುರು ಮುಗ್ಗರಿಸಿದ SRH. ಸತತ 6 ಪಂದ್ಯಗಳ ಸೋಲಿನ ಬಳಿಕ ಆರ್​ಸಿಬಿ ಗೆಲುವಿನ ನಗೆ ಬೀರಿತು.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು​ 35 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಟೂರ್ನಿಯಲ್ಲಿ ಆರ್​ಸಿಬಿಯ ಎರಡನೇ ಗೆಲುವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 207 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 171 ರನ್​ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್​ ಪರ ಯಾವೊಬ್ಬ ಬ್ಯಾಟರ್​ ಸಹ ತವರು ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.

ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ 13 ಎಸೆತಗಳಲ್ಲಿ 31 (2 ಸಿಕ್ಸ್ & 3 ಬೌಂಡರಿ) ರನ್ ಸಿಡಿಸಿದರು. ಶಹಬಾಜ್ ಅಹಮ್ಮದ್ 34, ನಾಯಕ ಪ್ಯಾಟ್ ಕಮಿನ್ಸ್ 31, ಭುವನೇಶ್ವರ್ ಕುಮಾರ್ ಹಾಗೂ ನಿತೀಶ್ ರೆಡ್ಡಿ ತಲಾ 11 ರನ್ ಗಳಿಸಿದರು. ಆರ್​ಸಿಬಿ ಪರ ಕರಣ್ ಶರ್ಮಾ, ಗ್ರೀನ್ ಹಾಗೂ ಸ್ವಪ್ನಿಲ್ ಸಿಂಗ್ ತಲಾ ಎರಡುವಿಕೆಟ್, ಯಶ್ ದಯಾಳ್ ಹಾಗೂ ವಿಲ್ ಜಾಕ್ಸ್ ತಲಾ ಒಂದು ವಿಕೆಟ್ ಪಡೆದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್​ ಗಳಿಸಿತ್ತು. ಆರ್​ಸಿಬಿ ಪರ ವಿರಾಟ್ ಕೊಹ್ಲಿ 51 ಹಾಗೂ ರಜತ್ ಪಟಿದಾರ್ 50 ರನ್​ ಸಿಡಿಸಿದರು. ಗ್ರೀನ್​ 37, ನಾಯಕ ಡು ಪ್ಲೆಸಿಸ್ 25, ದಿನೇಶ್ ಕಾರ್ತಿಕ್ 11, ವಿಲ್ ಜಾಕ್ಸ್ 6 ರನ್​ ಗಳಿಸಿದರು. ಹೈದರಾಬಾದ್ ಪರ ಜಯದೇವ್ ಉನದ್ಕಟ್ 3, ಟಿ. ನಟರಾಜನ್ 2, ಕಮಿನ್ಸ್ ಹಾಗೂ ಮಾಕ್ರಂಡೆ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES