Sunday, May 19, 2024

ಹೆಚ್.ಡಿ. ರೇವಣ್ಣ SIT ಕಸ್ಟಡಿಗೆ : ಜಡ್ಜ್ ಎದುರು ಕಣ್ಣೀರಿಟ್ಟ ರೇವಣ್ಣ

ಬೆಂಗಳೂರು : ಮಹಿಳೆ ಕಿಡ್ನಾಪ್​ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಅವರನ್ನು ಮೇ 8 ರವರೆಗೆ ಎಸ್​ಐಟಿ ಕಸ್ಟಡಿಗೆ ನೀಡಲಾಗಿದೆ.

ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ರೇವಣ್ಣ ಅವರನ್ನು ಎಸ್​ಐಟಿ ಅಧಿಕಾರಿಗಳು 17ನೇ ಎಸಿಎಂಎಂ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದರು.

ಈ ವೇಳೆ ನ್ಯಾಯಾಧೀಶರಾದ ರವೀಂದ್ರ ಕಟ್ಟಿಮನಿ ಅವರು, ಅಧಿಕಾರಿಗಳ ಮನವಿಯಂತೆ ಮೇ 8 ರವರೆಗೆ ಎಸ್​ಐಟಿ ಕಸ್ಟಡಿಗೆ ವಹಿಸುವುದಾಗಿ ಆದೇಶ ಪ್ರಕಟಿಸಿದರು. ಮೇ 9ರಂದು ಹೆಚ್​.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಬೌರಿಂಗ್ ಆಸ್ಪತ್ರೆಯಿಂದ ನೇರವಾಗಿ ರೇವಣ್ಣ ಅವರನ್ನು ಕೋರಮಂಗಲದ ಜಡ್ಜ್ ನಿವಾಸಕ್ಕೆ ಕರೆದೊಯ್ಯಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ರೇವಣ್ಣ ವಕೀಲರು ಮನವಿ ಮಾಡಿದ್ದರು. ಆದ್ರೆ, SIT ಪರ ವಕೀಲರು 15 ಅಂಶ ಉಲ್ಲೇಖಿಸಿ ಕಸ್ಟಡಿಗೆ ಕೇಳಿದ್ದರು.

ಈ ವೇಳೆ ನ್ಯಾಯಾಧೀಶರಾದ ರವೀಂದ್ರ ಕಟ್ಟಿಮನಿ ಅವರು, ರೇವಣ್ಣರನ್ನು ಮೂರು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು. ಜಡ್ಜ್ ಆದೇಶ ಮಾಡ್ತಿದ್ದಂತೆ ರೇವಣ್ಣ ಕಣ್ಣೀರಿಟ್ಟಿದ್ದಾರೆ. ಬಳಿಕ, ನ್ಯಾಯಾಧೀಶರ ನಿವಾಸದಿಂದ ರೇವಣ್ಣ ಅವರನ್ನು CID ಕಚೇರಿಗೆ ಕರೆದುಕೊಂಡು ಹೋಗಲಾಗುತ್ತದೆ. ಇನ್ನೂ ಮೂರು ದಿನಗಳ ಕಾಲ ಎಸ್​ಐಟಿ ಕಚೇರಿಯಲ್ಲೇ ರೇವಣ್ಣ ಅವರ ವಿಚಾರಣೆ ನಡೆಯಲಿದೆ.

RELATED ARTICLES

Related Articles

TRENDING ARTICLES