Friday, May 10, 2024

ಬೇರೆಯವರನ್ನು ತುಳಿದು ಅಧಿಕಾರಕ್ಕೆ ಬಂದ್ರ ಮಾಜಿ ಸಿಎಂ ಸಿದ್ದು..?

ಚಾಮರಾಜನಗರ: ರಾಜ್ಯದೆಲ್ಲೆಡೆ ಈಗಾಗಲೇ 2023 ರ ಚುನಾವಣೆಗೆ ಭರ್ಜರಿ ತಯಾರಿಯಾಗುತ್ತಿದೆ. ಪ್ರತಿಪಕ್ಷಗಳ ವಿರುದ್ದ ರಾಜಕೀಯ ನಾಯಕರುಗಳು ಹೇಳಿಕೆಗಳನ್ನು ನೀಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.

ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಎಸ್ಟಿ‌ ಮೋರ್ಚಾ ಸಭೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು ರವರು ಮಾಜಿ ಸಿಎಂ ಸಿದ್ದು ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರಿಗೆ ನಗರದ ಸಂತೇಮರಳ್ಳಿ ವೃತ್ತದಲ್ಲೇ ಎಸ್ಟಿ ಸಮೂಹದವರು ಹಾಗೂ‌ ಅಭಿಮಾನಿಗಳು ಸನ್ಮಾನಿಸಿ ಆದ್ದೂರಿ ಸ್ವಾಗತ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಸಚಿವ ಶ್ರೀರಾಮುಲು ರವರು, ಅವರಿವರು ಕಟ್ಟೋ ಗೂಡಲ್ಲಿ ರಾಜಕಾರಣ ಮಾಡೋದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸವಾಗಿದೆ. ಬೇರೆಯವರನ್ನು ತುಳಿದು ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ. ದೇವೆಗೌಡರನ್ನು ಹಾಗೂ ಪರಮೇಶ್ವರ್  ಅವರನ್ನು ತುಳಿದಿದ್ದಾಗಿದೆ, ಈಗ ಡಿಕೆಶಿ ಅವರನ್ನು ತುಳಿಯಲು ಹೊರಟಿದ್ದಾರೆ.

ಯಾವುದೇ ಶ್ರಮ ಹಾಕದೇ ಅವರಿವರು ಕಟ್ಟೋ ಗೂಡಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ. ಜಾತಿಗಳ ಹೆಸರು, ಮಹಾನ್ ಪುರುಷರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ. ಅವರ ಸರ್ಕಾರ ಇದ್ದಾಗ ಮೀಸಲಾತಿ ಕೊಡಲಿಲ್ಲ,  ಈಗ ಪ್ರೊತ್ಸಾಹ ಕೊಟ್ಟೆವು, ಸಲಹೆ ಕೊಟ್ಟೆವು ಎನ್ನುತ್ತಾರೆ.  ಆದರೆ, ಮೀಸಲಾತಿ ಹೆಚ್ಚು ಮಾಡಬೇಕೆಂಬ ಇಚ್ಛಾಶಕ್ತಿಯೇ ಅವರಲ್ಲಿ ಇರಲಿಲ್ಲ.  ಕಾನೂನು ಬದ್ಧವಾಗಿ ಏನನ್ನು ಮಾಡಬೇಕೊ ಎಲ್ಲಾ ಕ್ರಮಗಳನ್ನು ಬೊಮ್ಮಾಯಿ ಸರ್ಕಾರ ತೆಗೆದುಕೊಂಡಿದ್ದು, ಈಗಾಗಲೇ ನಾವು ಹೊಸ ಮೀಸಲಾತಿಯಲ್ಲಿದ್ದೇವೆ. ಕಾನೂನುತ್ಮಾಕವಾಗಿ ಗಟ್ಟಿಗೊಳಿಸುತ್ತಿದ್ದೇವೆ, ಮೀಸಲಾತಿ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ನ್ನು ಜನರು ತಿರಸ್ಕರಿಸಿದ್ದು, ಕರ್ನಾಟಕದಲ್ಲೂ ಈ ಬಾರಿ ಎಲ್ಲಾ ಸಮುದಾಯವು ಕಾಂಗ್ರೆಸ್ ನ್ನು ತಿರಸ್ಕರಿಸಲಿದೆ ಎಂದು ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಈಗ ತೀರ್ವ ಚರ್ಚೆಗೆ ಒಳಗಾಗಿದೆ.

 

RELATED ARTICLES

Related Articles

TRENDING ARTICLES