Monday, May 20, 2024

ಪ್ರಜ್ವಲ್​ ಮಾಜಿ ಕಾರು ಚಾಲಕ ಕಾರ್ತಿಕ್​ ಮನೆಗೆ ಪೊಲೀಸ್​ ಬಿಗಿ ಬಂದೋಬಸ್ತ್​

ಹಾಸನ: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್​ಡ್ರೈವ್​ ಮಾಡಿಕೊಂಡಿದ್ದ ಪ್ರಜ್ವಲ್​ ಮಾಜಿ ಕಾರು ಚಾಲಕ ಕಾರ್ತಿಕ್  ಮನೆಗೆ ಪೊಲೀಸ್​ ಬಿಗಿ ಬಂದೋಬಸ್ತ್​ ಒದಗಿಸಲಾಗಿದೆ.

ಹಾಸನದ ಹೊಳೆನರಸಿಪುರ ತಾಲೂಕಿನ ಕಡವಿನ ಕೋಟೆಯಲ್ಲಿರುವ ಪ್ರಜ್ವಲ್ ಮಾಜಿ​ ಕಾರು ಚಾಲಕ ಕಾರ್ತಿಕ್, ತನ್ನ ಮನೆಯಿಂದ ಇಂದು ಮುಂಜಾನೆ ಹೊರಗಡೆ ಹೋಗಿದ್ದು ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಂದೊಬಸ್ತ್​ ಏರ್ಪಡಿಸಿದ್ದಾರೆ.

ಇದನ್ನೂ ಓದಿ: ಸಂತ್ರಸ್ತೆ ಅಪಹರಣ ಆರೋಪ : ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಪ್ರಜ್ವಲ್​ ರೇವಣ್ಣ ಅಶ್ಲೀಲ ವೀಡಿಯೋಗಳ ಪ್ರಕರಣಕ್ಕೆ ಸಂಬಂಧಿಸಿ ಹಾಗು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರ ಬಂಧನದ ಹಿನ್ನೆಲೆ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ದ ಇಂದು ರಾಜ್ಯಾದ್ಯಂತ ಜೆಡಿಎಸ್​ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಹೊಳೆನರಸಿಪುರದಲ್ಲಿರುವ ಮಾಜಿ ಕಾರು ಚಾಲಕ ಕಾರ್ತಿಕ್ ಮನೆಗೆ ಇಬ್ಬರು ಪೊಲೀಸ್​ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಪೊಲೀಸ್​ ಬಂದೊಬಸ್ತ್​ ಏರ್ಪಡಿಸಲಾಗಿದೆ.

RELATED ARTICLES

Related Articles

TRENDING ARTICLES