Wednesday, May 1, 2024

GTಗೆ ಹೀನಾಯ ಸೋಲು : ಗುಜರಾತ್ ಮಣಿಸಿ 6ನೇ ಸ್ಥಾನಕ್ಕೇರಿದ ಪಂತ್ ಪಡೆ

ಬೆಂಗಳೂರು : ಗುಜರಾತ್ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು. ಅಲ್ಲದೇ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್​ 89 ರನ್​​ಗೆ ಆಲೌಟ್​ ಆಯಿತು.

90 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ 8.4 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಡೆಲ್ಲಿ ಪರ ಜಾಕ್ ಮೇಕ್ ಗಾರ್ಗ್ 20, ಹೋಪ್ 19 ಹಾಗೂ ನಾಯಕ ರಿಷಭ್ ಪಂತ್ 16 ರನ್​ ಗಳಿಸಿದರು. ಗುಜರಾತ್ ಪರ ವಾರಿಯರ್ 2, ಜಾನ್ಸನ್​ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತವರು ಅಂಗಳದಲ್ಲೇ ಅಲ್ಪ ಮೊತ್ತಕ್ಕೆ ಮುಗ್ಗರಿಸಿತು. ಗುಜರಾತ್ ಪರ ರಶೀದ್ ಖಾನ್ ಏಕಾಂಗಿ (31) ಹೋರಾಟ ನಡೆಸಿದರು. ಉಳಿದ ಬ್ಯಾಟರ್​ಗಳು ಹೆಚ್ಚು ರನ್​ ಗಳಿಸುವಲ್ಲಿ ವಿಫಲರಾದರು.

ಉಳಿದಂತೆ ನಾಯಕ ಶುಭ್​ಮನ್ ಗಿಲ್ 8, ಅಭಿನವ್ ಮನೋಹರ್ 8, ಸಹಾ 2, ಸಾಯಿ ಸುದರ್ಶನ್ 12, ರಾಹುಲ್ ತೆವಾಟಿಯ 10, ಡೇವಿಡ್ ಮಿಲ್ಲರ್ ಹಾಗೂ ಮೋಹಿತ್ ಶರ್ಮಾ 2 ರನ್ ಗಳಿಸಿದರು. ಡೆಲ್ಲಿ ಪರ ಮುಕೇಶ್ 3, ಇಶಾಂತ್ ಶರ್ಮಾ ಹಾಗೂ ಸ್ಟಬ್ಸ್​ ತಲಾ 2, ಅಕ್ಸರ್ ಪಟೇಲ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES