Saturday, May 18, 2024

ಮೇ 10ರೊಳಗೆ ವಿಚಾರಣೆಗೆ ಬರಲು​​​ ಪ್ರಜ್ವಲ್ ಪ್ಲ್ಯಾನ್​​​

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ವಿದೇಶದಲ್ಲಿದ್ದುಕೊಂಡೇ ವಕೀಲರ ಸಲಹೆ ಪಡೆಯುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಮೇ 10ರೊಳಗೆ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲೇ ವಿದೇಶಕ್ಕೆ ತೆರಳಿರುವ ಪ್ರಜ್ವಲ್, ಏಪ್ರಿಲ್ 27ರಿಂದ ಇಲ್ಲಿವರೆಗೂ ವಿದೇಶದಲ್ಲಿದ್ದುಕೊಂಡೇ ಕಾನೂನು ತಜ್ಞರ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ದೆಹಲಿ, ಬೆಂಗಳೂರಿನ ನುರಿತ ವಕೀಲರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಈ ಮಧ್ಯೆ, ವಕೀಲರ ಸಲಹೆಯಂತೆ ಮೇ 10ರೊಳಗೆ ದೇಶಕ್ಕೆ ಬಂದು ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ಜೆಡಿಎಸ್ ನಾಯಕಿ ಮೇಲೆಯೇ ಅತ್ಯಾಚಾರ! : ಕಾಮುಕ ‘ಪ್ರಜ್ವಲ್’ನ ಮತ್ತೊಂದು ಕರಾಳ ಕಹಾನಿ ಬಹಿರಂಗ

ವಿಚಾರಣೆಗೆ ಹಾಜರಾಗುವಂತೆ ಭವಾನಿಗೆ ನೋಟಿಸ್‌!:

ಅಪ್ಪ ಮಗನ ಬಳಿಕ ಭವಾನಿ ರೇವಣ್ಣಗೂ SIT ನೊಟೀಸ್ ಜಾರಿ ಮಾಡಿದೆ. K.R.ನಗರ ಠಾಣೆಯಲ್ಲಿ ಕಿಡ್ನಾಪ್​ ಪ್ರಕರಣ ದಾಖಲಾಗಿರುವ ಸಂಬಂಧ ಭವಾನಿ ರೇವಣ್ಣಗೆ SIT ನೊಟೀಸ್ ನೀಡಿದೆ. ಈಗಾಗಲೇ ಕಿಡ್ನಾಪ್​ ಪ್ರಕರಣದಲ್ಲಿ ಭವಾನಿ‌ ರೇವಣ್ಣ ಸಂಬಂಧಿ ಸತೀಶ್ ಬಾಬು ಬಂಧನ ಆಗಿದೆ. ಇದರ ಬೆನ್ನಲ್ಲೇ ಭವಾನಿ ರೇವಣ್ಣಗೆ SIT ನೊಟೀಸ್ ನೀಡಲಾಗಿದೆ. ಇಂದು ವಿಚಾರಣೆಗೆ ಹಾಜರಾಗಲು ತಿಳಿಸಿದೆ.

RELATED ARTICLES

Related Articles

TRENDING ARTICLES