Monday, May 6, 2024

MI Vs CSK ಫೈಟ್ : ಹಾಲಿ-ಮಾಜಿ ಚಾಂಪಿಯನ್ ಕಾಳಗದಲ್ಲಿ ಗೆಲ್ಲೋದು ಯಾರು? ಕಾಮೆಂಟ್ ಮಾಡಿ

ಬೆಂಗಳೂರು : ಇಂದು ಭಾನುವಾರವಾದ್ದರಿಂದ ಐಪಿಎಲ್​ನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಹಾಗೂ ಮಾಜಿ ಚಾಂಪಿಯನ್​ ತಂಡಗಳು ಕಾದಾಡಲಿವೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕಾಗಿ ಧೋನಿ ಹಾಗೂ ರೋಹಿತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಉಭಯ ತಂಡಗಳು ಐಪಿಎಲ್​ ಇತಿಹಾಸದಲ್ಲಿ ಈವರೆಗೆ 36 ಬಾರಿ ಮುಖಾಮುಖಿಯಾಗಿವೆ. ಮುಂಬೈ ಇಂಡಿಯನ್ಸ್​ 20 ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ 16 ಪಂದ್ಯಗಳನ್ನು ಗೆದ್ದಿದೆ. ಪ್ರಸಕ್ತ ಟೂರ್ನಿಯಲ್ಲಿ ಚೆನ್ನೈ 5 ಪಂದ್ಯಗಳನ್ನು ಆಡಿದ್ದು, 3 ಗೆಲುವು ಹಾಗೂ 2 ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮುಂಬೈ 5 ಪಂದ್ಯ ಆಡಿದ್ದು, ಹ್ಯಾಟ್ರಿಕ್ ಸೋಲಿನ ಬಳಿಕ 2 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

CSK vs MI ಬಲಾಬಲ

  • ಒಟ್ಟು ಪಂದ್ಯ : 36
  • ಮುಂಬೈ ಇಂಡಿಯನ್ಸ್‌ : 20 ಗೆಲುವು
  • ಚೆನೈ ಸೂಪರ್ ಕಿಂಗ್ಸ್ : 16 ಗೆಲುವು

ವಾಂಖೆಡೆ ಸ್ಟೇಡಿಯಂ (ಮುಂಬೈ)

  • ಒಟ್ಟು ಪಂದ್ಯ : 11
  • ಡೆಲ್ಲಿ ಕ್ಯಾಪಿಟಲ್ಸ್ : 7 ಗೆಲುವು
  • ಚೆನೈ ಸೂಪರ್ ಕಿಂಗ್ಸ್ : 4 ಗೆಲುವು

ಚಿದಂಬರಂ ಸ್ಟೇಡಿಯಂ (ಚೆನ್ನೈ )

  • ಒಟ್ಟು ಪಂದ್ಯ : 8
  • ಮುಂಬೈ ಇಂಡಿಯನ್ಸ್‌ : 5 ಗೆಲುವು
  • ಚೆನೈ ಸೂಪರ್ ಕಿಂಗ್ಸ್ : 3 ಗೆಲುವು

ಚೆನ್ನೈ ಸೂಪರ್ ಕಿಂಗ್ಸ್

ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಡೆರೆಲ್ ಮಿಚೆಲ್, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಅಂಜಿಕ್ಯ ರಹಾನೆ, ಶಿವಂ ದುಬೆ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಮುಸ್ತಾಫಿಜುರ್ ರೆಹಮಾನ್, ಮಹೇಶ ಪತಿರಣ

ಮುಂಬೈ ಇಂಡಿಯನ್ಸ್

ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಇಶನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಗೋಪಾಲ್, ಪಿಯೂಷ್ ಚಾವ್ಲಾ

RELATED ARTICLES

Related Articles

TRENDING ARTICLES