Thursday, May 9, 2024

ಬಂಡಾಯದ ಬಿಸಿ: ಸಿಎಂ, ಡಿಸಿಎಂ ಬಂದರೂ ಕೋಲಾರ ಪ್ರಚಾರಕ್ಕೆ ಬಾರದ ಸಚಿವ ಕೆಎಚ್​ ಮುನಿಯಪ್ಪ

ಬೆಂಗಳೂರು: ಲೋಕಸಭಾ ಚುನಾವಣೆಗೆ ಕೆಎಚ್​ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣರಿಗೆ ಟಿಕೆಟ್​ ಕೈತಪ್ಪಿದ್ದಕ್ಕಾಗಿ ಬೇಸರಗೊಂಡಿದ್ದಾರೆ. ನಿನ್ನೆಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಕೋಲಾರದಲ್ಲಿ ಪ್ರಚಾರ ನಡೆಸಿದರೂ ಕೂಡ ಸಚಿವ ಕೆಎಚ್​ ಮುನಿಯಪ್ಪ ಹಾಗೂ ಪುತ್ರಿ ಶಾಸಕಿ ರೂಪಕಲಾ ಬಂದಿಲ್ಲ.

ಕೋಲಾರಕ್ಕೆ ಬರಲ್ಲ ಚಿಕ್ಕಬಳ್ಳಾಪುರ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ ಎಂದುಕೆ.ಎಚ್​ ಮುನಿಯಪ್ಪ ಹೇಳಿದ್ದಾರೆ. ರಮೇಶ್‌ಕುಮಾರ್ & ಟೀಂ ಕೋಲಾರ ಅಭ್ಯರ್ಥಿಯನ್ನ ಗೆಲ್ಲಿಸಲಿ ಎಂದು ಸಿಎಂಗೆ ಸ್ಪಷ್ಟ ಸಂದೇಶ ಕಾರ್ಯಕ್ರಮಕ್ಕೆ ಗೈರಾಗಿ ರವಾನಿ ಸಲ್ಲಿಸಿದ್ದಾರೆ.

ಅಭ್ಯರ್ಥಿಗೆ ಹಿನ್ನಡೆಯಾದ್ರೆ ನಾನು ಹೊಣೆಯಲ್ಲ ಎಂಬ ಸಂದೇಶ ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಸಂದೇಶವನ್ನು ಮುನಿಯಪ್ಪನ ತಿಳಿಸಿದ್ದಾರೆ.

ಮುಳಬಾಗಿಲು ಕುರುಡುಮಲೈ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನಡೆಸಿದ ಬಳಿಕ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಬೈರತಿ ಸುರೇಶ್ ಸೇರಿ ಕೋಲಾರ ಜಿಲ್ಲೆಯ ಶಾಸಕರುಗಳು ಮತ್ತು ಮುಖಂಡರು ಇದ್ದರು.

RELATED ARTICLES

Related Articles

TRENDING ARTICLES