Friday, May 10, 2024

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವೈವಿಧ್ಯಮಯ ವಿನಾಯಕ

ಬೆಂಗಳೂರು : ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗಣೇಶ ಹಬ್ಬ ಸಪ್ಪೆಯಾಗಿತ್ತು. ಹೀಗಾಗಿ ಈ ಬಾರಿ ಪಟಾಕಿ ಸಿಡಿಸಿ ತಬಲ ಬಾರಿಸಿ ಧಾಮ್‌ ಧೂಮ್ ಅಂತಾ ಹಬ್ಬ ಆಚರಿಸೋಣ ಅಂತ ಯುವಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿ ಯಲ್ಲಿರುವಂತಹ ಹಲವು ಮಾರುಕಟ್ಟೆಗಳಿಗೆ ಭೇಟಿಯನ್ನು ನೀಡಿ ತಮ್ಮಿಷ್ಟದ ಗಣಪಗಳನ್ನು ಹುಡುಕುತ್ತಿದ್ದಾರೆ. ಈ ಬಾರಿ ಮಣ್ಣಿನ ಮೂರ್ತಿಗಳಲ್ಲಿ ಶಿವನ ಅವತಾರ ಹೊಂದಿರುವಂತಹ ವಿಶೇಷ ವಿನಾಯಕ, ಹುಲಿ ವೇಶದಲ್ಲಿರುವ ಗಣಪ, ಹೀಗೆ ನೂರೆಂಟು ಡಿಸೈನ್‌ಗಳಲ್ಲಿ ಗಣಪ ರಾರಾಜಿಸುತ್ತಿದ್ದಾನೆ. ಆದ್ರೆ, ಈ ಗಣಪಗಳ ಬೆಲೆ ಮಾತ್ರ ಈ ಬಾರಿ ಡಬಲ್ ಆಗಿದೆ. ಕೊರೋನಾ ಬಳಿಕ ಗಣೇಶ ಮೂರ್ತಿಗಳ ಬೆಲೆ ಜಾಸ್ತಿಯಾಗಿದ್ದು, ಈ ಬಾರಿಯ ಗಣೇಶ ಉತ್ಸವಕ್ಕೆ ಮೂರ್ತಿಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಬುಕ್ಕಿಂಗ್‌ಗೆ ಅವಕಾಶ ಇಲ್ಲ ಅಂತ ಹೇಳಿ ಈಗಾಗಲೇ ಜನ ಬಂದು ಖರೀದಿ ಮಾಡುತ್ತಿದ್ದಾರೆ.

ನಗರದ ಆರ್ ವಿ ರಸ್ತೆಯಲ್ಲಿ ಗಣೇಶ ಮೂರ್ತಿಗಳ ವ್ಯಾಪಾರ ಶುರಾಗಿದೆ. ಮಕ್ಕಳು, ಯುವಕರು ತಂಡೋಪತಂಡವಾಗಿ ಬಂದು ಖರೀದಿಗೆ ಉತ್ಸಾಹ ತೋರಿದ್ದಾರೆ.ಕೊರೋನಾ ಕಾರಣದಿಂದ ಬಾಕಿಯಾಗಿದ್ದ ಮೂರ್ತಿಗಳನ್ನು ಈ ಬಾರಿ ಮಾರಾಟ ಮಾಡಿ ಮುಗಿಸಲು ವ್ಯಾಪಾರಿಗಳು ಚಿಂತನೆ ನಡೆಸಿದ್ದಾರೆ. ಇತ್ತ ಗ್ರಾಹಕರು ಕೂಡ ದುಪ್ಪಟ್ಟು ಹಣವನ್ನು ಕೊಟ್ಟು ಗಣೇಶನ ಮೂರ್ತಿಗಳನ್ನು ಖರೀದಿಸಿ ಅದ್ದೂರಿಯಾಗಿ ಗಣೇಶ ಉತ್ಸವವನ್ನು ಮಾಡಲೇಬೇಕು ಅಂತ ನಿರ್ಧರಿಸಿದ್ದಾರೆ.

ಒಟ್ನಲ್ಲಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಗಣೇಶೋತ್ಸವ ಈ ಬಾರಿ ಮತ್ತೆ ರಂಗೇರಿದೆ. ಯುವಕರ ಮುಖದಲ್ಲಿ ಮಂದಹಾಸ ಮೂಡಿದ್ದು, ಹಬ್ಬದ ತಯಾರಿ ಎಲ್ಲೆಡೆ ಗರಿಗೆದರಿದೆ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೊ ಬೆಂಗಳೂರು

RELATED ARTICLES

Related Articles

TRENDING ARTICLES