Friday, May 10, 2024

‘ದಾರಿ ತಪ್ಪಿದ ಮೊಮ್ಮಗ’ನ ನೀಚತನಕ್ಕೆ ಜನರೆಲ್ಲಾ ಛೀ.. ಥೂ..! ಕಣ್ಣೀರಿಟ್ಟ ಸಂತ್ರಸ್ತೆಯರು

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್​​​ ರೇವಣ್ಣರ ಕಾಮ ಜಗತ್ತು ಬಗೆದಷ್ಟು ಬಯಲಾಗ್ತಿದೆ. ಹಾಸನ ಜಿಲ್ಲೆಯಾದ್ಯಂತ ಎಲ್ಲಿ ನೋಡಿದ್ರೂ ಪೆನ್​ಡ್ರೈವ್​ಗಳು. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವ್ಯಾಪಕವಾಗಿ ಹಂಚಿಕೆ ಆಗಿದೆ. ತಮ್ಮ ಕ್ಷೇತ್ರದ ಸಂಸದನ ಮೃಗೀಯ ವರ್ತನೆಗೆ ಜನರು ಫುಲ್ ಶಾಕ್​​​ ಆಗಿದ್ದಾರೆ. ನೂರಾರು ಹೆಣ್ಮಕ್ಕಳಿಗೆ ಆದ ಅನ್ಯಾಯಕ್ಕೆ ಮಿಡಿದಿರೋ ನಿಮ್ಮ ಪವರ್ ಟಿವಿ ಮತ್ತಷ್ಟು ಎಕ್ಸ್​ಪೋಸ್​ ಮಾಡಿದೆ.

ಇದು ಕಣ್ಣೀರಿಡುತ್ತಿರೋ ಒಬ್ಬ ಮಹಿಳೆಯ ಮಾತಲ್ಲ. ಹಾಸನದ ಹಾದಿಬೀದಿಯಲ್ಲಿ ಇಂಥದ್ದೊಂದು ಗುಸುಗುಸು ಚರ್ಚೆ ಆಗ್ತಿದೆ. ಹೇಳಿಕೊಳ್ಳಲಾಗದ ಇಂಥ ವೇದನೆ ಅದೆಷ್ಟು ಯುವತಿಯರದ್ದೋ. ಅದೆಷ್ಟು ಅಮಾಯಕ ಮಹಿಳೆಯರು ಹೀಗೆ ಒಳಗೊಳಗೇ ಸಂಕಟ ಪಡ್ತಿದ್ದಾರೋ ಗೊತ್ತಿಲ್ಲ.

ದಾರಿ ತಪ್ಪಿದ ಮೊಮ್ಮಗನ ಭಯಾನಕ ಚರಿತ್ರೆಯನ್ನ ಪವರ್​ ಟಿವಿ ಮಾತ್ರ ಬಿಚ್ಚಿಟ್ಟಿದೆ. ಹಾಸನ ಸಂಸದನ ಭಂಡತನಕ್ಕೆ ಸ್ಥಳೀಯ ಜನರೇ ಬೆಚ್ಚಿದ್ದಾರೆ. ಆತನ ವಿಕೃತಿಯ ಹೀನ ಕೃತ್ಯಗಳೆಲ್ಲಾ ಎಲೆಕ್ಷನ್​ ಮೊದಲೇ ಬಟಾಬಯಲಾಗಿವೆ. ಹಾಗಿದ್ರೂ ಯಾರೊಬ್ಬರೂ ಸೊಲ್ಲೆತ್ತಿಲ್ಲ ಅಂದ್ರೆ ಈತ, ಈತನ ಕುಟುಂಬದ ಹವಾ ಎಂಥದ್ದು ಅಂತಾ ಅರ್ಥ ಆಗುತ್ತಲ್ವಾ. ಆದ್ರೆ ಪವರ್​ ಟಿವಿ ಈತನ ಕೃತ್ಯ ಬಿಚ್ಚಿಟ್ಟಿದ್ದೇ ತಡ, ಸಂತ್ರಸ್ತ ಮಹಿಳೆಯರು ಧಾವಿಸಿದ್ರು. ತಮ್ಮ ಗೋಳು ತೋಡಿಕೊಂಡು ಆತನ ನೀಚ ಕೃತ್ಯಗಳನ್ನ ಬಯಲು ಮಾಡಿದ್ರು.

ಪವರ್ ಟಿವಿ​ ವರದಿಗೆ ಡಿಕೆಶಿ ಶ್ಲಾಘನೆ

ಸಂಸದನ ಘನಂದಾರಿ ಕೃತ್ಯಗಳನ್ನೆಲ್ಲಾ ಹೇಳುತ್ತಾ ಅಮಾಯಕ ಸಂತ್ರಸ್ತೆ ಕಣ್ಣೀರಾದ್ರು. ಪವರ್​ ಟಿವಿಯ ಈ ದಿಟ್ಟ ವರದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯಿಸಿದ್ರು. ವಿಪಕ್ಷ ನಾಯಕರು ಈಗ್ಯಾಕೆ ಮಾತಾಡ್ತಿಲ್ಲ ಅಂತಾ ಕ್ಲಾಸ್​ ತೆಗೆದುಕೊಂಡ್ರು. ಶಿವಮೊಗ್ಗದಲ್ಲಿ ಮಾತಾಡಿದ ಕಾಂಗ್ರೆಸ್​ ವಕ್ತಾರ ಆಯನೂರು ಮಂಜುನಾಥ್​ ಕೂಡ ಕಿಡಿಕಾರಿದ್ರು. ಇನ್ನು ಮಾಜಿ ಪ್ರಧಾನಿ ಕುಟುಂಬದ ಕುಡಿಯ ವಿರುದ್ಧ ಮೊದಲ ಬಾರಿ ಹಾಸನದಲ್ಲಿ ಬಹಿರಂಗ ವಾಕ್ಸಮರ ಕೇಳಿಬಂದಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಸುದ್ದಿಗೋಷ್ಠಿ ಮಾಡಿ ಪ್ರಜ್ವಲ್​ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ರು.

ವಿಶೇಷ ತಂಡ ರಚನೆಗೆ ಸರ್ಕಾರ ತೀರ್ಮಾನ

ಇಡೀ ಪ್ರಕರಣ ಬೆಳಕಿಗೆ ಬರುತ್ತಲೇ ಮಹಿಳಾ ಆಯೋಗ ಎಚ್ಚೆತ್ತಿದೆ. ಈಗಾಗಲೇ ತನಿಖೆಗೆ ವಿಶೇಷ ತಂಡ ರಚಿಸುವಂತೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸಿಎಂಗೆ ಪತ್ರ ಬರೆದಿದ್ದರು. ಇದೀಗ ವಿಶೇಷ ತಂಡ ರಚನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದೆಲ್ಲದರ ಮಧ್ಯೆ ತಪ್ಪಿತಸ್ಥರ ವಿರುದ್ಧ ಪವರ್​ ಟಿವಿ ಹೋರಾಟ ಶುರುವಾಗಿದೆ. ಅಮಾಯಕ ಸಂತ್ರಸ್ತೆಯರ ಪರ ಪವರ್​ ಟಿವಿ ನಿಂತಿದೆ. ತಮ್ಮ ಗೋಳು ತೋಡಿಕೊಂಡಿರೂ ಸಂತ್ರಸ್ತೆಯರು ಕೂಡ, ಪ್ರಜ್ವಲ್​ಗೆ ಶಿಕ್ಷೆ ಆಗ್ಲೇಬೇಕು ಅಂತಾ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ.

RELATED ARTICLES

Related Articles

TRENDING ARTICLES