Monday, May 20, 2024

ರೆಸ್ಟೋರಂಟ್​ ಲೈಸನ್ಸ್​ ನವೀಕರಣಕ್ಕೆ ಲಂಚದ ಬೇಡಿಕೆ ಇಟ್ಟ PDO ಲೋಕಾಯುಕ್ತ ಬಲೆಗೆ

ಬೆಂಗಳೂರು ಗ್ರಾಮಾಂತರ: ರೆಸ್ಟೋರೆಂಟ್​ ಪರವಾನಗಿ ನವೀಕರಣ ಮಾಡುವುದಕ್ಕೆ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಓ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ಮಂಗಳವಾರ ನಡೆದಿದೆ.

ನಿರಂಜನ್​ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ, ತಾಲೂಕಿನ ಅರಳು ಮಲ್ಲಿಗೆ ಗ್ರಾ.ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸ್ಟೋರೆಂಟ್​ ಪರವಾನಗಿ ನವೀಕರಿಸುವ ಸಲುವಾಗಿ ನರಸಿಂಹಮೂರ್ತಿ ಎಂಬುವವರು ಪಿಡಿಒ ನಿರಂಜನ್​ನನ್ನು ಭೇಟಿಯಾಗಿದ್ದರು, ಈ ವೇಳೆ ಪಿಡಿಒ ನರಸಿಂಹ ಮೂರ್ತಿಗೆ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ 3.5 ಲಕ್ಷಕ್ಕೆ ಮಾತುಕತೆಯಾಗಿತ್ತು.

ಇದನ್ನೂ ಓದಿ: ವೈದ್ಯರ ಮುಂದೆ ಹೆಚ್.ಡಿ. ರೇವಣ್ಣ ಕಣ್ಣೀರು, ನಾಳೆಗೆ ರೇವಣ್ಣ ಕಸ್ಟಡಿ ಅಂತ್ಯ

ಇದೇ ವಿಚಾರವಾಗಿ ನರಸಿಂಹಮೂರ್ತಿ ಬೆಂಗಳುರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳಿಗೆ ಪಿಡಿಒ ನಿರಂಜನ್​ ವಿರುದ್ದ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಎಸ್​ಪಿ ಪವನ್​ ನೆಜ್ಜೂರ್ ನೇತೃತ್ವದಲ್ಲಿ ಕಾರ್ಯಾಚರಣೆ ಇಳಿದ ಲೋಕಾಯುಕ್ತ ಅಧಿಕಾರಿಗಳು, ಪಿಡಿಒ ನಿರಂಜನ್​​ ನಗರದ ತಾಲೂಕು ಕಚೇರಿ ಆವರಣದಲ್ಲಿ ನರಸಿಂಹಮೂರ್ತಿಯ ಬಳಿ ಲಂಚದ ಹಣ ಸ್ವೀಕರಿಸುವಾಗ ಹಣದ ಸಮೇತ  ಪಿಡಿಓ ನಿರಂಜನ್ ವಶಕ್ಕೆ ಪಡೆದು ವಿಚಾರಣೆ  ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES