Friday, May 10, 2024

ಗಿಲ್ ಅಬ್ಬರ.. ಪಂಜಾಬ್ ಕಿಂಗ್ಸ್​ಗೆ ಬೃಹತ್ ಟಾರ್ಗೆಟ್

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್​ ನಾಯಕ ಶುಭ್​ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 17ನೇ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟಿಂಗ್ ಮಾಡಿತು.

ಇನ್ನಿಂಗ್ಸ್​ ಆರಂಭಿಸಿದ ಗುಹರಾತ್​ಗೆ ಉತ್ತಮ ಆರಂಭ ಸಿಗಲಿಲ್ಲ. ವೃದ್ಧಿಮಾನ್ ಸಹಾ 11 ರನ್​ ಗಳಿಸಿ ಔಟಾದರು. ಬಳಿಕ ಗಿಲ್​ ಜೊತೆಯಾದ ಕಿವೀಸ್ ಬ್ಯಾಟರ್ ವಿಲಿಯಮ್ಸನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. 26 ರನ್​ ಗಳಿಸಿದ್ದ ವಿಲಿಯಮ್ಸನ್​ ಸಹ ಬೇಗ ಔಟಾದರು.

ಬಳಿಕ ಒಂದಾದ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿ ಪಂಜಾಬ್ ಬೌಲರ್​ಗಳನ್ನು ಕಾಡಿದರು. ಸಾಯಿ ಸುದರ್ಶನ್ 19 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನೊಂದಿಗೆ 33 ರನ್​ ಚಚ್ಚಿದರು. ಆದರೆ, ಸಾಯಿ ಆರ್ಭಟಕ್ಕೆ ಹರ್ಷಲ್ ಪಟೇಲ್ ಬ್ರೇಕ್ ಹಾಕಿದರು. ಬಳಿಕ ಕ್ರೀಸ್​ಗೆ ಬಂದ ವಿಜಯ್ ಶಂಕರ್ 8 ರನ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಗಿಲ್ ಆರ್ಭಟಕ್ಕೆ ಪಂಜಾಬ್ ಕಂಗಾಲು

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ಬದಿಯಲ್ಲಿ ನಾಯಕ ಶುಭ್​ಮನ್ ಗಿಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಗಿಲ್ ಅಬ್ಬರಕ್ಕೆ ಪಂಜಾಬ್ ಬೌಲರ್​ಗಳು ಕಂಗಾಲಾದರು. 48 ಎಸೆತಗಳನ್ನು ಎದುರಿಸಿದ ಗಿಲ್ 4 ಸಿಕ್ಸ್​ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 89 ರನ್​ ಸಿಡಿಸಿದರು. ಕೇವಲ 11 ರನ್​ ಗಳಿಂದ ಶತಕ ವಂಚಿತರಾದರು.

ಕೊನೆಯಲ್ಲಿ ಅಬ್ಬರಿಸಿದ ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ ಅಜೇಯ 23 ರನ್​ ಸಿಡಿಸಿದರು. ಅಂತಿಮವಾಗಿ ಗುಜರಾತ್, ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್​ ಕಲೆ ಹಾಕಿತು. ಪಂಜಾಬ್ ಪರ ರಬಾಡ 2, ಹರ್ಷಲ್ ಪಟೇಲ್ ಹಾಗೂ ಬ್ರಾರ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES