Sunday, May 19, 2024

ಈರುಳ್ಳಿ ರಫ್ತು ನಿಷೇಧ ತೆರವುಗೊಳಿಸಿದ ಕೇಂದ್ರ ಸರ್ಕಾರ

ಬೆಂಗಳೂರು : ಚುನಾವಣಾ ಆಯೋಗದ ಒಪ್ಪಿಗೆ ಪಡೆದ ಬಳಿಕ ಈರುಳ್ಳಿ ರಫ್ತಿನ ಮೇಲೆ ವಿಧಿಸಿದ್ದ ನಿಷೇಧವನ್ನು ಕೇಂದ್ರ ಸರ್ಕಾರವು ಹಿಂಪಡೆದಿದೆ.

ಈರುಳ್ಳಿ ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಟನ್‌ಗೆ ಕನಿಷ್ಠ 45,860 ರೂಪಾಯಿ (550 ಡಾಲರ್‌) ನಿಗದಿಪಡಿಸಲಾಗಿದೆ. ಅಲ್ಲದೆ, ಶೇ. 40ರಷ್ಟು ರಫ್ತು ಸುಂಕವನ್ನೂ ವಿಧಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಬೆಲೆ ನಿಯಂತ್ರಿಸಲು ಕೇಂದ್ರವು ಈರುಳ್ಳಿ ರಫಿಗೆ ಕಳೆದ ವರ್ಷದ ಡಿಸೆಂಬ‌ರ್ 8ರಂದು ನಿಷೇಧ ವಿಧಿಸಿತ್ತು. ಈಗ ಲೋಕಸಭಾ ಚುನಾವಣೆಯಲ್ಲಿ ರೈತರ ಮತ ಸೆಳೆಯಲು ಈ ಆದೇಶವನ್ನು ವಾಪಸ್ ಪಡೆದಿದೆ ಎಂದು ಹೇಳಲಾಗಿತ್ತು.

ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಹಾಗಾಗಿ, ಕೇಂದ್ರ ಹಣಕಾಸು ಸಚಿವಾಲಯವು ಆಯೋಗದ ಅನುಮತಿ ಪಡೆದ ಬಳಿಕವೇ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ರಾಬಿ ಅವಧಿಯಲ್ಲಿ ಉತ್ಪಾದನೆಯ ಅಂದಾಜು ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಆಧಾರದ ಮೇಲೆ ರಫ್ತು ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಹೇಳಿದೆ. ಕನಿಷ್ಠ ರಫ್ತು ದರವನ್ನು ಪ್ರತಿ ಕೆಜಿಗೆ 46 ರೂಪಾಯಿ ನಿಗದಿಪಡಿಸಿದೆ. ಅಲ್ಲದೆ, ಶೇ.40ರಷ್ಟು ರಫ್ತು ಸುಂಕವನ್ನೂ ವಿಧಿಸಿದೆ.

RELATED ARTICLES

Related Articles

TRENDING ARTICLES