Friday, May 10, 2024

ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ

ರಾಜ್ಯ : ನಾಡಿನೆಲ್ಲೆಡೆ ಇಂದು ವೈಕುಂಠ ಏಕಾದಶಿ ಸಂಭ್ರಮ ಹಿನ್ನೆಲೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ನಗರದ ವೆಂಕಟರಮಣ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಇಂದು ಮುಂಜಾನೆಯಿಂದಲೇ, ಭಕ್ತರು ದೇವಾಲಯಕ್ಕೆ ಬಂದು ಪೂಜಿಸಿ, ಆಶೀರ್ವಾದ ಪಡೆಯುತ್ತಿದ್ದಾರೆ. ಬೆಳಗ್ಗೆ ಸ್ವರ್ಗದ ಬಾಗಿಲು ತೆರೆದು, ವೈಕುಂಠನಾಥನ ದರ್ಶನವಾಗುತ್ತದೆ ಎಂಬ ಪ್ರತೀತಿ ಇರುವ ಕಾರಣ ವೈಕುಂಠಾಧಿಪತಿಗೆ ವಿಶೇಷ ಪೂಜೆ ಸಲ್ಲಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ ಭಕ್ತರು.

ಕೊಪ್ಪಳದಲ್ಲಿಯೂ ವೈಕುಂಠ ಏಕಾದಶಿಯ ಸಂಭ್ರಮ ಮೇಳೈಸಿದೆ. ನಗರದ ಕೋಟೆ ರಸ್ತೆಯ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಹೆಚ್ಚಿದ್ದು ವೆಂಕಟೇಶ್ವರನಿಗೆ ವಿಶೇಷ ಅಲಂಕಾರದ ಜೊತೆಗೆ ಪೂಜೆ ಮಾಡಲಾಗಿದೆ.

ಕೊವಿಡ್ ಹಿನ್ನೆಲೆಯಲ್ಲಿ ಗೈಡ್​ಲೈನ್ಸ್​ ಹಾಗೂ ಕೊವಿಡ್​ ಹೆಚ್ಚಳದಿಂದ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇನ್ನು ಮಾಸ್ಕ್ ಧರಿಸಿ ಕೊವಿಡ್​ ನಿಯಮಗಳನ್ನ ಪಾಲಿಸಿ ಭಕ್ತರು ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ.

ಅಲ್ಲದೇ ಮೈಸೂರಿನ ಒಂಟಿಕೊಪ್ಪಲು ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನ ಆಚರಿಸಲಾಯಿತು. ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಇಲ್ಲಿ ಶುರುವಾಯ್ತು, ದೇವಾಲಯದ ಗರುಡಗಂಭದ ಬಳಿಯೇ ಸಾರ್ವಜನಿಕರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ದೇವಾಲಯದ ಹೊರ ಭಾಗದಲ್ಲಿ ಬ್ಯಾರಿಕೇಡ್ ಹಾಕಿ ಪ್ರವೇಶ ಬಂದ್ ಮಾಡಲಾಗಿದೆ. ನಿರ್ಬಂಧದ ಬಗ್ಗೆ ದೇವಾಲಯದ ಹೊರ ಭಾಗದಲ್ಲಿ ಬ್ಯಾನರ್ ಹಾಕಿ ಪೊಲೀಸ್​ ಇಲಾಖೆ ಹಾಗೂ ದೇವಸ್ಥಾನ ಮಂಡಳಿ ಮಾಹಿತಿ ನೀಡಿದ್ದಾರೆ.

ದೇವಾಲಯದಲ್ಲಿ ಎಂದಿನಂತೆ ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ. ಸೀಮಿತ ದೇವಸ್ಥಾನ ಸಿಬ್ಬಂದಿ ಹಾಗೂ ಟ್ರಸ್ಟಿಗಳಿಗೆ ಮಾತ್ರ ದೇವಾಲಯಕ್ಕೆ ಅವಕಾಶವಿರೋ ಹಿನ್ನೆಲೆ ಭಕ್ತಾಧಿಗಳಿಗೆ ವೆಂಕಟೇಶ್ವರನ ದರ್ಶನ ಸಿಗದೆ ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES