Saturday, May 18, 2024

ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಯುವಕ: ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿ ಮಾಡಿರುವ ಘಟನೆ ನಡೆದಿದೆ. ಘಟನೆ ಬಳಿಕ ಎಸ್ಕೇಪ್ ಆಗಿದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕನನ್ನು ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಸದ್ದಾಂ ಹುಸೇನ್‌ ಬಂಧಿತ ಆರೋಪಿಯಾಗಿದ್ದು, ಇನ್ನು ಪೊಲೀಸರ ಕೈಯಲ್ಲಿ ಲಾಕ್​ ಆಗಿದ್ದ ಆರೋಪಿಯನ್ನ ಧಾರವಾಡಕ್ಕೆ ಶಿಫ್ಟ್ ಮಾಡುವಾಗ ದೊಡ್ಡ ಹೈಡ್ರಾಮಾವೇ ನಡೆದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ನೋಡಿದ ಸದ್ದಾಂ ಕಾಲಿಗೆ ಗುಂಡು ಹೊಡೆಯಲಾಗಿದ್ದು, ಈ ವೇಳೆ ಸಿಪಿಐ ಸಂಗಮೇಶ್​ ಹಾಗೂ ಓರ್ವ ಸಿಬ್ಬಂದಿಗೂ ಗಾಯವಾಗಿದೆ ಇವರಿಗೆ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಜೆಡಿಎಸ್ ನಾಯಕಿ ಮೇಲೆಯೇ ಅತ್ಯಾಚಾರ! : ಕಾಮುಕ ‘ಪ್ರಜ್ವಲ್’ನ ಮತ್ತೊಂದು ಕರಾಳ ಕಹಾನಿ ಬಹಿರಂಗ

ಇನ್ನು, ಆರೋಪಿ ಸದ್ದಾಂಗೆ ಗುಂಡೇಟು ಹೊಡೆದ ಬಗ್ಗೆ ಮಾಹಿತಿ ನೀಡಿದ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು, ಎಪಿಎಂಸಿ ಕೇಸ್ ಪತ್ತೆ ಹಚ್ಚಲು ಟೀಂ ಕಳಿಸಲಾಗಿತ್ತು. ಅದರಲ್ಲಿ ಒಂದು ಟೀಮ್‌ ಗೆ ಈತ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಐದಾರು ಕಿಮೀ ದೂರದಲ್ಲಿರೋದು ತಿಳಿಯುತ್ತದೆ. ಆಗ ಆತನನ್ನು ಬಂಧಿಸಿ ಕರೆತರಲು ತೆರಳಿದ್ದರು. ಆ ವೇಳೆಯಲ್ಲಿ ವಿದ್ಯಾಗಿರಿ ಇನ್ಸ್ಪೆಕ್ಟರ್ ನೇತೃತ್ವದ ಟೀಮ್ ಹೋಗಿತ್ತು, ಮುಂದಿನ ತನಿಖೆಗೆ ಠಾಣೆಗೆ ಕರೆತರಲು ಮುಂದಾಗಿದ್ದರು. ಜೀಪ್ ಹತ್ತಿಸುವಾಗ ಪೊಲೀಸ್ ಸಿಬ್ಬಂದಿಗೆ ಪೆನ್ ನೈಫ್ ನಿಂದ ಎಡ ಭುಜಕ್ಕೆ ಚುಚ್ಚಿದ್ದಾನೆ, ಪೊಲೀಸ್ ಕಾನ್ಸ್​ಟೇಬಲ್​ ಅರುಣ ಮೇಲೆ ಮೊದಲು ಹಲ್ಲೆ ಮಾಡುತ್ತಾನೆ. ಆಗ ಕಂಟ್ರೋಲ್ ಮಾಡಲು ಕೆಳಗೆ ತಳ್ಳಿದ್ದಾರೆ. ಆಗ ಅದೇ ಚಾಕುವಿನಿಂದ ಇನ್ಸ್​​ಪೆಕ್ಟರ್ ಗೆ ಮಂಡಿ ಮತ್ತು ಬೆನ್ನ ಮೇಲೆ ಹಲ್ಲೆ ಮಾಡುತ್ತಾನೆ. ಆರೋಪಿಯನ್ನು ಕಂಟ್ರೋಲ್ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆದರೂ ತಪ್ಪಿಸಿಕೊಳ್ಳಲು ಮುಂದಾಗಿದ್ದಾಗ, ಆಗ ಎಡಗಾಲಿಗೆ ಫೈರ್ ಮಾಡಿದ್ದಾರೆ. ಆರೋಪಿ ಸೇರಿ ಮೂರು ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದರು.

RELATED ARTICLES

Related Articles

TRENDING ARTICLES