Monday, May 6, 2024

ಸುಮಲತಾ ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೇ : ಕುಮಾರಸ್ವಾಮಿ

ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೆವು. ಆದರೂ ಅವರು ಪ್ರಚಾರಕ್ಕೆ ಬಂದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್’ಡಿ.ಕುಮಾರಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ.

ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಗ್ರಾಮದಲ್ಲಿ ಶುಕ್ರವಾರ ಮತದಾನದ ಪ್ರಕ್ರಿಯೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ಸಪೋರ್ಟ್ ಮಾಡುತ್ತಿಲ್ಲ ಎಂಬ ದೇವೇಗೌಡರ ಹೇಳಿಕೆ ಹಾಗೂ ಸುಮಲತಾ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ರಣಹೇಡಿ ಎಂದ ವ್ಯಕ್ತಿ ರಾತ್ರೋರಾತ್ರಿ ಕದ್ದುಮುಚ್ಚಿ ಗಿಫ್ಟ್ ಕೂಪನ್, ಹಣ, ದೇವರ ಲಾಡು ಹಂಚುತ್ತಿದ್ದಾರೆ!:HDK

ನಾನು ಮೈಸೂರಿನ ಮೋದಿ ಕಾರ್ಯಕ್ರಮದಲ್ಲೂ ಕೂಡ ಸುಮಲತಾ ಅವರನ್ನು ಎರಡು ದಿನ ಪ್ರಚಾರಕ್ಕೆ ಬರುವಂತೆ ಕೋರಿದ್ದೆ. ಆದರೆ, ಅವರು ಪ್ರಚಾರಕ್ಕೆ ಯಾಕೇ ಬರಲಿಲ್ಲ ಎಂಬುದು ನನಗೆ ಗೊತ್ತಿಲ್ಲ. ಇವತ್ತು ಬೆಂಗಳೂರಿನಿಂದ ಬಂದು ಸುಮಲತಾ ಅವರು ನನಗೆ ಮತ ಹಾಕಿದ್ದಾರೆ. ಹೀಗಾಗಿ ನಾನು ರಾಜ್ಯದಲ್ಲೇ ಅತ್ಯಂತ ಬಹುಮತಗಳಿಂದ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES