Sunday, May 5, 2024

ಚುನಾವಣಗೆ BMTC, KSRTC ಬಳಕೆ : ಬಸ್​ಗಾಗಿ ಸಾರ್ವಜನಿಕರ ಪರದಾಟ

ಬೆಂಗಳೂರು : ನಾಳೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನ ನಡೆಸಿದೆ. ಇತ್ತ, ಚುನಾವಣಾ ಕಾರ್ಯಕ್ಕೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನ ಬಳಸಿದ್ದು, ಬಸ್ಸಿಲ್ಲದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಲ್ಲೆಲ್ಲೂ ಲೋಕಸಮರದ ಕಾವು ಜೋರಾಗಿದೆ. ನಾಳೆ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಚುನಾವಣೆಗೆ ಬೇಕಾದ ಸಕಲ ಸಿದ್ದತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ.

ಚುನಾವಣಾ ಕಾರ್ಯಕ್ಕೆ ಶಿಕ್ಷಕರು, ಉಪನ್ಯಾಸಕರು, ಸರ್ಕಾರಿ ನೌಕರರನ್ನು ನೇಮಕ ಮಾಡಲಾಗಿದೆ. ಹೀಗಾಗಿ, KSRTCಯ 2,100 ಬಸ್​ಗಳು ಹಾಗೂ BMTCಯ ಬರೋಬ್ಬರಿ 1,700 ಬಸ್​ಗಳು ಸೇರಿದಂತೆ ಖಾಸಗಿ ಹಾಗೂ ಶಾಲಾ ವಾಹನಗಳನ್ನ ಚುನಾವಣಾ ಸಿಬ್ಬಂದಿಗಾಗಿ ಬಳಕೆ ಮಾಡಲಾಗ್ತಿದೆ. ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನ ಬಳಕೆಗೆ ಕಿಲೋ ಮೀಟರ್ ಲೆಕ್ಕದಲ್ಲಿ ದರ ಫಿಕ್ಸ್ ಆಗಿದ್ದು, ದಿನದ ಲೆಕ್ಕದಲ್ಲಿ ಬಾಡಿಗೆ ನಿಗದಿ ಮಾಡಲಾಗಿದೆ‌. ಇನ್ನು, ಯಾವ್ಯಾವ ವಾಹನಕ್ಕೆ ಎಷ್ಟೆಷ್ಟು ಬಾಡಿಗೆ ಅಂತ ನೋಡೋದಾದ್ರೆ.

ಯಾವ ವಾಹನಕ್ಕೆ ಎಷ್ಟು ಬಾಡಿಗೆ..?

ಸರ್ಕಾರಿ ಬಸ್

ಕಿಲೋ‌ ಮೀಟರ್‌ಗೆ 57.50 ರೂಪಾಯಿ

ದಿನದ ಬಾಡಿಗೆ 11,500 ರೂಪಾಯಿ

ಖಾಸಗಿ ಬಸ್

ಬೆಂಗಳೂರಿಗೆ : ಬೆಂಗಳೂರು ಹೊರತುಪಡಿಸಿ

  • ಕಿಲೋ ಮೀಟರ್‌ಗೆ 43.50 ರೂ. : ಕಿಲೋ ಮೀಟರ್‌ಗೆ 42.50 ರೂ.
  • ದಿನದ ಬಾಡಿಗೆ 8,700 ರೂ. : ದಿನದ ಬಾಡಿಗೆ 8700 ರೂ.
  • ದಿನಕ್ಕೆ ನಿಗದಿತ ಬಾಡಿಗೆ 4,350 (ಬಸ್ ಬಳಸದಿದ್ರೆ): ದಿನಕ್ಕೆ ನಿಗದಿತ ಬಾಡಿಗೆ 5,300 (ಬಸ್ ಬಳಸದಿದ್ದರೆ)

ಲಘು ಸರಕು ವಾಹನ

ಬೆಂಗಳೂರಿಗೆ : ಬೆಂಗಳೂರು ಹೊರತುಪಡಿಸಿ

  • ಕಿಲೋ ಮೀಟರ್‌ಗೆ 29 ರೂ. : ಕಿಲೋ ಮೀಟರ್‌ಗೆ 29 ರೂ.
  • ದಿನದ ಬಾಡಿಗೆ 2,900 ರೂ. : ದಿನದ ಬಾಡಿಗೆ 2900 ರೂ.
  • ಪ್ರತಿ ಗಂಟೆಗೆ 200 ರೂ. : ಪ್ರತಿ ಗಂಟೆಗೆ 190 ರೂ.

ಮ್ಯಾಕ್ಸಿ ಕ್ಯಾಬ್

ಬೆಂಗಳೂರಿಗೆ : ಬೆಂಗಳೂರು ಹೊರತುಪಡಿಸಿ

  • ಕಿಲೋ ಮೀಟರ್‌ಗೆ 20 ರೂ. : ಕಿಲೋ ಮೀಟರ್‌ಗೆ 19 ರೂ.
  • ದಿನದ ಬಾಡಿಗೆ 4,000 ರೂ. : ದಿನದ ಬಾಡಿಗೆ 3,800 ರೂ.
  • ದಿನಕ್ಕೆ ನಿಗದಿತ ಬಾಡಿಗೆ 3,500 (ವಾಹನ ಬಳಸದಿದ್ದರೆ): ದಿನಕ್ಕೆ ನಿಗದಿತ ಬಾಡಿಗೆ 3,400 (ವಾಹನ ಬಳಸದಿದ್ದರೆ)

ಸರಕು ವಾಹನ

ಬೆಂಗಳೂರಿಗೆ : ಬೆಂಗಳೂರು ಹೊರತುಪಡಿಸಿ

  • ಕಿಲೋ ಮೀಟರ್‌ಗೆ 36 ರೂ. : ಕಿಲೋ ಮೀಟರ್‌ಗೆ 34 ರೂ.
  • ದಿನದ ಬಾಡಿಗೆ 6,400 ರೂ. : ದಿನದ ಬಾಡಿಗೆ 6,000 ರೂ.
  • ಪ್ರತಿ ಗಂಟೆಗೆ 1,100 ರೂ. : ಪ್ರತಿ ಗಂಟೆಗೆ 1,000 ರೂ.

ಮೋಟಾರ್ ಕ್ಯಾಬ್

  • ಕಿಲೋ ಮೀಟರ್‌ಗೆ 16 ರೂ. : ಕಿಲೋ ಮೀಟರ್‌ಗೆ 14.5 ರೂ.
  • ದಿನದ ಬಾಡಿಗೆ 2,800 ರೂ. : ದಿನದ ಬಾಡಿಗೆ 2,700 ರೂ.
  • ದಿನಕ್ಕೆ ನಿಗದಿತ ಬಾಡಿಗೆ 2,000 (ವಾಹನ ಬಳಸದಿದ್ದರೆ) : ದಿನಕ್ಕೆ ನಿಗದಿತ ಬಾಡಿಗೆ 1,550 (ವಾಹನ ಬಳಸದಿದ್ದರೆ)

ಸದ್ಯ, ಚುನಾವಣಾ ಕಾರ್ಯಕ್ಕೆ ಬಿಎಂಟಿಸಿ ಬಸ್ ಬಳಸಿದ ಹಿನ್ನೆಲೆ ಇಂದು ಬಿಎಂಟಿಸಿ ಬಸ್ ಸಂಚಾರ ಬಹಳ ವಿರಳವಾಗಿತ್ತು. ಹೀಗಾಗಿ, ಬೆಳ್ಳಗೆ ಕಾಲೇಜು ಹಾಗೂ ಕೆಲಸಕ್ಕೆ ಹೋಗಲು ಸರಿಯಾದ ಸಮಯಕ್ಕೆ ಬಸ್ ಸಿಗದೇ ಜನರು ಪರದಾಟ ನಡೆಸುವಂತಾಗಿತ್ತು.

ಒಟ್ನಲ್ಲಿ, ಚುನಾವಣೆಯ ಕಾವು ಒಂದು ಕಡೆ ಜೋರಾಗಿದ್ದು, ಮತ್ತೊಂದು ಕಡೆ ಸರಿಯಾದ ಸಮಯಕ್ಕೆ ಬಸ್‌ ಸಿಗದೇ ಜನ ಪರದಾಟ ನಡೆಸಿರುವುದಂತೂ ನಿಜ.

RELATED ARTICLES

Related Articles

TRENDING ARTICLES