Wednesday, May 1, 2024

ಜೈ ಶ್ರೀರಾಮ್ ಘೋಷಣೆ ಪ್ರಕರಣವನ್ನ ‘ಬಿಜೆಪಿಯ ಬೇಳೆ’ ಎಂದ ಸಚಿವ ಮಹದೇವಪ್ಪ

ಚಾಮರಾಜನಗರ : ಜೈ ಶ್ರೀರಾಮ್ ಘೋಷಣೆ ಕೂಗಿದ ಹಿಂದೂ ಯುವಕರ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಯುವಕರ ಮೇಲಿನ ಹಲ್ಲೆಯನ್ನ ಬಿಜೆಪಿಯ ಬೇಳೆ ಎಂದು ಟೀಕಿಸಿದ್ದಾರೆ.

ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇಂತಹ ರಾಜಕೀಯ ಬೇಳೆಯಿಂದ ಜನರನ್ನ ಹೊಡೆದು ಆಳುವಂತಹ ಬಿಜೆಪಿಯ ಆಟ ಬಹಳ ದಿನ ನಡಿಯಲ್ಲ. ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚಾರ ವಿಚಾರಗಳಿಗೆ ಮುಕ್ತ ಅವಕಾಶ ಇದೆ. ಯಾರ್ಯಾರು ಈ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಾರೆ, ಅವರಿಗೆ ಕಾನೂನು ತನ್ನ ಕ್ರಿಯೆ ಮಾಡುತ್ತೆ ಎಂದು ಹೇಳಿದ್ದಾರೆ.

ಮೋದಿ ಗ್ಯಾರಂಟಿಗಳು ಸುಳ್ಳಿನ ಗ್ಯಾರಂಟಿಗಳು

ಪ್ರಧಾನಿ ಮೋದಿ ಗ್ಯಾರಂಟಿಗಳು ಸುಳ್ಳಿನ ಗ್ಯಾರಂಟಿಗಳು. ಮೋದಿ ಬೆಲೆ ಏರಿಕೆ ಕಡಿಮೆ ಮಾಡಿದ್ದಾರಾ..? 15 ಲಕ್ಷವನ್ನು ಜನರ ಖಾತೆಗೆ ಹಾಕಿದ್ದಾರಾ..? ಪ್ರತಿವರ್ಷ ಎರಡು ಕೋಟಿ ಉದ್ಯೋಗವನ್ನ ಯುವಕರಿಗೆ ಕೊಟ್ಟಿದ್ದಾರಾ..? ರೈತರ ಆದಾಯ ಡಬಲ್ ಮಾಡಿದ್ದಾರಾ..? ಇವೆಲ್ಲ ಅವರೇ ಹೇಳಿದ್ದು, ಅವರೇ ಹೇಳಿದ್ದ ಮಾತಿಗೆ ವಿರುದ್ಧ ಆದ್ರೆ, ಇವೆಲ್ಲ ಸುಳ್ಳಿನ ಗ್ಯಾರಂಟಿಗಳೇ ಎಂದು ಬಿಜೆಪಿ ವಿರುದ್ಧ ಸಚಿವ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES