Thursday, May 9, 2024

ನಾಮಪತ್ರ ಹಿಂಪಡೆದ ಬಿಎಸ್ಪಿ ಅಭ್ಯರ್ಥಿ ಪಕ್ಷದಿಂದ ಉಚ್ಛಾಟನೆ : ಮಾರಸಂದ್ರ ಮುನಿಯಪ್ಪ

ರಾಮನಗರ : ಕಾಂಗ್ರೆಸ್‌ ಅಭ್ಯರ್ಥಿಯಿಂದ ಹಣದ ಆಮಿಷಕ್ಕೆ ಒಳಗಾಗಿ ನಾಮಪತ್ರ ವಾಪಸ್‌ ಪಡೆದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬಿಎಸ್​ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ.

ನಗರದ ಜಾನಪದ ಲೋಕದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಎಸ್ಪಿ ರಾಜ್ಯ ಖಜಾಂಚಿ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರು ನಾಮಪತ್ರ ಸಲ್ಲಿಸುವಾಗ ಬಿಎಸ್‌ಪಿಯ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಬಿಎಸ್‌ಪಿಗೆ ಹೆಚ್ಚಿನ ರೀತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು ಮತ್ತು ಬಡವರ ಬೆಂಬಲ ಇದೆ. ಹೀಗಿದ್ದರೂ ಡಿಸಿಎಂ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ಹಾಗೂ ಆನೆಕಲ್‌ ಶಾಸಕ ಶಿವಣ್ಣ ಅವರಿಂದ ಹಣದ ಆಮಿಷಕ್ಕೆ ಒಳಗಾಗಿ ನಮ್ಮ ಪಕ್ಷದ ರಾಜ್ಯ ಸಮಿತಿ ಗಮನಕ್ಕೆ ಬಾರದ ರೀತಿ ನಾಮಪತ್ರ ವಾಪಸ್‌ ಪಡೆದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕೆಫೆ ಬಾಂಬ್ ಆರೋಪಿಗಳ ಬಂಧನ: NIA ಹಾಗೂ ಕರ್ನಾಟಕ ಪೊಲೀಸ್ ಕಾರ್ಯ ಶ್ಲಾಘನೀಯ:ಸಿಎಂ

ಲೋಕಸಭೆ ಚುನಾವಣೆ ಸಂಬಂಧ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರನ್ನು ರಾಮನಗರದ ಜಾನಪದ ಲೋಕದಲ್ಲಿ ಸಭೆ ನಡೆಸಲು ಆಹ್ವಾನಿಸಿ, ಸಭೆ ಆರಂಭಕ್ಕೆ 2 ತಾಸು ಮೊದಲೇ ಚುನಾವಣಾಧಿಕಾರಿಯಿಂದ ನಾಮಪತ್ರ ವಾಪಸ್‌ ಪಡೆದು, ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅಂಬೇಡ್ಕರ್‌, ಕಾನ್ಶಿರಾಂ ಮತ್ತು ಮಾಯಾವತಿ ಅವರ ಪವಿತ್ರವಾದ ಚಳುವಳಿಗೆ ದ್ರೋಹ ಮಾಡಿದ್ದಾರೆ. ಇವರನ್ನು ರಾಜ್ಯ ಖಜಾಂಚಿ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಛಾಟನೆ ಮಾಡಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ ಎಂದರು.

ಅದೇ ರೀತಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಆನೇಕಲ್‌ ವಿಧಾನಸಭೆ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಹಾಗೂ ಕೆಳಹಂತದ ಅಸೆಂಬ್ಲಿ ಸಮಿತಿಗಳನ್ನು ವಿಸರ್ಜಿಸಲಾಗಿದೆ ಎಂದರು.

RELATED ARTICLES

Related Articles

TRENDING ARTICLES