Sunday, May 19, 2024

ವೈದ್ಯರ ಮುಂದೆ ಹೆಚ್.ಡಿ. ರೇವಣ್ಣ ಕಣ್ಣೀರು, ನಾಳೆಗೆ ರೇವಣ್ಣ ಕಸ್ಟಡಿ ಅಂತ್ಯ

ಬೆಂಗಳೂರು : ಮಗ ಪ್ರಜ್ವಲ್ ರೇವಣ್ಣರ ಘನಂದಾರಿ ಕೆಲಸಕ್ಕೆ ತಂದೆ ಹೆಚ್​.ಡಿ ರೇವಣ್ಣ ಪಶ್ಚಾತಾಪ ಪಡುತ್ತಿದ್ದಾರೆ. ನನ್ನ ಮಗ ಪ್ರಜ್ವಲ್ ಮಾಡಿದ ಕೆಲಸಕ್ಕೆ ನಾನು ಅನುಭವಿಸುವಂತಾಗಿದೆ ಎಂದು ಬೌರಿಂಗ್​ ಆಸ್ಪತ್ರೆಯಲ್ಲಿ ವೈದ್ಯರ ಮುಂದೆ ರೇವಣ್ಣ ಕಣ್ಣೀರಿಟ್ಟಿದ್ದಾರೆ.

SIT ವಶದಲ್ಲಿರುವ H.D. ರೇವಣ್ಣಗೆ ಇಂದು ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ನಾಲ್ಕು ದಿನಗಳಿಂದ SIT ವಶದಲ್ಲಿರುವ ರೇವಣ್ಣ ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ಹೀಗಾಗಿ, ಅಸಿಡಿಟಿಯಿಂದ ಎದೆನೋವು ಕಾಣಿಸಿಕೊಂಡಿದೆ.

ಕೂಡಲೇ ಅವರನ್ನು SIT ಕಚೇರಿಯಿಂದ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು ತಪಾಸಣೆ ನಡೆಸಿದ ವೈದ್ಯರು, ಗ್ಯಾಸ್‌ಟ್ರಿಕ್‌ ಹಾಗೂ ಜತೆಗೆ ಹರ್ನಿಯಾ ಸಮಸ್ಯೆಯೂ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ವಿಕ್ಟೋರಿಯಾ ಗ್ಯಾಸ್ಟ್ರೋಎಂಟ್ರಾಲಜಿ ವೈದ್ಯರಿಂದ ತಪಾಸಣೆ ಮಾಡಿಸಲು ಹಾಗೂ ಕಾರ್ಡಿಯಾಲಜಿಸ್ಟರ್ ಓಪಿನಿಯನ್ ತೆಗೆದುಕೊಳ್ಳಲು ಬೌರಿಂಗ್ ವೈದ್ಯರು ಸೂಚನೆ ನೀಡಿದ್ದಾರೆ. ಈ ವೇಳೆ ಮಗ ಪ್ರಜ್ವಲ್ ಕೆಲಸ ನೆನೆದು ರೇವಣ್ಣ ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದ್ದಾರೆ.

ರೇವಣ್ಣ, ಬಾಬಣ್ಣ ಮುಖಾಮುಖಿ

ಅತ್ಯಾಚಾರ ಸಂತ್ರಸ್ತೆ ಕಿಡ್ನ್ಯಾಪ್​ ಕೇಸ್​ ಸಂಬಂಧ ರೇವಣ್ಣ ಹಾಗೂ ರೇವಣ್ಣ ಆಪ್ತ ಸತೀಶ್​ ಬಾಬಣ್ಣ ಇಬ್ಬರನ್ನೂ ಮುಖಾಮುಖಿ ಕೂರಿಸಿ SIT ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೆ.ಆರ್.ನಗರ ಕಿಡ್ನಾಪ್ ಕೇಸ್​ನಲ್ಲಿ A-1 ರೇವಣ್ಣ, A-2 ಸತೀಶ್ ಬಾಬಣ್ಣ ಇಬ್ಬರನ್ನೂ SIT ತನ್ನ ವಶಕ್ಕೆ ಪಡೆದಿದೆ.

ನಾಳೆಗೆ ರೇವಣ್ಣ ಕಸ್ಟಡಿ ಅಂತ್ಯ

ಕಳೆದ 2 ಗಂಟೆಗಳಿಂದ ಇಬ್ಬರು ಆರೋಪಿಗಳನ್ನು ಕೂರಿಸಿ ಎನ್​​ಕ್ವೈರಿ ಮಾಡ್ತಿದ್ದಾರೆ. ಇಬ್ಬರೂ ಮುಖಾಮುಖಿ ಆದ್ರೂ ಸಹ ರೇವಣ್ಣ ಸತೀಶ್​ ಬಾಬಣ್ಣನನ್ನ ಮಾತಾಡಿಸಿಲ್ಲ. ಇಂದೇ ಇಬ್ಬರನ್ನು ಕರೆದೊಯ್ದು ಸ್ಪಾಟ್ ಮಹಜರು ಸಾಧ್ಯತೆ ಇದೆ. ನಾಳೆಗೆ ರೇವಣ್ಣ ಕಸ್ಟಡಿ ಅಂತ್ಯ ಹಿನ್ನೆಲೆ ಇಂದೇ ಪಂಚನಾಮೆ ನಡೆಸುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES