Wednesday, May 8, 2024

ಕೊಳವೆ ಬಾವಿ ತಗೆದು ಹಾಗೆ ಬಿಡ್ತಾರೆ,ಪೈಪ್ ಇದ್ರೆ ಈ ರೀತಿ ಆಗೋದಿಲ್ಲ: ಎಂ. ಬಿ ಪಾಟೀಲ್

ವಿಜಯಪುರ: ಕೊಳವೆ ಬಾವಿ ತಗೆದು ಹಾಗೆ ಬಿಡ್ತಾರೆ,ಪೈಪ್ ಇದ್ರೆ ಈ ರೀತಿ ಆಗೋದಿಲ್ಲ.ಳಗೆ ಬಾವಿ ಕಾನೂನು ಮಾಡಿದ್ದೇವೆ ಆದರೂ ಈ ರೀತಿ ಘಟನೆಗಳು ಆಗ್ತಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದರು. 

ಈಗ ಎಸ್ಪಿಯವರ ಜೊತೆ ಮಾತನಾಡಿದ್ದೇನೆ.ಅವರು ಅಲ್ಲೆ ಇದ್ದಾರೆ, ಮಗು 18-20 ಅಡಿ ಆಳದಲ್ಲಿದೆ.ಇವರು 23-24 ಅಡಿ ಆಳದಲ್ಲಿ ಕೊರೆದು ಮಗು ರಕ್ಷಿಸುವ ಕೆಲಸ ಮಾಡ್ತಿದ್ದಾರೆ.ಬಂಡೆ ಸಿಕ್ಕಿದೆ ಹೀಗಾಗಿ ಸ್ವಲ್ಪ ಕಷ್ಟ ಆಗ್ತಿದೆ.

ಎರಡು ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದ ಘಟನೆಯ ಬಗ್ಗೆ ಪ್ರತಿಕ್ರಿಯೆಸಿದ ಅವರು, ಮಗು ಮೂಮೆಂಟ್ ಇದೆ, ಆಕ್ಸಿಜನ್ ಸಪ್ಲೈ ಮಾಡ್ತಿದ್ದಾರೆ ದೇವರಲ್ಲಿ ಪ್ರಾರ್ಥನೆ ಮಾಡೋಣ ಡಿಸಿ,ಎಸ್ಪಿ ರಕ್ಷಣಾ ಕಾರ್ಯಾಚರಣೆಯ ಮಾಡ್ತಿದ್ದಾರೆ.ಸ್ಥಳೀಯರೆಲ್ಲರೂ ಸೇರಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದರು.

ಬಂಡೆ ಸಿಕ್ಕಿದ್ದರಿಂದ ಸ್ವಲ್ಪ ವಿಳಂಬ ಆಗ್ತಿದೆ

ಎನ್ ಡಿ ಆರ್ ಎಫ್ ಜೊತೆಗೆ ಸ್ಥಳೀಯರು ಸಹಕರಿಸುತ್ತಿದ್ದಾರೆ.ಕೊಳಗೆ ಬಾವಿ ಕಾನೂನು ಮಾಡಿದ್ದೇವೆಆದರೂ ಈ ರೀತಿ ಆಗ್ತಿದೆ,ಕೊಳವೆ ಬಾವಿ ಕೊರೆಸಿ ನೀರು ಸಿಗದಿದ್ದರೆ ಅದನ್ನ ಮುಚ್ಚಬೇಕು.ಆದರೆ ಜನರು ಮುಚ್ಚೋದಿಲ್ಲ, ಪೈಪ್ ಅನ್ನ ತೆಗೆದುಕೊಂಡು ಹಾಗೆ ಬಿಡ್ತಾರೆ.ಪೈಪ್ ಇದ್ರೆ ಈ ರೀತಿ ಆಗೋದಿಲ್ಲ ಕಾದು ನೋಡೋಣ ಏನಾಗುತ್ತೆ ಎಂದರು.

RELATED ARTICLES

Related Articles

TRENDING ARTICLES