Tuesday, April 30, 2024

ಸೈಬರ್​​​​ ಪೊಲೀಸ್​ ಠಾಣೆಗೆ ಅರ್ಜುನ್​ ರೆಡ್ಡಿ ದೂರು ಕೊಟ್ಟಿದ್ಯಾಕೆ?

ಹೈದರಾಬಾದ್: ವಿಜಯ್ ದೇವರಕೊಂಡ ನಟನೆಯ ದಿ ಫ್ಯಾಮಿಲಿ ಸ್ಟಾರ್‌ ಸಿನಿಮಾ ಕುರಿತಂತೆ ತಪ್ಪು ಮಾಹಿತಿಗಳನ್ನು ಹಂಚುತ್ತಿರುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಟ ವಿಜಯ್ ದೇವರಕೊಂಡ ಅವರ ಮ್ಯಾನೇಜರ್​ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದಿ ಫ್ಯಾಮಿಲಿ ಸ್ಟಾರ್‌ ಟ್ರೋಲ್ ಆಗುತ್ತಿರುವ ಹಿನ್ನೆಲೆಯಲ್ಲಿ ವಿಜಯ್ ದೇವರಕೊಂಡ ಅಭಿಮಾನಿಗಳು ಮತ್ತು ನಟನ ಮ್ಯಾನೇಜರ್ ಇತ್ತೀಚೆಗೆ ಹೈದರಾಬಾದ್‌ನ ಮಾದಾಪುರದಲ್ಲಿರುವ ಸೈಬರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಏಪ್ರಿಲ್ 7 ರಂದು ದೂರು ದಾಖಲಿಸಲಾಗಿದೆ. ವಿಜಯ್ ಅವರ ಚಿತ್ರವು ಏ. 5ರಂದು ಬಿಡುಗಡೆಯಾಯಿತು. ದಿ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕ ನಟಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: ರಂಗೇರಿದ ಸಿನಿ ಪಾಲಿಟಿಕ್ಸ್ : ಮಂಡ್ಯದಲ್ಲಿ ‘ಕುಮಾರ ಪರ್ವ’, ದೊಡ್ಮನೆಯಲ್ಲಿ ಪಾಲಿ’ಟ್ರಿಕ್ಸ್’

ಸಿನಿಮಾ ಕುರಿತಂತೆ ತಪ್ಪು ಮಾಹಿತಿಗಳನ್ನು ಹಂಚುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ರೀತಿಯ ನೆಗೆಟಿವ್‌ ಕಮೆಂಟ್‌ಗಳಿಂದಾಗಿ ಗಲ್ಲಾಪೆಟ್ಟಿಗೆಯ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯ್ ಮತ್ತು ಮೃಣಾಲ್ ಠಾಕೂರ್ (Mrunal Thakur) ನಟನೆಯ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಸಿನಿಮಾ ಈಗ ನೆಲಕಚ್ಚಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೆಲ್ಲ ಸುಳ್ಳು ಎಂದು ತಂಡ ಆರೋಪಿಸಿದೆ.

RELATED ARTICLES

Related Articles

TRENDING ARTICLES