Tuesday, April 30, 2024

ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ : ಇಂದು ಸೋತರೆ ಪಂತ್ ಪಡೆ ಮನೆಗೆ ಫಿಕ್ಸ್?

ಬೆಂಗಳೂರು : ಗುಜರಾತ್‌ ಟೈಟಾನ್ಸ್‌ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್‌ ಪಂತ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಐಪಿಎಲ್​ನ 32ನೇ ಪಂದ್ಯ ನಡೆಯುತ್ತಿದೆ. ತವರು ಅಂಗಳದಲ್ಲಿ ಡೆಲ್ಲಿ ಮಣಿಸಿ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಲು ಶುಭ್​ಮನ್ ಗಿಲ್ ಪಡೆ ಸಜ್ಜಾಗಿದೆ.

ಗುಜರಾತ್ ಆಡಿರುವ 6 ಪಂದ್ಯಗಳಲ್ಲಿ 3 ಪಂದ್ಯ ಗೆಲುವು ಹಾಗೂ 3 ಸೋತಿದೆ. ಡೆಲ್ಲಿ ಆಡಿರುವ 6 ಪಂದ್ಯಗಳಲ್ಲಿ 2 ಪಂದ್ಯ ಗೆಲುವು ಹಾಗೂ 4 ಪಂದ್ಯ ಸೋತಿದೆ. ಗುಜರಾತ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಡೆಲ್ಲಿ 9ನೇ ಸ್ಥಾನದಲ್ಲಿದೆ. ಪ್ಲೇಆಫ್​ ರೇಸ್​ನಲ್ಲಿ ಉಳಿಯಲು ಡೆಲ್ಲಿಗೆ ಗೆಲುವು ಅನಿವಾರ್ಯವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌

ರಿಷಭ್‌ ಪಂತ್(ನಾಯಕ), ಪೃಥ್ವಿ ಶಾ, ಜೇಕ್‌ ಫ್ರೇಸರ್‌, ಟ್ರಿಸ್ಟಿನ್ ಸ್ಟಬ್ಸ್‌, ಶಾಯ್ ಹೋಪ್‌, ಅಕ್ಸರ್‌ ಪಟೇಲ್, ಸುಮಿತ್ ಕುಮಾರ್, ಕುಲ್​ದೀಪ್‌ ಯಾದವ್, ಮುಕೇಶ್‌ ಕುಮಾರ್, ಇಶಾಂತ್‌ ಶರ್ಮಾ, ಖಲೀಲ್‌ ಅಹಮದ್

ಗುಜರಾತ್‌ ಟೈಟಾನ್ಸ್‌

ಶುಭ್‌ಮನ್ ಗಿಲ್‌(ನಾಯಕ), ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಸಾಯಿ ಸುದರ್ಶನ್‌, ಅಭಿನವ್‌ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಸ್ಪೆನ್ಸರ್‌ ಜಾನ್ಸನ್, ನೂರ್‌ ಅಹಮ್ಮದ್, ಮೋಹಿತ್‌ ಶರ್ಮಾ, ಸಂದೀಪ್ ವಾರಿಯರ್

RELATED ARTICLES

Related Articles

TRENDING ARTICLES