Wednesday, May 8, 2024

ನಮ್ಮ ದೌರ್ಭಾಗ್ಯ ಅಭಿವೃದ್ಧಿ ಬಗ್ಗೆ ಚರ್ಚೆ ಆಗದೇ, ವೈಯಕ್ತಿಕ ಟೀಕೆ ನಡೆಯುತ್ತಿದೆ: ಬಿ.ವೈ. ರಾಘವೇಂದ್ರ

ಶಿವಮೊಗ್ಗ: ನಮ್ಮ ದೌರ್ಭಾಗ್ಯ ಅಭಿವೃದ್ಧಿ ಬಗ್ಗೆ ಚರ್ಚೆ ಆಗದೇ, ವೈಯಕ್ತಿಕ ಟೀಕೆ ನಡೆಯುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶಿವಮೊಗ್ಗ ಕ್ಷೇತ್ರದಲ್ಲಿ ಅತ್ಯಂತ ಪ್ರಜ್ಞಾವಂತ ಮತದಾರರು ಇರುವ ಕ್ಷೇತ್ರ.ಅನೇಕ ಸಾಹಿತಿ ಮುಖ್ಯಮಂತ್ರಿಗಳಿದ್ದ ಕ್ಷೇತ್ರ. ಕೈಲಾಗದ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ.ಅವರಿಗೆ ಪ್ರಚಾರ ಮಾಡಲು ಯಾವುದೇ ವಿಚಾರ ಇಲ್ಲ ಹೀಗಾಗಿಯೇ ಆ ರೀತಿ ಮಾಡುತ್ತಿದ್ದಾರೆ. ಅತಿ ಹೆಚ್ಚಾಗಿ ಅಭಿವೃದ್ಧಿಯ ಬಗ್ಗೆ ಚರ್ಚೆಗಳ ಮಾಡಬೇಕು. ಆದರೆ ನಮ್ಮ ದೌರ್ಭಾಗ್ಯ ವೈಯಕ್ತಿಕ ಟೀಕೆಗಳು ನಡೆಯುತ್ತಿದೆ ಎಂದು ಹೇಳಿದ್ದರು.

ಕುಮಾರಸ್ವಾಮಿ ಯಡಿಯೂರಪ್ಪ ಸಮಿಶ್ರ ಸರ್ಕಾರ ಇದ್ದಾಗ ಸಾಕಷ್ಟು ಅಭಿವೃದ್ಧಿ ಆಗಿದೆ

ಈಶ್ವರಪ್ಪ ಮೋದಿ ಭಾವಚಿತ್ರ ಬಳಕೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲರಿಗೂ ಕಾನೂನಿನಲ್ಲಿ ಹಕ್ಕಿದೆ.ಯಾವ ಸಂದರ್ಭದಲ್ಲಿ ಯಾವ ಪೋಟೋ ಹಾಕಬೇಕೋ ಹಾಕಿಕೊಳ್ಳಲಿ.ಕೋರ್ಟ್ ಏನು ತೀರ್ಮಾನ ‌ಮಾಡುತ್ತದೋ ನೋಡೋಣ.ಮೋದಿ ಭಾವಚಿತ್ರ ಹಾಕಿಕೊಳ್ಳುವುದರಿಂದ ನಮ್ಮ ‌ಕಾರ್ಯಕರ್ತರಿಗೆ ಯಾವುದೇ ಗೊಂದಲ ಆಗಲ್ಲ.ಹಿಂದುತ್ವದ ಆಳ ಅಗಲ ಇದೆ.ಅದರದೇ ಆದ ಸಂಸ್ಕಾರ ಇದೆ.ಮೋದಿ ಶ್ರಮ ಇದೆ, ಅನೇಕ    ಕಾರ್ಯಕರ್ತರು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದರು.

ಚಿತ್ರದುರ್ಗ ಮಠದಲ್ಲಿ ಪ್ರಚಾರ ನಡೆಸಿದ ಹಿನ್ನೆಲೆ ಪ್ರಕರಣ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,ಚಿತ್ರದುರ್ಗದಲ್ಲಿ ಮಠದಲ್ಲಿ ಪ್ರಚಾರ ಮಾಡಿದ್ದೆ ಅಂತಾ ಚುನಾವಣಾ ನೀತಿ ಸಂಹಿತೆ ದೂರು ದಾಖಲಾಗಿತ್ತು.ಈ ಸಂಬಂಧ ಪ್ರಕರಣ ರದ್ದು ಮಾಡುವಂತೆ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದೇನೆ.ಶಿವಮೊಗ್ಗ ಜನತೆ ಮೋದಿ ಕೈ ಬಲಪಡಿಸುತ್ತಾರೆ ಎಂದರು.

ರಾಜ್ಯಾಧ್ಯಕ್ಷರು ಶಿಕಾರಿಪುರದಲ್ಲಿ ಇಂದು ಮತ್ತು ನಾಳೆ ಪ್ರಚಾರ ನಡೆಸುತ್ತಾರೆ.ಶಿಕಾರಿಪುರದ ಜನತೆ ನಾನು ಪುರಸಭೆ ಸದಸ್ಯನಾಗಿದ್ದವನನ್ನ‌ ಸಂಸತ್ ಸದಸ್ಯನಾಗಿ ಆಯ್ಕೆ ಮಾಡಿದ್ದಾರೆ.8 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುತ್ತೇನೆ ವಿಶ್ವಾಸ ವ್ಯಕ್ತಪಡಿಸಿದ್ದರು.

RELATED ARTICLES

Related Articles

TRENDING ARTICLES