Tuesday, April 30, 2024

ರಂಗೇರಿದ ಸಿನಿ ಪಾಲಿಟಿಕ್ಸ್ : ಮಂಡ್ಯದಲ್ಲಿ ‘ಕುಮಾರ ಪರ್ವ’, ದೊಡ್ಮನೆಯಲ್ಲಿ ಪಾಲಿ’ಟ್ರಿಕ್ಸ್’

ಬೆಂಗಳೂರು : ಲೈಟ್ಸ್, ಕ್ಯಾಮೆರಾ, ಆಕ್ಷನ್ ಅಂತಿದ್ದ ಸಿನಿಮಾ ಮಂದಿಯೆಲ್ಲಾ ಲೈಟ್ಸ್, ಕ್ಯಾಮೆರಾ, ಎಲೆಕ್ಷನ್ ಅಂತಿದ್ದಾರೆ. ಶೂಟಿಂಗ್, ಡಬ್ಬಿಂಗ್ ಬಿಟ್ಟು, ರೋಡ್ ಶೋಗಳ ಮೂಲಕ ಪ್ರತಿ ದಿನ ಬೆವರು ಹರಿಸ್ತಿದ್ದಾರೆ ಸ್ಟಾರ್ಸ್. ಹಾಗಾದ್ರೆ ನಮ್ಮ ಕರ್ನಾಟಕದಲ್ಲಿ ಹೇಗಿದೆ ಚುನಾವಣಾ ಕಾವು? ಈ ಸ್ಟೋರಿ ಒಮ್ಮೆ ಓದಿ.

ಸಿನಿಮಾಗೂ ಪಾಲಿಟಿಕ್ಸ್​ಗೂ ಅವಿನಾಭಾವ ಸಂಬಂಧ. ಸಿನಿಮಾರಂಗದಲ್ಲಿ ಗಳಿಸಿದ ಹೆಸರು, ಹಣ, ಆಸ್ತಿ, ಅಂತಸ್ತಿನಿಂದ ತಾರೆಯರು ರಾಜಕೀಯವಾಗಿ ಬೆಳೆದ ಸಾಕಷ್ಟು ನಿದರ್ಶನಗಳಿವೆ. ಆ ಪರಂಪರೆ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲೂ ಮುಂದುವರೆಯುತ್ತಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಎಂಪಿ ಎಲೆಕ್ಷನ್ಸ್ ನಡೆಯುತ್ತಿದೆ. ಅದ್ಯಾಕೋ ಮಂಡ್ಯ ಗೌಡ್ತಿ ಚುನಾವಣಾ ಅಖಾಡದಿಂದ ಹಿಂದೆ ಸರಿದುಬಿಟ್ಟರು. ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಗೆದ್ದು ಬೀಗಿದ ಸುಮಲತಾ, ಪಾರ್ಲಿಮೆಂಟ್ ಮೆಟ್ಟಿಲೇರಿದ್ರು. ಮೋದಿಗೆ ಬಹುಬೇಗ ಹತ್ತಿರವಾಗಿ, ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಬಹುಶಃ ಕರ್ನಾಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕಾರಣಕ್ಕೆ ಸುಮಲತಾ ಮಂಡ್ಯದಿಂದ ಸ್ಪರ್ಧಿಸೋ ಕನಸನ್ನ ಕೈಬಿಟ್ರು. ಆ ಚಾನ್ಸ್ ಈಗ ದಳಪತಿ ಹೆಚ್.ಡಿ. ಕುಮಾರಸ್ವಾಮಿ ಮುಡಿಗೇರಿದೆ.

ಮಂಡ್ಯದಲ್ಲಿ ಹೊಸ ಕುಮಾರ ಪರ್ವ

ಸೂರ್ಯವಂಶ, ಗಲಾಟೆ ಅಳಿಯಂದ್ರು, ಚಂದ್ರಚಕೋರಿ ಅಂತಹ ಹಿಟ್ ಸಿನಿಮಾಗಳನ್ನ ನೀಡಿದ ನಿರ್ಮಾಪಕ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸುಮಲತಾ ಕುಮಾರಣ್ಣನಿಗೆ ಬೆಂಬಲ ಸೂಚಿಸಲು ಮುಂದಾಗಿದ್ದಾರೆ. ಮಂಡ್ಯದಲ್ಲಿ ಕುಮಾರಣ್ಣರ ಅಲೆ ಜೋರಾಗಿದೆ. ಸ್ಟಾರ್ ಚಂದ್ರು ಎದುರು ಕುಮಾರಣ್ಣ ಮಂಡ್ಯದಲ್ಲಿ ಹೊಸ ಕುಮಾರ ಪರ್ವ ಸೃಷ್ಠಿಸೋ ಮುನ್ಸೂಚನೆ ಸಿಕ್ಕಿದೆ.

ಚುನಾವಣೆಗೆ ನಿಂತು ಸೋತಿದ್ದ ಗೀತಕ್ಕೆ

ಇನ್ನು ಈ ಹಿಂದೆ ಒಮ್ಮೆ ಚುನಾವಣೆಗೆ ನಿಂತು ಹೀನಾಯವಾಗಿ ಸೋಲುಂಡು, ಆ ಕಹಿ ಘಟನೆಯನ್ನ ಮರೆಯಲಾಗದೆ ಸುಮ್ಮನಾಗಿದ್ದ ಅಣ್ಣಾವ್ರ ಸೊಸೆ ಗೀತಾ, ಇದೀಗ ಶಿವಮೊಗ್ಗ ಕ್ಷೇತ್ರದಿಂದ ಸ್ಫರ್ಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ತಮ್ಮ ಸಹೋದರ ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದು, ಅದನ್ನೇ ಬಂಡವಾಳ ಆಗಿಸಿಕೊಂಡು, ತಂದೆ ಬಂಗಾರಪ್ಪನ ಕ್ಷೇತ್ರವಾದ ಶಿವಮೊಗ್ಗದಿಂದ ಆರಿಸಿ, ಪಾರ್ಲಿಮೆಂಟ್ ಮೆಟ್ಟಿಲೇರುವ ಆಶಯ ಹೊಂದಿದ್ದಾರೆ.

ಇವರಿಬ್ಬರ ಜಗಳ ಗೀತಕ್ಕಗೆ ಲಾಭ?

ಗೀತಾ ಪಿಕ್ಚರ್ಸ್ ಬ್ಯಾನರ್ ಹುಟ್ಟಿ ಹಾಕಿ, ಅತ್ತೆ ಪಾರ್ವತಮ್ಮ ರಾಜ್ಕುಮಾರ್ ರೀತಿ ನಿರ್ಮಾಪಕಿ ಆಗುವುದಕ್ಕೆ ಮುಂದಾದ ಗೀತಕ್ಕ, ವೇದ ಅನ್ನೋ ಸಿನಿಮಾನ ನಿರ್ಮಾಣ ಮಾಡಿ ಸಕ್ಸಸ್ ಆದ್ರು. ಸದ್ಯ ಭೈರತಿ ರಣಗಲ್ ಚಿತ್ರವನ್ನ ಸಹ ಅದ್ದೂರಿಯಾಗಿ ನಿರ್ಮಾಣ ಮಾಡ್ತಿದ್ದಾರೆ. ಈ ಮಧ್ಯೆ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರ್ಜರಿ ಪ್ರಚಾರ ಕಾರ್ಯಗಳನ್ನ ಆರಂಭಿಸಿದ್ದಾರೆ. ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಸ್ಫರ್ಥಿಸುತ್ತಿದ್ದು, ಇವರಿಬ್ಬರ ಜಗಳ ಮೂರನೆಯವ್ರಿಗೆ ಲಾಭ ಅನ್ನುವಂತೆ ಗೀತಕ್ಕ ಲಾಭ ಪಡೆದ್ರೂ ಅಚ್ಚರಿಯಿಲ್ಲ.

ಶಿವಣ್ಣನ ಕನಸು ನನಸಾಗುತ್ತಾ..?

ಇನ್ನು ನಟ ಶಿವರಾಜ್ಕುಮಾರ್ ಕೂಡ ಪತ್ನಿಗೆ ಬೆಂಬಲ ನೀಡ್ತಿದ್ದು, ಶೂಟಿಂಗ್, ಡಬ್ಬಿಂಗ್ ಬಿಟ್ಟು, ಅನಾರೋಗ್ಯದ ನಡುವೆಯೂ ಭರ್ಜರಿ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಗೀತಕ್ಕ ಪಾರ್ಲಿಮೆಂಟ್ ಮೆಟ್ಟಿಲೇರುವುದನ್ನ ನೋಡೋ ಮಹದಾಸೆ ಹೊಂದಿರೋ ಶಿವಣ್ಣನ ಕನಸು ನನಸಾಗುತ್ತಾ ಅನ್ನೋದನ್ನ ಮತದಾರರೇ ತೀರ್ಮಾನಿಸಬೇಕಿದೆ.

RELATED ARTICLES

Related Articles

TRENDING ARTICLES