Saturday, May 4, 2024

Uttara Kannada Loksabha survey 2024 : ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಾ?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 5.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಲೋಕಸಭಾ ಕ್ಷೇತ್ರದ ಪರಿಚಯ:

ಲೋಕಸಭಾ ಕ್ಷೇತ್ರ : ಉತ್ತರ ಕನ್ನಡ

ಹಾಲಿ ಸಂಸದ : ಅನಂತ ಕುಮಾರ್ ಹೆಗಡೆ

=======================

ಬಿಜೆಪಿ ಅಭ್ಯರ್ಥಿ : ವಿಶ್ವೇಶ್ವರ ಹೆಗಡೆ ಕಾಗೇರಿ

ಕಾಂಗ್ರೆಸ್​ ಅಭ್ಯರ್ಥಿ : ಅಂಜಲಿ ನಿಂಬಾಳ್ಕರ

2019 ಬಲಾಬಲ :

ಅನಂತ ಕುಮಾರ್ ಹೆಗಡೆ :  ಬಿಜೆಪಿ : 7.86,042 : ಶೇ. 68.15

ಆನಂದ ಅಸ್ನೋಟಿಕರ್ : ಜೆಡಿಎಸ್ : 3,06,393 : ಶೇ. 26.56

ನೋಟಾ ಯಾರಿಗೂ ಮತವಿಲ್ಲ : 16,017 : ಶೇ. 01.39

ಚಲಾವಣೆಯಾದ ಒಟ್ಟು ಮತಗಳು : 11,54,390 :  ಶೇ. 74.16

ಗೆಲುವಿನ ಅಂತರ : 4,79,649 : ಶೇ. 41.59

ಮತದಾರರ ವಿವರ

ಪುರುಷರು :  8,18,055

ಮಹಿಳೆಯರು : 8,10,892

ಒಟ್ಟು : 16,28,961

(ತೃತೀಯ ಲಿಂಗಿಗಳು 14 )

ಜಾತಿವಾರು ಲೆಕ್ಕಾಚಾರ

ಮುಸ್ಲಿಂ : 2.25 ಲಕ್ಷ

ಎಸ್ಸಿ, ಎಸ್ಟಿ : 2.00 ಲಕ್ಷ

ಮರಾಠ :  1.70 ಲಕ್ಷ

ಬ್ರಾಹ್ಮಣ : 1.70 ಲಕ್ಷ

ನಾಮಧಾರಿ (ಈಡಿಗ) : 1.60 ಲಕ್ಷ

ಲಿಂಗಾಯತ            : 1.50 ಲಕ್ಷ

ಮೀನುಗಾರರು : 80,000

ಹಾಲಕ್ಕಿ ಒಕ್ಕಲಿಗ : 80,000

ಬುಡಕಟ್ಟು : 55,000 (ಸಿದ್ದಿ,ಗೌಳಿ,ಕುಣಬಿ,)

ಇತರೆ : 3 ಲಕ್ಷ

ಬಿಜೆಪಿ ಪ್ಲಸ್ :

ಮೋದಿ ಅಲೆಯ ಜೊತೆ ಹಿಂದುತ್ವದ ಅಡಿಪಾಯ ಇರುವ ಕಾರ್ಯಕರ್ತರು

ಬೂತ್ ಮಟ್ಟದಲ್ಲಿ ಇರುವ ವ್ಯವಸ್ಥಿತ ಸಂಘಟನೆ, ಸ್ಥಳೀಯ ಸಂಸ್ಥೆಗಳಲ್ಲಿ ಪ್ರಭಾವ

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಕರಾವಳಿ ಭಾಗದಲ್ಲಿ ಇರುವ ಒಲವು

ವಿವಾದ ರಹಿತ, ಆರೋಪ ರಹಿತ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ

ಬಿಜೆಪಿ  ಮೈನಸ್  :

ಟಿಕೆಟ್​ ವಂಚಿತ ವರ್ಚಸ್ವಿ ಅನಂತ ಕುಮಾರ ಹೆಗಡೆ ಸೈಲೆಂಟ್​ ಆಗಿರುವುದು

6 ಬಾರಿ ಆಯ್ಕೆ ಆದ್ರೂ ಕ್ಷೇತ್ರದ ನಿರ್ಲಕ್ಷ್ಯ, ಯಾವುದೇ ಮಹತ್ವದ ಯೋಜನೆ ಇಲ್ಲ

ಬಿಜೆಪಿ ಪಕ್ಷದಲ್ಲಿನ ಹೆಚ್ಚಾದ ಆಂತರಿಕ ಕಲಹ, ಮೂಲ ವಲಸಿಗರ ಶೀತಲ ಸಮರ

ಕಾಂಗ್ರೆಸ್ ಪ್ಲಸ್ :

ಕಾಂಗ್ರೆಸ್  ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳು

ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಶಾಸಕರು ಆಯ್ಕೆ ಆಗಿರುವುದು

ಬಿಜೆಪಿಯ ಪೊಳ್ಳು ಹಿಂದುತ್ವದ ಬಗ್ಗೆ ಜನರಲ್ಲಿ ಜಾಗೃತಿಯ ಪ್ರಯತ್ನ

ಸಂಸದ ಅನಂತ ಕುಮಾರ ಹೆಗಡೆ ನಿಷ್ಕ್ರಿಯತೆ ಬಗ್ಗೆ ಹೆಚ್ಚು ಪ್ರಚಾರ

ಕಾಂಗ್ರೆಸ್ ಮೈನಸ್ :

ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿ ಕೊರತೆ ಮತ್ತು ಸಂಘಟನೆ ಇಲ್ಲ

ಹಿಂದುತ್ವದ ವಿಚಾರದಲ್ಲಿ ಬ್ಯಾಲೆನ್ಸ್ ಮಾಡುವ ಅನಿವಾರ್ಯತೆ

ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮತ್ತು ಒಗ್ಗಟ್ಟಿನ ಕೊರತೆ

ಗ್ಯಾರಂಟಿ ಜಾರಿ ಭರದಲ್ಲಿ ಅಭಿವೃದ್ಧಿ ಕಾರ್ಯಗಳೇ ಸ್ಥಗಿತ

ಪವರ್​ ಟಿವಿ ಸರ್ವೆ ರಿಸಲ್ಟ್ :

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಉತ್ತರ ಕನ್ನಡದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ? ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ? ಮಾಜಿ ಸ್ಪೀಕರ್​ ಕಾಗೇರಿ ಮಣಿಸುತ್ತಾರಾ ಅಂಜಲಿ ನಿಂಬಾಳ್ಕರ್​​​​​​? ಅಥವಾ ಈ ಬಾರಿಯೂ ಬಿಜೆಪಿಗೆ ಮಣೆ ಹಾಕ್ತಾರಾ ಕ್ಷೇತ್ರದ ಜನತೆ? ಇಲ್ಲಿದೆ ಸಂಪೂರ್ಣ ವಿವರ.

ಉತ್ತರ ಕನ್ನಡ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 7138

ಪುರುಷ ಮತದಾರರಿಂದ 6797, ಮಹಿಳಾ ಮತದಾರರಿಂದ 341 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3644, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 3494

ಉತ್ತರ ಕನ್ನಡ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 51%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 49%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಕಾಂಗ್ರೆಸ್ ವಿರುದ್ಧ ಬಿಜೆಪಿ​​ಗೆ 150 ಮತಗಳ ಮುನ್ನಡೆ

 ಸದ್ಯದ ಟ್ರೆಂಡ್​ :

ಉತ್ತರ ಕನ್ನಡ ​​ಲೋಕಸಭಾ ಫೈಟ್​ನಲ್ಲಿ ಬಿಜೆಪಿಯತ್ತ ಜನರ ಒಲವು

ಬಿಜೆಪಿ-ಕಾಂಗ್ರೆಸ್​ ನಡುವಿನ ಫೈಟ್​​​ನಲ್ಲಿ ಬಿಜೆಪಿಗೆ ಮುನ್ನಡೆ

ಇದೇ ಮೊದಲ ಬಾರಿಗೆ ಸಂಸದರಾಗುವತ್ತ ಕಾಗೇರಿ ದಾಪುಗಾಲು

ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳುವ ಮುನ್ಸೂಚನೆ

ಇದು ಪವರ್ ಸರ್ವೆಯಲ್ಲಿ ಮತದಾರರು ನೀಡಿರುವ ಸಂದೇಶ.

RELATED ARTICLES

Related Articles

TRENDING ARTICLES