Friday, May 10, 2024

ಸೋಮವತಿ ಅಮಾವಾಸ್ಯೆ : ಈ ವರ್ಷ ಭೂಕಂಪ, ಜ್ವಾಲಾಮುಖಿ, ಸುನಾಮಿ ಸಂಭವಿಸುತ್ತದೆ : ಸಿದ್ಧಲಿಂಗ ಶ್ರೀ ಭವಿಷ್ಯ

ಬೆಂಗಳೂರು : ವರ್ಷದಲ್ಲಿ ಒಂದು ಅಥವಾ ಎರಡು ಅಮಾವಾಸ್ಯೆಗಳು ವಿಶೇಷವಾಗಿ ಸೋಮವಾರ ಬರುತ್ತವೆ. ಇಂತಹ ಅಪರೂಪದ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ಎಂದು ಕರೆಯಲಾಗುತ್ತದೆ.

ಅದರಂತೆ ಏಪ್ರಿಲ್ 8 ರಂದು ಸೋಮವಾರ ಸೋಮವತಿ ಅಮಾವಾಸ್ಯೆ ಇರುತ್ತದೆ. ಇದು ವಿಶೇಷ ಮಹತ್ವವನ್ನು ಹೊಂದಿದೆ. ಅಮಾವಾಸ್ಯೆ ಯಾವಾಗ ಪ್ರಾರಂಭ? ವಿಶೇಷತೆ ಹಾಗೂ ಫಲಗಳ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್​ ಟಿವಿಗೆ ಮಾಹಿತಿ ನೀಡಿದ್ದಾರೆ.

ಸೋಮವತಿ ಅಮಾವಾಸ್ಯೆ ವಿಶೇಷತೆಗಳು ಮತ್ತು ಫಲಗಳು

ಕರ್ನಾಟಕದ ಮೇಲೆ ಸಂಪೂರ್ಣ ಸೂರ್ಯಗ್ರಹಣದ ಪ್ರಭಾವಗಳೇನು?

ಭೂಕಂಪ, ಸುನಾಮಿ, ಜ್ವಾಲಾಮುಖಿ ಸಂಭವಿಸುವ ಸಾಧ್ಯತೆ

ಬಿಸಿಲಿನ ಧಗೆಗೆ ಜನರೆಲ್ಲಾ ಅನಾರೋಗ್ಯಕ್ಕೆ ತುತ್ತಾಗುವ ಸಂಭವ

ಮಕ್ಕಳಿಗೆ ಶ್ರೀಮಠದಲ್ಲಿ ಗುರುಕುಲ ಪದ್ಧತಿಯ ಶಿಕ್ಷಣ

ಪಿತೃದೇವತೆಯ ಆರಾಧನೆ ಮಾಡಬೇಕು

ಸೋಮವತಿ ಅಮಾವಾಸ್ಯೆ ದಿನ ವಿಶೇಷವಾಗಿ ಪಿತೃದೇವತೆಯ ಆರಾಧನೆ ಮಾಡಬೇಕು. ಇದರಿಂದ ಪಿತೃದೋಷ ನಿವಾರಣೆ ಆಗುತ್ತದೆ.ವಿಷ್ಣುವಿಗೆ ಸೋಮವತಿ ಅಮಾವಾಸ್ಯೆಯಂದು ಹಳದಿ ವಸ್ತ್ರವನ್ನು ಸಮರ್ಪಿಸುವುದರಿಂದ ಮಹಾಲಕ್ಷ್ಮೀ ಕೃಪೆ ಉಂಟಾಗುತ್ತದೆ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES