Friday, May 3, 2024

PAYCM ವಿಚಾರಕ್ಕೆ ಅರುಣ್‌ ಸಿಂಗ್‌ ಫುಲ್‌ ಗರಂ

ಬೆಂಗಳೂರು : ಬಿಜೆಪಿ ಕಣ್ಣು ಇದೀಗ ೨೦೨೩ ರ ಚುನಾವಣೆಯ ಮೇಲೆ ಬಿದ್ದಿದೆ.  ಅಧಿಕಾರದ ಗದ್ದುಗೆಗೆ ಏರಲು ಕೇಸರಿ ಕಲಿಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದು, ಇಂದು ಮಹತ್ವದ ಕಾರ್ಯಕಾರಿಣಿ ಸಭೆ ನಡೆಸಿದ್ರು. ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ದಿನವಿಡೀ ಸಭೆ ನಡೆಸಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ರು. ಕಾರ್ಯಕಾರಿಣಿಗೂ ಮುನ್ನ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ ಸಿಎಂ ಎಸ್ಟಿ ಮೀಸಲಾತಿಗೆ ಗ್ರೀನ್ ಸಿಗ್ನಲ್ ನೀಡಿದ್ರು. ಆದ್ರೆ, ಎಷ್ಟು ಮೀಸಲಾತಿ ಎಷ್ಟು ನೀಡಬೇಕು ಎಂಬುದನ್ನ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ. ಇದರ ಜೊತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೋರ್ ಕಮಿಟಿಯಲ್ಲಿ ಸಲ್ಪ ಗರಂ ಅಗಿದ್ರು. ಪೇ ಸಿಎಂ ಪೋಸ್ಟರ್‌ ಅಭಿಯಾನ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಗುಡುಗಿದ್ರು.

ಇನ್ನು‌ ದಿನವಿಡೀ ಕಾರ್ಯಕಾರಿಣಿ ಸಭೆಯನ್ನ ನಡೆಸಲಾಯಿತು. ವಿವಿಧ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ ನಾಯಕರು ಸಭೆಯುದ್ದಕ್ಕೂ ಕಾಂಗ್ರೆಸ್ ವಿರುದ್ದ ಗುಡುಗಿದ್ರು. ದೇಶದಲ್ಲಿ ಭ್ರಷ್ಟಚಾರ ಪಕ್ಷ ಅಂದ್ರೆ ಕಾಂಗ್ರೆಸ್ ಪಕ್ಷ ಮಾತ್ರ ಎಂದು ಸಿಎಂ ಗುಡುಗಿದ್ರೆ, ರಾಹುಲ್ ಗಾಂಧಿಯ ಶೋ ರಾಜ್ಯದಲ್ಲಿ ನಡೆಯಲ್ಲ. ಮುಂದಿನ ಚುನಾವಣೆಯಲ್ಲಿ BJP 150 ಸ್ಥಾನ ಗೆಲ್ಲುತ್ತೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ರು.

ಇನ್ನು ಇಂದು ನಡೆದ ಕಾರ್ಯಕಾರಿಣಿಯಲ್ಲಿ ೨೦೨೩ರ ಚುನಾವಣೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯ ಬಗ್ಗೆ ಗಂಭೀರ ಚರ್ಚೆ ನಡೆಸಿದ್ರು. ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂದ್ರೆ ಯಾವ ಯಾವ ಕೆಲಸಗಳನ್ನ ಮಾಡಬೇಕು. ನಗರದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಇದು ಸ್ವಲ್ಪ ಜನರ ಮನಸ್ಸಿನಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕೆಲಸ ಮಾಡಲು ಹೆಚ್ಚು ಅನುದಾನವನ್ನ ಬಿಡುಗಡೆ ಮಾಡಬೇಕು. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡಬೇಕೆಂದು ಚರ್ಚೆ ನಡೆಸಲಾಯಿತು. ಇದರ ಜೊತೆಗೆ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಒಟ್ಟು ಆರು ಕಡೆ ವಿವಿಧ ಮೋರ್ಚಾದ ಸಮಾವೇಶ ನಡೆಸಲು ಕಾರ್ಯಕಾರಿಣಿಯಲ್ಲಿ ನಿರ್ಧಾರ ಮಾಡಲಾಯಿತು. ಇದರ ಜೊತೆಗೆ ಪಿಎಫ್‌ಐ ಬ್ಯಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಇದರ ಜೊತೆಗೆ ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಜೋಡೋ ಯಾತ್ರೆ ಬಗ್ಗೆ ಖಂಡನೆ ವ್ಯಕ್ತ ಪಡಿಸಲಾಯಿತು.

ಒಟ್ಟಾರೆ ಮುಂಬರುವ ಚುನಾವಣೆ ದೃಷ್ಟಿಯಿಂದ ಬಿಜೆಪಿ ಭರ್ಜರಿ ತಯಾರಿಗೆ ಮುನ್ನುಡಿ ಬರೆದಿದೆ. ಆದ್ರೆ, ಅತ್ತ ಕಾಂಗ್ರೆಸ್ ಸಹ ಭರ್ಜರಿ‌ ತಯಾರಿ ಮಾಡುತ್ತಿದ್ದು‌, ಅದಕ್ಕೆ ತಿರುಗೇಟು ನೀಡಲು ಬಿಜೆಪಿ ಸಹ ತಂತ್ರಗಾರಿಕೆ ಹೆಣೆಯಲಾರಂಭಿಸಿರೋದು ವಿಶೇಷ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES