Friday, May 10, 2024

4ನೇ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಮುಂಬೈ

ಹೈದರಾಬಾದ್​ : ಐಪಿಎಲ್ 12ನೇ ಆವೃತ್ತಿಯ ಫೈನಲ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್​ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹೈದರಾಬಾದ್​ನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 149ರನ್​ ಗಳನ್ನು ಮಾಡಿತು. ಮುಂಬೈ ಪರ ಕಿರಾನ್ ಪೊಲಾರ್ಡ್ ಅಜೇಯ 41, ವಿಕೆಟ್ ಕೀಪರ್ ಡಿಕಾಕ್ 29, ಇಶಾನ್ ಕಿಶಾನ್ 23 ರನ್ ಗಳಿಸಿದರು. ಇನ್ನುಳಿದ ಬ್ಯಾಟ್ಸ್​ಮನ್​ ಗಳಾರು 20ರ ಗಡಿ ದಾಟಲಿಲ್ಲ.
ಚೆನ್ನೈ ಪರ ದೀಪಕ್ ಚಹಾರ್ 3, ಶಾರ್ದುಕ್ ಟಾಕುರ್ ಹಾಗೂ ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಕಿತ್ತು ಮುಂಬೈ ರನ್ ಓಟಕ್ಕೆ ಬ್ರೇಕ್ ಹಾಕಿದ್ರು. ಬಳಿಕ 149ರನ್​ಗಳ ಬೆನ್ನತ್ತಿದ ಚೆನ್ನೈ ಪರ ಶೇನ್ ವ್ಯಾಟ್ಸನ್ (80) ಏಕಾಂಗಿ ಹೋರಾಟ ನಡೆಸಿದರು. ಆದರೆ, ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಚೆನ್ನೈ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್​ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. 1 ರನ್​ ಗಳ ರೋಚಕ ಗೆಲುವು ಪಡೆದ ಮುಂಬೈ 4ನೇ ಬಾರಿ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಈ ಹಿಂದೆ ಮುಂಬೈ 2013, 2015, 2017ರಲ್ಲಿ ಚಾಂಪಿಯನ್ ಆಗಿತ್ತು.

RELATED ARTICLES

Related Articles

TRENDING ARTICLES