Friday, May 10, 2024

ಮಾಂಸಹಾರ ಪ್ರಿಯರಿಗೆ ಬಿಗ್​ ಶಾಕ್​: ಕೋಳಿ, ಮೀನು ರೇಟು ಹೆಚ್ಚಳ!

ಬೆಂಗಳೂರು: ಬಿಸಿಲಿನ ತಾಪಮಾನದಿಂದ ಕೋಳಿ, ಮೀನು ದರವೂ ಏರಿಕೆಯಾಗಿದೆ.ದರ ಹೆಚ್ಚಳದಿಂದ  ಮಾಂಸಪ್ರಿಯರಿಗೆ ಕಂಗೆಡುವಂತೆ ಮಾಡಿದೆ.

ಹೌದು,ಯುಗಾದಿ ಹಾಗೂ ರಂಜಾನ್​ ಹಬ್ಬಕ್ಕೆ ಇನ್ನೂ 5 ದಿನಗಳಷ್ಟೇ ಬಾಕಿ ಇರುವದರಿಂದ ನಾನ್​ ವೆಜ್​ ಪ್ರಿಯರಿಗೆ ಬೆಲೆ ಹೆಚ್ಚಳ ಬಿಗ್ ಶಾಕ್​ ಆಗಿದೆ.ಬಿಸಿಲಿನ ತಾಪಮಾನದ ಏರಿಕೆಯಿಂದ ಸಮುದ್ರದಲ್ಲಿ ಮೀನಿನ ಕ್ಷಾಮ ಹೆಚ್ಚಾಗಿದೆ.ಇನ್ನೊಂದೆಡೆ ಬಿಸಿಲಿನ ಬೇಗೆಗೆ ಕೋಳಿಗಳನ್ನು ಸಾಕುವುದು ಕಷ್ಟಕರವಾಗಿದೆ.

ಬಿಸಿಲಿನ ತಾಪಮಾನದ ಏರಿಕೆಯಿಂದ ಸಮುದ್ರದಲ್ಲಿ ಮೀನಿನ ಕ್ಷಾಮ ಹೆಚ್ಚಾಗಿದೆ. ಇನ್ನೊಂದೆಡೆ ಬಿಸಿಲಿನ ಬೇಗೆಗೆ ಕೋಳಿಗಳನ್ನು ಸಾಕುವುದು ಕಷ್ಟಕರವಾಗಿದೆ.

ಇನ್ನೊಂದೆಡೆ ಕರಾವಳಿಯಲ್ಲಿ ನೇಮ, ಕೋಲ, ಮದುವೆ, ಜಾತ್ರೆ, ಹಬ್ಬ ಹರಿದಿನಗಳು ಹೀಗೆ ಸಾಲು ಸಾಲಾಗಿ ಬರುತ್ತಿವೆ. ಇದರಿಂದ ಮಾಂಸದ ಬೇಡಿಕೆಯೂ ಹೆಚ್ಚಿದೆ. ಸದ್ಯ ಮಾರುಕಟ್ಟೆಯಲ್ಲಿ ವಿಥೌಟ್‌ ಸ್ಕಿನ್‌ ಬ್ರಾಯ್ಲರ್‌ ಕೋಳಿ ಕೆಜಿಗೆ 230-240 ರೂಪಾಯಿ, ಟೈಸನ್‌ 270 ರೂಪಾಯಿ, ಸಜೀವ ಬ್ರಾಯ್ಲರ್‌ ಕೋಳಿ ಕೆಜಿಗೆ 160-170 ರೂಪಾಯಿ, ಟೈಸನ್‌ ಜೀವಂತ ಕೋಳಿಗೆ ಕೆಜಿಗೆ 185 ರಿಂದ 190 ರೂಪಾಯಿ ಇದೆ. ಪ್ರತಿ ವಾರ 5-6 ರೂಪಾಯಿ ಏರಿಕೆ ಕಾಣುತ್ತಿದೆ.

 

RELATED ARTICLES

Related Articles

TRENDING ARTICLES