Thursday, May 2, 2024

Chitradurga Lok Sabha Election Survey : ವಲಸೆ ಬಂದಿರುವ ಗೋವಿಂದ ಕಾರಜೋಳರನ್ನ ಸೋಲಿಸ್ತಾರಾ ಚಂದ್ರಪ್ಪ?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರದುರ್ಗ​ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಕ್ಷೇತ್ರದ ಪರಿಚಯ :

ಲೋಕಸಭಾ ಕ್ಷೇತ್ರ: ಚಿತ್ರದುರ್ಗ

ಹಾಲಿ ಸಂಸದ: ನಾರಾಯಣಸ್ವಾಮಿ

=======================

ಬಿಜೆಪಿ ಅಭ್ಯರ್ಥಿ  : ಗೋವಿಂದ್​ ಕಾರಜೋಳ

ಕಾಂಗ್ರೆಸ್​ ಅಭ್ಯರ್ಥಿ : ಬಿ.ಎನ್. ಚಂದ್ರಪ್ಪ (ಮಾಜಿ ಎಂಪಿ)

2019 ಬಲಾಬಲ :

ಎ.ನಾರಾಯಣಸ್ವಾಮಿ :  ಬಿಜೆಪಿ : 6,26,195 : ಶೇ. 50.26

ಬಿ.ಎನ್.ಚಂದ್ರಪ್ಪ: ಕಾಂಗ್ರೆಸ್  : 5,46,017 : ಶೇ. 43.82

ಸಿ.ಯು.ಮಹಾಂತೇಶ್ : ಬಿಎಸ್ಪಿ : 8,907 : ಶೇ.  0.71

ಚಲಾವಣೆಯಾದ ಒಟ್ಟು ಮತಗಳು : 12,46,506 : ಶೇ. 70.80

ಗೆಲುವಿನ ಅಂತರ: 80,178 : ಶೇ. 6.48

ಮತದಾರರ ವಿವಿರ :

ಪುರುಷರು                : 9,21,859

ಮಹಿಳೆಯರು         : 9,27,078

ಒಟ್ಟು ಮತದಾರರು: 18,49,041

( ತೃತೀಯ ಲಿಂಗಿಗಳು : 104)

ಜಾತಿವಾರು ಲೆಕ್ಕಾಚಾರ  :

ಲಿಂಗಾಯತ : 3,01,000

ಯಾದವ: 1,93,000

ಎಸ್ಸಿ: 2,74,000

ಒಕ್ಕಲಿಗ : 1,52,000

ಎಸ್ಟಿ : 1,38,000

ಕುರುಬ  : 1,03,000

ಭೋವಿ : 53,000

ಇತರೆ : 6,25,000

ಬಿಜೆಪಿ ಪ್ಲಸ್ :

ಗೋವಿಂದ್​ ಕಾರಜೋಳ ಅನುಭವ, BSY ಆಪ್ತರು, ವಿವಾದ ರಹಿತ ವ್ಯಕ್ತಿ

ನರೇಂದ್ರ ಮೋದಿ ಅಲೆ, ಹಾಲಿ ಸಂಸದರನ್ನ ಸಚಿವರಾಗಿ ಆರಿಸಿದ್ದು

ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದ ಬಿಜೆಪಿ ಪರ ಒಲವು ಸಾಧ್ಯತೆ

ರಾಮ ಮಂದಿರ ನಿರ್ಮಾಣ, ಕೇಸರಿ ಪಡೆ ಬಗ್ಗೆ ಹೆಚ್ಚಿದ ಒಲವು

ಬಿಜೆಪಿ ಮೈನಸ್  :

ಸಚಿವರಾದ್ರೂ ಕ್ಷೇತ್ರಕ್ಕಿಲ್ಲ ಯಾವುದೇ ಮಹತ್ವದ ಯೋಜನೆ

ಟಿಕೆಟ್​ ವಂಚಿತ ರಘುಚಂದನ್ ಬೆಂಬಲಿಗರ ಒಳೇಟು ಸಾಧ್ಯತೆ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಭಾರಿ ಹಿನ್ನಡೆ

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಿದ್ದರು ರಿಲೀಸ್​ ಆಗಿಲ್ಲ  (ಬಜೆಟ್​ನಲ್ಲಿ 5,300 ಕೋಟಿ ಘೋಷಿಸಿತ್ತು)

ಕಾಂಗ್ರೆಸ್ ಪ್ಲಸ್  :

ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಯಿಂದ ವಿಶ್ವಾಸ

7 ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇರುವುದು

ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಅಹಿಂದ​ ಮತ

ಕಾಂಗ್ರೆಸ್ ಮೈನಸ್ :

ಲೋಕ ಸಮರಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲೇ ನಿರುತ್ಸಾಹ

ಪಕ್ಷದಲ್ಲಿ ಇರುವ ಬಣ ರಾಜಕೀಯ ಮತ್ತು ಮುಖಂಡರ ವೈಮನಸ್ಸು

ಮೋದಿ ಅಲೆಗೆ ಟಕ್ಕರ್ ಕೊಡಬಲ್ಲ ಸಮರ್ಥ ಅಭ್ಯರ್ಥಿಯ ಕೊರತೆ

ಗ್ಯಾರಂಟಿ ಜಾರಿ ಮಾಡಿ ಬೇರೆ ಅಭಿವೃದ್ಧಿ ಕಾರ್ಯಗಳ ಕಡೆಗಣನೆ

ಪವರ್ ಟಿವಿ ಸಮೀಕ್ಷೆ ರಿಸಲ್ಟ್​ :

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರದುರ್ಗದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ? ಈ ಬಾರಿ ಕಮಲದ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ? ಬಿಜೆಪಿ ಅಭ್ಯರ್ಥಿಗೆ ಬಂಡಾಯದ ಒಳಪೆಟ್ಟು ಬೀಳುತ್ತಾ? ಕಾಂಗ್ರೆಸ್​ ಅಭ್ಯರ್ಥಿಗೂ ಅಸಮಾಧಾನದ ಎಫೆಕ್ಟ್ ತಟ್ಟುತ್ತಾ? ಇವೆಲ್ಲದಕ್ಕು ಉತ್ತರ ಇಲ್ಲಿದೆ.

ಚಿತ್ರದುರ್ಗ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 7296

ಪುರುಷ ಮತದಾರರಿಂದ 6831, ಮಹಿಳಾ ಮತದಾರರಿಂದ 465 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3568, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 3728

ಚಿತ್ರದುರ್ಗ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 49%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 51%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಬಿಜೆಪಿ ವಿರುದ್ಧ ಕಾಂಗ್ರೆಸ್​ಗೆ 160 ಮತಗಳ ಮುನ್ನಡೆ

ಸದ್ಯದ ಟ್ರೆಂಡ್​ :

ಚಿತ್ರದುರ್ಗ ಲೋಕಸಭಾ ಫೈಟ್​ನಲ್ಲಿ ಸಮಬಲದ ಪೈಪೋಟಿ

ಬಿಜೆಪಿ-ಕಾಂಗ್ರೆಸ್​ ನಡುವಿನ ಫೈಟ್​​​ನಲ್ಲಿ ಕಾಂಗ್ರೆಸ್​ಗೆ ಅಲ್ಪ ಮುನ್ನಡೆ

ಚಿತ್ರದುರ್ಗ ಕ್ಷೇತ್ರ ಗೆಲ್ಲಲು ಉಭಯ ಪಕ್ಷಗಳ ನಡುವೆ ಬಿಗ್ ಫೈಟ್

ಸದ್ಯದ ಟ್ರೆಂಡ್​​ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅಲ್ಪ ಮುನ್ನಡೆ

ಇದು ಪವರ್ ಟಿವಿ ಸರ್ವೆಯಲ್ಲಿ ಮತದಾರರು ನೀಡಿರುವ ಸಂದೇಶ.

RELATED ARTICLES

Related Articles

TRENDING ARTICLES