Thursday, May 9, 2024

ಜೆಡಿಎಸ್ ಪಕ್ಷ ಎಲ್ಲಿದೆಯಯ್ಯಾ? ಜೆಡಿಎಸ್​ಗೆ ಮುಕ್ತಿ ಮಾಡಿದ್ದಾಯ್ತು : ಡಿ.ಕೆ. ಶಿವಕುಮಾರ್

ಬೆಂಗಳೂರು : ಜೆಡಿಎಸ್ ಪಕ್ಷ ಎಲ್ಲಿದೆಯಯ್ಯಾ? ಜೆಡಿಎಸ್​ಗೆ ಮುಕ್ತಿ ಮಾಡಿದ್ದಾಯ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೂ ಜೆಡಿಎಸ್ ಪಕ್ಷ ಇರಲಿ ಎಂಬ ಆಸೆ ಇತ್ತು. ಈಗಲೂ ಆಸೆ ಇದೆ. ಆದರೆ, ಅವರು ಪಾರ್ಟಿಯನ್ನೇ ಡಿಸಾಲ್ವ್ ಮಾಡ್ತಿದ್ದಾರಲ್ಲ. ನಾವು ಹಿಂದೆ ಒಂದು ಬ್ಲಂಡರ್ ಮಾಡಿದ್ದೆವು, ಅದಕ್ಕಿಂತ ದೊಡ್ಡ ಬ್ಲಂಡರ್ ಜೆಡಿಎಸ್​ನವರು ಈಗ ಮಾಡ್ತಿದ್ದಾರೆ ಎಂದು ಕುಟುಕಿದರು.

ಹುಟ್ಟುವಾಗ ಜಾತಿ ಇರದೇ ಇರಬಹುದು, ಸಾಯುವಾಗ ಜಾತಿ ಬಂದೇ ಬರುತ್ತದೆ. ನಾವ್ಯಾರೂ ಈ ಜಾತಿ ಅಂತ ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಆದರೆ, ನಮ್ಮ ಅಪ್ಪ, ಅಮ್ಮ ಧರ್ಮ ಜಾತಿ ಬಂದೇ ಬರುತ್ತದೆ. ನಾಮಕರಣ ಮಾಡುವುದೂ ಒಂದು ಧರ್ಮವೇ, ಕಿವಿ ಚುಚ್ಚುವುದೂ ಒಂದು ಧರ್ಮವೇ, ಮೂಗು ಚುಚ್ಚುವದೂ ಒಂದು ಧರ್ಮವೇ. ಒಕ್ಕಲಿಗರು ಯಾರೂ ದಡ್ಡರಲ್ಲ, ಯಾವ ಜಾತಿಯವರೂ ದಡ್ಡರಲ್ಲ ಎಂದು ಹೇಳಿದರು.

ಬದುಕು ಕಟ್ಟಿಕೊಳ್ಳುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ

ವೀರಶೈವ ಇರಬಹುದು, ಎಸ್ಸಿ, ಎಸ್ಟಿ ಇರಬಹುದು ಯಾವುದೇ ಜಾತಿಯವರೂ ದಡ್ಡರಲ್ಲ. ಅವರವರ ಬೆನೆಫಿಟ್ ಏನೂ ಅಂತ ನೋಡ್ತಾರೆ. ದೇಶಕ್ಕೆ, ರಾಜ್ಯಕ್ಕೆ, ನನಗೆ ಏನು ಒಳ್ಳೆಯದಾಗುತ್ತದೆ ಎಂದು ನೋಡ್ತಾರೆ. ಬದುಕು ನೋಡ್ತಾರೆ, ಭಾವನೆ ನೋಡುವುದಿಲ್ಲ. ಬದುಕು ಕಟ್ಟಿಕೊಳ್ಳುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

RELATED ARTICLES

Related Articles

TRENDING ARTICLES