Friday, May 17, 2024

ಪ್ರಜ್ವಲ್ ರಾಸಲೀಲೆ : ಪ್ರಜ್ವಲ್ ‘ಕೈ-ದಳ’ ಮೈತ್ರಿಯಲ್ಲಿ ಎಂಪಿಯಾಗಿದ್ದವರು, ಕಾಂಗ್ರೆಸ್​ನವರೇ ಗೆಲ್ಲಿಸಿದ್ದಾರೆ : ಅಶೋಕ್

ಹಾವೇರಿ : ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ‌ ಪ್ರಜ್ವಲ್ ರೇವಣ್ಣ ಎಂಪಿಯಾಗಿದ್ದವರು. ಕಾಂಗ್ರೆಸ್​ನವರೇ ಇವರನ್ನು ಗೆಲ್ಲಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಕಾಗಿನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ಅವರು ಲೋಕಸಭಾ ಸದಸ್ಯರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಅವರು ಎಂಪಿ‌ ಆಗಿಲ್ಲ. ಗೆದ್ದಾದ ಮೇಲೆ ನಮ ಪಕ್ಷ ಏನು ಮಾಡಬೇಕೋ ಅದನ್ನ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಉಚ್ಛಾಟನೆ ಜೆಡಿಎಸ್ ಪಕ್ಷದ ಆಂತರಿಕ ವಿಚಾರ. ಕಾನೂನು ಕ್ರಮ ತೆಗೆದುಕೊಳ್ಳಲಿ ಅಂತ ಕುಮಾರಸ್ವಾಮಿ ಖಡಕ್ಕಾಗಿ ಹೇಳಿದ್ದಾರೆ. ತುಂಬಾ ಜನರ ದೂರು ತೆಗೆದುಕೊಳ್ಳಬೇಕಿದೆ. ಪೆನ್​ಡ್ರೈವ್ ಹೊರಬರಲು ಯಾರು ಕಾರಣ ಎನ್ನುವುದು ನನಗೆ ಗೊತ್ತಿಲ್ಲ, ಈ ವಿಚಾರ ತನಿಖೆ ಆಗಬೇಕು ಎಂದು ತಿಳಿಸಿದ್ದಾರೆ.

ಇದನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ

ಪೆನ್​ಡ್ರೈವ್ ಹಂಚುವಾಗ ಕಾಂಗ್ರೆಸ್​ನವರು ಮತ್ತು ಪೊಲೀಸರು ಮೂಖಪ್ರೇಕ್ಷರಾಗಿ ನೋಡಿದ್ದಾರೆ. ಪೆನ್​ಡ್ರೈವ್ ಹಂಚುವಾಗಲೇ ಹಿಡಿದಾಕಬೇಕಿತ್ತು. ರಾಜಕೀಯಕ್ಕೆ ಇದನ್ನು ಬಳಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ನಿಜ‌‌‌ ಎನಿಸಿದ್ದಕ್ಕೆ ಕುಮಾರಸ್ವಾಮಿ ಪ್ರಜ್ವಲ್ ಅವರನ್ನು ಉಚ್ಛಾಟನೆ ಮಾಡಿದ್ದಾರೆ. ಉಚ್ಛಾಟನೆ ನಿರ್ಧಾರವನ್ನು ನಾನು‌ ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.

ಟಿಕೆಟ್ ನೀಡಬಾರದು ಅಂತ ಯಾರು ಪತ್ರ ಬರೆದಿಲ್ಲ

ಪೊಲೀಸರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು. ದೇಶ ಬಿಟ್ಟು ಹೋಗಲು ಅವಕಾಶ ನೀಡಬಾರದಂತ ಪೊಲೀಸರು ಪತ್ರ ಬರೆಯಬೇಕಿತ್ತು. ಪ್ರಜ್ವಲ್​ ರೇವಣ್ಣಗೆ ಟಿಕೆಟ್ ನೀಡಬಾರದು ಅಂತ ಯಾರು ಪತ್ರ ಬರೆದಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಆರ್​. ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES