Saturday, May 18, 2024

ಮತ್ತೆ ಟಾಸ್ ಸೋತ CSK ಬ್ಯಾಟಿಂಗ್ : ಇಂದಾದರೂ ಚೆನ್ನೈ ಗೆಲ್ಲುತ್ತಾ? ಕಾಮೆಂಟ್ ಮಾಡಿ

ಬೆಂಗಳೂರು : ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಟಾಸ್ ಗೆದ್ದಿರುವ ಪಂಜಾಬ್‌ ಕಿಂಗ್ಸ್‌ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಧರ್ಮಶಾಲಾ ಮೈದಾನದಲ್ಲಿ ಐಪಿಎಲ್​ನ 53ನೇ ಪಂದ್ಯ ನಡೆಯುತ್ತಿದೆ. ಹಾಲಿ ಚಾಂಪಿಯನ್ ಚೆನ್ನೈ ಇಂದಿನ ಪಂದ್ಯದಲ್ಲಿ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿದೆ. ಇಂದಿನ ಪಂದ್ಯದಲ್ಲಿ ಮಥೀಶ ಪತಿರಾನ ಹಾಗೂ ಮುಸ್ತಾಫಿಜುರ್ ರೆಹಮಾನ್ ತಂಡದಿಂದ ಹೊರಗುಳಿದಿದ್ದಾರೆ.

ಸದ್ಯ ಚೆನ್ನೈ 10 ಪಂದ್ಯಗಳನ್ನು ಆಡಿದ್ದು 5 ಪಂದ್ಯದಲ್ಲಿ ಗೆಲುವು ಹಾಗೂ 5 ಪಂದ್ಯದಲ್ಲಿ ಸೋಲು ಕಂಡಿದೆ. ಪಂಜಾಬ್ 10 ಪಂದ್ಯಗಳನ್ನು ಆಡಿದ್ದು 4 ಪಂದ್ಯ ಗೆದ್ದು, 6 ಪಂದ್ಯ ಸೋತಿದೆ. ಚೆನ್ನೈ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಪಂಜಾಬ್ 8ನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್

ಅಜಿಂಕ್ಯ ರಹಾನೆ, ಋತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ.ಎಸ್. ಧೋನಿ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ರಿಚರ್ಡ್ ಗ್ಲೀಸನ್, ತುಷಾರ್ ದೇಶಪಾಂಡೆ

ಚೆನ್ನೈ ಇಂಪ್ಯಾಕ್ಟ್ ಪ್ಲೇಯರ್ಸ್ : ಸಮೀರ್ ರಿಜ್ವಿ, ಸಿಮರ್‌ಜೀತ್ ಸಿಂಗ್, ಶೇಕ್ ರಶೀದ್, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ

ಪಂಜಾಬ್ ಕಿಂಗ್ಸ್

ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್ (ನಾಯಕ), ರಿಲೀ ರೊಸೊವ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಷ್​ದೀಪ್ ಸಿಂಗ್

ಪಂಜಾಬ್ ಇಂಪ್ಯಾಕ್ಟ್ ಪ್ಲೇಯರ್ಸ್ : ಪ್ರಭಾಸಿಮ್ರಾನ್ ಸಿಂಗ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ತನಯ್ ತ್ಯಾಗರಾಜನ್, ವಿಧ್ವತ್ ಕಾವೇರಪ್ಪ, ರಿಷಿ ಧವನ್

RELATED ARTICLES

Related Articles

TRENDING ARTICLES