Wednesday, May 8, 2024

ಮುದ್ದಹನುಮೇಗೌಡ್ರು ಒಕ್ಕಲಿಗರು ಅಂತಾರೆ, ದೇವೇಗೌಡ್ರು ನಿಂತಾಗ ಯಾಕೆ ವಿರೋಧ ಮಾಡಿದ್ರು? : ಕುಮಾರಸ್ವಾಮಿ

ತುಮಕೂರು : ಕಾಂಗ್ರೆಸ್​ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಒಕ್ಕಲಿಗರಿದ್ದಾರೆ ಅಂತ ಹೇಳ್ತಾರೆ. ಹಾಗಿದ್ರೆ, ದೇವೇಗೌಡರು ನಿಂತಾಗ ಯಾಕೆ ವಿರೋಧ ಮಾಡಿದ್ರು? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ರೋಡ್​ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಲೋಕಸಭೆಗೆ ನಿಲ್ಲಬೇಕು ಅಂತ ಇರಲಿಲ್ಲ. ಕೊಬ್ಬರಿ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ 15 ರಿಂದ 16 ಸಾವಿರ ಬೆಂಬಲ ಬೆಲೆ ಕೊಡಿಸುವುದಕ್ಕೆ ಹೋರಾಟ ಮಾಡ್ತೀನಿ. ಯಾರೋ ರೈತರು ಹೇಳ್ತಿದ್ರು. ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಬಹಳ ರೈತರ ಪರ ಮಾತಾಡ್ತಾರೆ ಅಂತ. ಅವರಿಂದ ಬೆಂಬಲ ಬೆಲೆ ಕೊಡಿಸೋದಕ್ಕೆ ಆಗೋದಿಲ್ಲ ಎಂದು ಕುಟುಕಿದರು.

ಜಾತಿ ಆಧಾರದ ಮೇಲೆ ಚುನಾವಣೆ ನಡೀತಿಲ್ಲ

ದೇವೇಗೌಡರು ಮುಖ್ಯಮಂತ್ರಿ ಆಗಬೇಕಾದರೆ ಸೋಮಣ್ಣನವರು ಶಾಸಕರಾಗಿ ಬೆಂಬಲ ಕೊಟ್ಟಿದ್ರು. ಕರ್ನಾಟಕದಿಂದ ಮೈತ್ರಿ ಪಕ್ಷದ 28ಕ್ಕೆ 28 ಅಭ್ಯರ್ಥಿಗಳು ಗೆದ್ದು ಸಂಸತ್ ಗೆ ಹೋಗ್ತಾರೆ. ತುಮಕೂರಿನ ಮಹಾಜನತೆಗೆ ಕೈ ಮುಗಿದು ಮನವಿ ಮಾಡ್ಕೊಳ್ತೀನಿ. ಜಾತಿ ಆಧಾರದ ಮೇಲೆ ಈ ಚುನಾವಣೆ ನಡೀತಿಲ್ಲ. ನಾಡಿನಲ್ಲಿ ಅಭಿವೃದ್ಧಿಗಾಗಿ ಮತ ನೀಡಿ, ಸೋಮಣ್ಣನವರು ಕೆಲಸಗಾರರಿದ್ದಾರೆ. ಕೇವಲ ತುಮಕೂರಿನ ಸಂಪೂರ್ಣ ಅಭಿವೃದ್ಧಿಯನ್ನ ದೃಷ್ಟಿಯಲ್ಲಿಟ್ಟುಕೊಂಡು ಮತ ನೀಡಿ ಎಂದು ಮನವಿ ಮಾಡಿದರು.

ಇನ್ನೂ ಎರಡು ದಿನ ತುಮಕೂರಿಗೆ ಬರುತ್ತೇನೆ

ನಮ್ಮ ಪಕ್ಷದ ಮುಖಂಡರು, ನಮ್ಮ ಪಕ್ಷದ ಅಭಿಮಾನಿಗಳು ಸೋಮಣ್ಣ ಅವರಿಗೆ ಮತ ನೀಡಿ. ನಾನು ಇನ್ನೂ ಎರಡು ದಿನ ತುಮಕೂರಿಗೆ ಬರುತ್ತೇನೆ. ತುರುವೇಕೆರೆ, ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಪ್ರಚಾರ ಮಾಡ್ತೀನಿ. ಶಾಸಕ ಬಿ. ಸುರೇಶ್ ಗೌಡರ ಜೊತೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಪ್ರಚಾರ ಮಾಡ್ತೀನಿ ಎನ್ನುವ ಮೂಲಕ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್​ಗೆ ಟಾಂಗ್ ಕೊಟ್ಟರು.

RELATED ARTICLES

Related Articles

TRENDING ARTICLES