Saturday, May 18, 2024

ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ರೇವಣ್ಣ ನಿವಾಸದಲ್ಲಿ SITಯಿಂದ ಸಂತ್ರಸ್ತೆಯೊಂದಿಗೆ ಸ್ಥಳ ಮಹಜರು

ಹಾಸನ; ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್​ ಮತ್ತು ರೇವಣ್ಣ ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತೆ ದೂರು ಆಧರಿಸಿ ಇಂದು ಸಂತ್ರಸ್ತೆಯನ್ನು ಸ್ಥಳ ಮಹಜರಿಗೆ SIT ಕರೆದೊಯ್ದಿದೆ.

ಹಾಸನದ ಹೊಳೆನರಸೀಪುರದಲ್ಲಿರುವ ಮಾಜಿ ಸಚಿವ, ಪ್ರಕರಣದ ಎ1 ಆರೋಪಿ ಹೆಚ್​.ಡಿ ರೇವಣ್ಣ ಅವರ ನಿವಾಸಕ್ಕೆ ಇಂದು SIT ತನಿಖಾ ತಂಡ ಈ ಹಿಂದೆ ರೇವಣ್ಣ ಅವರ ನಿವಾಸದಲ್ಲಿ ಮನೆಗೆಲಸ ಮಾಡುತ್ತಿದ್ದ ಸಂತ್ರಸ್ತೆ ಜೊತೆಗೆ ಭೇಟಿ ನೀಡಿದ್ದು ಲೈಂಗಿಕ ದೌರ್ಜನ್ಯ ನಡೆದ ಸ್ಥಳಗಳನ್ನು ಮಹಜರು ಮಾಡುತ್ತಿದೆ.

ಇದನ್ನೂ ಓದಿ: ರೇವಣ್ಣ, ಪ್ರಜ್ವಲ್​ ಇಬ್ಬರೂ ಒಕ್ಕಲಿಗರು ತಲೆತಗ್ಗಿಸುವ ಕೆಲಸ ಮಾಡಿದ್ದಾರೆ: ಶಿವರಾಮೇಗೌಡ

ಇನ್ನು ಈ ವೇಳೆ ಸಂತ್ರಸ್ತೆ ಪ್ರಜ್ವಲ್​ ಮತ್ತು ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ ಜಾಗಗಳು ಎನ್ನಲಾದ ಮನೆಯ ಅಡುಗೆ ಕೋಣೆ, ಬೆಡ್​ ರೂಂ ಸೇರಿ ಹಲವು ಸ್ಥಳಕ್ಕೆ ಪರಿಶೀಲನೆ ನಡೆಯುತ್ತಿದೆ. ಈ ವೇಳೆ ತನಿಖಾ ತಂಡ ಸಂತ್ರಸ್ತೆ ತೋರಿಸಿದ ಎಲ್ಲಾ ಜಾಗಗಳನ್ನು ವೀಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದೆ.

ಹೊಳೆನರಸೀಪುರದಲ್ಲೆ ಇರುವ ಭವಾನಿ ರೇವಣ್ಣ:

ಪ್ರಜ್ವಲ್ ರೇವಣ್ಣ ಕಾಮಲೀಲೆಗಳ ಪೆನ್​ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಇಂದು ವಿಶೇಷ ತನಿಖಾ ತಂಡ ಇಂದು ಸಂತ್ರಸ್ತೆಯೊಂದಿಗೆ ಹೊಳೆನರಸೀಪುರ ನಿವಾಸಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೇವಣ್ಣ ಪತ್ನಿ ಭವಾನಿ ರೇವಣ್ಣ ಮನೆಯಲ್ಲಿ ಇರುವುದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES