Sunday, May 5, 2024

ಪ್ರಜ್ವಲ್ ರೇವಣ್ಣ ನನ್ನ ಮೈ ಎಲ್ಲಾ ಮುಟ್ಟುತ್ತಿದ್ರು : ಸಂತ್ರಸ್ತ ಮಹಿಳೆ

ಬೆಂಗಳೂರು : ಹಾಸನದಲ್ಲಿ ಲೈಂಗಿಕ ಕ್ರಿಯೆ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಸಂತ್ರಸ್ತ ಮಹಿಳೆ, ಸಂಸದ ಪ್ರಜ್ವಲ್​​​ ರೇವಣ್ಣರ ಕರಾಳ ಮುಖ ಬಿಚ್ಚಿಟ್ಟಿದ್ದಾರೆ.

ನಾನು ರೇವಣ್ಣ ಅವರ ಮನೆಯಲ್ಲಿ ಇದ್ದೆ. ಈ ವೇಳೆ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಹೆಚ್​.ಡಿ. ರೇವಣ್ಣ ನನ್ನ ಮೈ ಎಲ್ಲಾ ಮುಟ್ಟುತ್ತಿದ್ರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಾನು ಐದು ವರ್ಷ ಹಾಸ್ಟೆಲ್​ನಲ್ಲಿ ಇದ್ದೆ. ಹಾಸ್ಟೆಲ್​ನಿಂದ ಕರೆದುಕೊಂಡು ಅವರ ಮನೆಯಲ್ಲಿ ಇಟ್ಟುಕೊಂಡಿದ್ದರು. ರೇವಣ್ಣ ಅವರ ಮನೆಯಲ್ಲಿ ಮೂರು ವರ್ಷ ಇದ್ದೆ. ಭವಾನಿ ರೇವಣ್ಣ ಹಾಗೂ ರೇವಣ್ಣ ತುಂಬಾ ಕಿರುಕುಳ ಕೊಟ್ಟರು ಎಂದು ದೂರಿದ್ದಾರೆ.

ರೇವಣ್ಣ ಹಾಗೂ ಪ್ರಜ್ವಲ್ ಮೈ ಎಲ್ಲಾ ಮುಟ್ಟಲು ಬರುತ್ತಿದ್ದರು. ಅವರಿಬ್ಬರೂ ನನ್ನ ಜೊತೆಗೆ ಕೆಟ್ಟದಾಗಿ ನಡೆದುಕೊಳ್ತಿದ್ರು. ಅವರ ಮನೆಯಲ್ಲಿ ಅಕ್ಕ-ತಂಗಿಯರು ಇಲ್ವಾ? ಹೆಣ್ಮಕ್ಕಳಿಲ್ವಾ? ನನಗೆ ಏನಾದರೂ ತೊಂದರೆಯಾದರೆ ಪ್ರಜ್ವಲ್ ರೇವಣ್ಣ, ಅವರ ತಂದೆ ಹೆಚ್​.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ನೇರ ಕಾರಣ ಎಂದು ಹೆಚ್​.ಡಿ. ರೇವಣ್ಣ ಕುಟುಂಬದ ವಿರುದ್ಧ ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ.

ವಿಕೃತ ಕಾಮಿಯ ಕಾಮ ಕೀಟಲೆ

ಸಂಸದ ಪ್ರಜ್ವಲ್ ರೇವಣ್ಣರ ಕಾಮಪುರಾಣ ಕೆದಕಿದಷ್ಟೂ ಅಶ್ಲೀಲ, ಅಸಭ್ಯವಾಗಿದೆ. ವಿಕೃತ ಕಾಮಿಯ ಕಾಮ ಕೀಟಲೆಗೆ ಅದೆಷ್ಟೋ ಮಂದಿ ಹೆಣ್ಣು ಮಕ್ಕಳು ನಲುಗಿ ಹೋಗಿದ್ದಾರೆ. ಇವರ ಒತ್ತಡಕ್ಕೆ ಒಳಗಾಗಿ ಹಲವು ಮಹಿಳೆಯರು ಸಹಕರಿಸಿದ್ದಾರೆ. ಒತ್ತಡಕ್ಕೆ ಬಲಿಯಾಗದೆ ಸಹಕರಿಸದವರ ಮೇಲೆ ಸಂಸದ ಅತ್ಯಾಚಾರ ಎಸೆಗಿದ್ದಾನೆ.

RELATED ARTICLES

Related Articles

TRENDING ARTICLES