ಚಾಮರಾಜನಗರ: ಹಸು ಮೇಯಿಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಚಂದಕವಾಡಿ ಗ್ರಾಮದ ಕಾಳಿಕಾಂಬ ಕಾಲೋನಿಯಲ್ಲಿ ನಡೆದಿದೆ.
ಚಿಕ್ಕತಾಯಮ್ಮ ಮತ್ತು ಜಯಮ್ಮ ಎಂಬುವರು ಹಸು ಮೇಯಿಸುತ್ತಿರುವ ವೇಳೆಯಲ್ಲಿ ಹುಲಿ ದಾಳಿ ಮಾಡಿದ್ದು,ಇಬ್ಬರು ಮಹಿಳೆಯರಿಗೆ ತೀವ್ರ ಗಾಯವಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನೂ ಸ್ಥಳಕ್ಕೆ ಬಿಆರ್ಟಿ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.