Friday, May 3, 2024

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 30 ಕೆಜಿ ಚಿನ್ನ ವಶಕ್ಕೆ ಪಡೆದ ಅಧಿಕಾರಿಗಳು!

ರಾಮನಗರ : ಬೆಂಗಳೂರು – ಮೈಸೂರು ಹೆದ್ದಾರಿಯ ಹೆಜ್ಜಾಲ ಟೋಲ್​ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹತ್ತು ಕೋಟಿಗೂ ಹೆಚ್ಚಿನ ಮೌಲ್ಯದ 30 ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದ್ದು ರಾಮನಗರದ ಹೆಜ್ಜಾಲ ಟೋಲ್​ ಬಳಿ ಚುನಾವಣಾ ಅಧಿಕಾರಿಗಳಿಂದ ವಾಹನ ತಪಾಸಣೆ ಕಾರ್ಯ ನಡೆಯುತ್ತಿದ್ದ ವೇಳೆ ಹತ್ತು ಕೋಟಿಗೂ ಹೆಚ್ಚಿನ ಮೌಲ್ಯದ 30 ಕೆಜಿ ತೂಕದ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಮಾಜಿ ಪತ್ನಿಯಿಂದ ಮಾಜಿ ಪತಿಗೆ ಜೀವನಾಂಶ ನೀಡುವಂತೆ ಕೋರ್ಟ್​ ಆದೇಶ

ಬೆಂಗಳೂರಿನಿಂದ ಮೈಸೂರಿನ ಕೆಲ ಚಿನ್ನಾಭರಣ ಮಳಿಗೆಗೆ ಚಿನ್ನ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಹೆಜ್ಜಾಲ ಟೋಲ್​ ಬಳಿ ತಪಾಸಣೆಗೆ ನಡೆಸಿದ ಚುನಾವಣಾ ಅಧಿಕಾರಿಗಳಿಗೆ ಜಿಎಸ್​ಟಿ ಬಿಲ್​ ನಲ್ಲಿ ಲೋಪ ಕಂಡು ಬಂದಿದೆ. ಈ ಚಿನ್ನಾರಣವು ಖಾಸಗಿ ಕಂಪನಿಗೆ ಸೇರಿದ ಬಂಗಾರವಾಗಿದ್ದು ಸೂಕ್ತ ದಾಖಲೆಗಳು ಇಲ್ಲದ ಕಾರಣ ಪರಿಶೀಲನೆ ಬಿಡದಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಆದಾಯ ತೆರಿಗೆ ಅಧಿಕಾರಿಗಳ ಭೇಟಿ ನೀಡಿ ಮಹಿತಿ ಪಡೆಯಲಿದ್ದಾರೆ.

RELATED ARTICLES

Related Articles

TRENDING ARTICLES