Wednesday, May 8, 2024

ಈಶ್ವರಪ್ಪ ಈಗಲೂ ಕಾಲ ಮಿಂಚಿಲ್ಲ ವಾಪಸ್ ಬನ್ನಿ: ಬಿ.ವೈ. ವಿಜಯೇಂದ್ರ ಮನವಿ 

ಶಿವಮೊಗ್ಗ: ಈಶ್ವರಪ್ಪ ಈಗಲೂ ಕಾಲ ಮಿಂಚಿಲ್ಲ ವಾಪಸ್ ಬನ್ನಿಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಹಿರಿಯರು ಪಕ್ಷ ಕಟ್ಟಲು ನಿಮ್ದು‌ ದೊಡ್ಡ ಪಾಲಿದೆ.ಯಾವುದೋ ಪರಿಸ್ಥಿತಿ ಸಂದರ್ಭ ಈ ಸನ್ನಿವೇಶಕ್ಕೆ ತಮ್ಮನ್ನು ದೂಡಿದೆ.ಮೋದಿ ಪ್ರಧಾನಮಂತ್ರಿ ಆಗಲು ಪಕ್ಷದ ಹಿತದೃಷ್ಟಿಯಿಂದ ತಾವು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಘವೇಂದ್ರ ಅಭಿವೃದ್ಧಿ ಬಗ್ಗೆ ಜನ ಮಾತನಾಡ್ತಿದ್ದಾರೆ.ರಾಘವೇಂದ್ರ ಈ ಬಾರಿ ಎರಡು ಲಕ್ಷದ ಅಂತರದಲ್ಲಿ ಗೆಲ್ತಾರೆ.ಈಶ್ವರಪ್ಪ ಅವರಿಗೆ ಇನ್ನು ಕಾಲ ಮಿಂಚಿಲ್ಲ ಕೈ ಜೋಡಿಸಿ ತಮಗೆ ವಿನಂತಿ ಮಾಡ್ತೇನೆ ಎಂದರು.ನಿಮ್ಮ ಸಮಸ್ಯೆ ಇದ್ದರೆ ದೆಹಲಿ ನಾಯಕರ ಜೊತೆ ಮಾತನಾಡಿ ನಾವಂತು ನಿಮ್ಮ ಜೊತೆ‌ ಇರುತ್ತೇನೆ ನೀವು ಸಹ ನಮ್ಮ ಜೊತೆ ಇರಬೇಕು ಎಂಬುದು ನಮ್ಮ ಆಸೆ ಎಂದರು.

ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಬಿಜೆಪಿ ಪರ ಒಲವು ಕಾಣ್ತಿದೆ. ಮೋದಿ ಜನಪ್ರಿಯತೆ ದಿನೇ ದಿನೆ ಹೆಚ್ಚಾಗ್ತಿದೆ.ಇದು ಕಾಂಗ್ರೆಸ್ ‌ಪಕ್ಷವನ್ನ ನಿದ್ದೆಗೆಡಿಸಿದೆ.ಕಾಂಗ್ರೆಸ್ ಪಕ್ಷ ಭ್ರಮೆಯಲ್ಲಿತ್ತು ಈಗ ಅವರಿಗೆ ನಿರಾಸೆಯಾಗಿದೆ ಎಂದರು.

ಮೋದಿ ಐದು ಕೆಜಿ ಅಕ್ಕಿ ಕೊಡ್ತಿದ್ದಾರೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಕೊಡ್ತಿದೆ.ಮನೆ ಮನೆಯಲ್ಲಿ ‌ಮೋದಿ ಬಗ್ಗೆ ಮಾತನಾಡ್ತಿದ್ದಾರೆಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಅಂತಾ ಹರಸುತ್ತಿದ್ದಾರೆ. ನಾವು ರಾಜ್ಯದಲ್ಲಿ 28 ಸ್ಥಾನಗಳನ್ನು ಗೆದ್ದು ಬರುತ್ತವೆ.ಇದರಲ್ಲಿ ಯಾವುದೇ ಅನುಮಾನ ‌ಇಲ್ಲ ಎಂದರು.

ಕಾಂಗ್ರೆಸ್ ಪಕ್ಷ ದಿಕ್ಕಾಪಾಲಾಗುತ್ತದೆ ಯಾವುದೇ ಸ್ಥಾನ ಗೆಲ್ಲಲ್ಲ.ಪ್ರಪಂಚದಲ್ಲಿ 8ನೇ ಅದ್ಬುತ ರಾಜ್ಯದಲ್ಲಿ ‌ಕಾಂಗ್ರೆಸ್ ಸ್ಥಾನ ಗೆದ್ದರೆ ಜನರು ಮೋದಿ ಗ್ಯಾರಂಟಿ ನೋಡ್ತಿದ್ದಾರೆ.ರಾಜ್ಯ ಸರ್ಕಾರದ ಗ್ಯಾರಂಟಿ ನೋಡ್ತಿಲ್ಲ ಎಂದರು.

ಪ್ರಧಾನಮಂತ್ರಿ, ಅಮಿತ್ ಶಾ ನಾಲ್ಕೈದು ಬಾರಿ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ.

ಪ್ರೀತಂಗೌಡ ಜೊತೆ ಮಾತನಾಡಿದ್ದೇನೆ. ಮೈಸೂರು ಚಾಮರಾಜನಗರ ‌ಜವಾಬ್ದಾರಿ ಕೊಟ್ಟಿದ್ದೇವೆ.ಎಲ್ಲವೂ ಸರಿ ಹೋಗುತ್ತದೆ.ಪ್ರಜ್ವಲ್ ರೇವಣ್ಣ ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ.ಪ್ರಧಾನಮಂತ್ರಿ, ಅಮಿತ್ ಶಾ ಇನ್ನು ನಾಲ್ಕೈದು ಬಾರಿ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ.ಯೋಗಿ ಆದಿತ್ಯನಾಥ್ ಸಹ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸಿದರೆ‌ ನಾವು ಬಿಡಲ್ಲ.ಗ್ಯಾರಂಟಿ ಯೋಜನೆ ಮೇಲೆ ಅಧಿಕಾರಕ್ಕೆ ಬಂದಿದ್ದೀರಾ ಅದನ್ನು ‌ಮುಂದುವರಿಸಿ.ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರಿಗೆ ಏನು ಮಾಡಿದೆಯಡಿಯೂರಪ್ಪ ಸರ್ಕಾರ ಇದ್ದಾಗ ಸಾಕಷ್ಟು ಅನುದಾನ ಕೊಟ್ಟಿತ್ತು.ನಿಮಗೆ ಏನು ದಾಡಿ ಆಗಿದೆ ಪರಿಹಾರ ಕೊಡಲು.ರೈತರಿಗೆ ಮೊದಲು‌ ಪರಿಹಾರ ಕೊಡಿ.ಕಳೆದ ಬಾರಿಗಿಂತ ರೈತರ ಆತ್ಮಹತ್ಯೆ ‌ಕಡಿಮೆ ಆಗಿದೆ ಅಂತಾರೆ ಹಾಗಾದರೆ ಅದೇ ನಿಮ್ಮ ಸಾಧನೆನಾ..? ಎಂದು ಪ್ರಶ್ನೆ ಮಾಡಿದ್ದರು.

RELATED ARTICLES

Related Articles

TRENDING ARTICLES