Thursday, May 9, 2024

ಸಚಿವ ಮುನಿರತ್ನ ವಿರುದ್ಧ ಕೆಂಪಣ್ಣ ಕಮಿಷನ್​ ಆರೋಪ..!

ಬೆಂಗಳೂರು : ಸರ್ಕಾರದ ಟೆಂಡರ್​ಗಳಲ್ಲಿ 40% ಕಮಿಷನ್ ಕೊಡ್ಬೇಕು. ಇಲ್ಲವಾದ್ರೆ ಕಾಮಗಾರಿಗಳನ್ನೇ ಕೊಡಲ್ಲ.. ಮಾಡಿರೋ ಕೆಲಸಕ್ಕೆ ಬಿಲ್ ನೀಡ್ತಿಲ್ಲ. ಸಾಲಸೋಲ ಮಾಡಿ ಕೆಲಸ ಮಾಡಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆಂದು ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಆರೋಪಿಸಿತ್ತು. ಈ ಬಗ್ಗೆ ಪರಿಶೀಲಿಸಿ ಕ್ರಮಜರುಗಿಸುವಂತೆ ನೇರವಾಗಿ ಪ್ರಧಾನಿ ಕಚೇರಿಗೆ ಪತ್ರವನ್ನ ಬರೆದಿತ್ತು. ಇದು ಇಡೀ ರಾಜ್ಯ ಸರ್ಕಾರವನ್ನೇ ಅಲುಗಾಡಿಸಿತ್ತು. ಪ್ರತಿಪಕ್ಷಗಳಿಗೂ ಪ್ರಮುಖ ಅಸ್ತ್ರಕೊಟ್ಟಂತಾಗಿತ್ತು. ಪರ-ವಿರೋಧದ ಚರ್ಚೆಗಳು ನಡೆದು ಸೈಲೆಂಟಾಗಿತ್ತು. ಆದ್ರೀಗ ಮತ್ತೆ ಕಮಿಷನ್​ ಕದನ ಮುನ್ನೆಲೆಗೆ ಬಂದಿದೆ.

ರಾಜ್ಯ ಗುತ್ತಿಗೆದಾರರ ಸಂಘದ 25ಕ್ಕೂ ಹೆಚ್ಚು ಪದಾಧಿಕಾರಿಗಳು ಕೆಂಪಣ್ಣ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದರು. ಹಲವು ದಾಖಲೆಗಳನ್ನ ನೀಡಿ ಸರ್ಕಾರದ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸುವಂತೆ ಆಗ್ರಹಿಸಿದ್ರು. ತೋಟಗಾರಿಕೆ ಸಚಿವರ ವಿರುದ್ಧ ನೇರ ಆರೋಪ ಮಾಡಿರೋ ಕೆಂಪಣ್ಣ, ಆರ್.ಆರ್.ನಗರದಲ್ಲಿ 10 ಸಾವಿರ ಕೋಟಿ ಟೆಂಡರ್ ಆಗಿದೆ. ಮುನಿರತ್ನ ನೇರವಾಗಿಯೇ ಅಧಿಕಾರಿಗಳು, ಎಂಜಿನಿಯರ್​ಗಳಿಂದ 40% ಕಮಿಷನ್ ಕಲೆಕ್ಟ್ ಮಾಡೋಕೆ ಹೇಳಿದ್ದಾರಂತೆ ಎಂದು ಗಂಭೀರ ಆರೋಪ ಮಾಡಿದ್ದಾರೆ.. ಇದಕ್ಕೆ ತಿರುಗೇಟು ಕೊಟ್ಟಿರೋ ಮುನಿರತ್ನ, ಗುತ್ತಿಗೆದಾರರ ಸಂಘ ವಿರೋಧ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡ್ತಿದೆ. 40% ಕಮಿಷನ್ ಯಾರಿಗೆ ಕೊಟ್ಟಿದ್ದಾರೆ..? ಯಾರು ಕೇಳಿದ್ದಾರೆ..? ಹೇಳಲಿ ಎಂದು ಸವಾಲ್​ ಹಾಕಿದ್ದಾರೆ.

ಎಂಜಿನಿಯರ್​ಗಳಿಂದ 40% ಕಮಿಷನ್’​..! – ಕೆಂಪಣ್ಣ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ
‘40% ಕಮಿಷನ್ ಯಾರಿಗೆ ಕೊಟ್ಟಿದ್ದಾರೆ..?’ – ಮುನಿರತ್ನ, ತೋಟಗಾರಿಕೆ ಸಚಿವರು ಇನ್ನು 40% ಕಮಿಷನ್ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣೆ ಎದುರಿಸೋಕೆ ಕಾಂಗ್ರೆಸ್ ಪ್ಲ್ಯಾನ್​ ಮಾಡ್ತಿದೆ. ಸೆಪ್ಟಂಬರ್​ನಲ್ಲಿ ಅಧಿವೇಶನ ನಡೆಯಲಿದ್ದು, ಅಲ್ಲಿ ಈ ವಿಚಾರ ಪ್ರಸ್ತಾಪಿಸ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಇದ್ರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಇಲ್ಲವಾದ್ರೆ ನಾವು ಜನರ ಮುಂದೆ ಹೋಗ್ತೇವೆ ಅಂತ ಹೇಳಿದ್ದಾರೆ.

ಗುತ್ತಿಗೆದಾರರ ಸಂಘದ ಆರೋಪವನ್ನ ಸಿಎಂ ಬೊಮ್ಮಾಯಿ ತಳ್ಳಿಹಾಕಿದ್ದಾರೆ. ಕೆಂಪಣ್ಣನವರೊಬ್ಬರದ್ದೇ ಗುತ್ತಿಗೆದಾರರ ಸಂಘವಿಲ್ಲ. ಇನ್ನೂ ಹಲವು ಸಂಘಗಳಿವೆ. ಸಿದ್ರಾಮಣ್ಣ ಭೇಟಿ ಮಾಡಿದ್ದಾರೆ ಅಂದ್ರೆ ಅದರ ವಿಚಾರ ಬೇರೆ ಇರಲಿದೆ.. ಅವರ ಬಳಿ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ಹೋಗಲಿ. ಆಧಾರ ರಹಿತ ಹೇಳಿಕೆ ನೀಡೋದ್ರಿಂದ ಯಾವುದೇ ಪರಿಹಾರವಾಗಲ್ಲ ಅಂತ ತಿರುಗೇಟು ನೀಡಿದ್ದಾರೆ. ಪ್ರಧಾನಿಗಳಿಗೆ ಪತ್ರ ಬರೆಯೋಕೆ ಎಲ್ಲರಿಗೂ ಅಧಿಕಾರವಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಗುತ್ತಿಗೆದಾರರ ಸಂಘ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಸರ್ಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿದೆ. ಜೊತೆಗೆ ಪ್ರಧಾನಿಗೆ ಪತ್ರ ಬರೆಯೋಕೂ ಮುಂದಾಗಿದೆ. ಸಚಿವರೊಬ್ಬರ ಮೇಲೆ ನೇರ ಆರೋಪ ಹೊರಹಾಕಿದೆ. ಹೀಗಾಗಿ ಸರ್ಕಾರ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಗೋವಿಂದ್, ಪೊಲಿಟಿಕಲ್ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES