Wednesday, May 1, 2024

Ballari Election Survey by Powertv : ಬಳ್ಳಾರಿ ಕ್ಷೇತ್ರದ ಮೆಗಾ ಸಮೀಕ್ಷೆ..!

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30 ರಿಂದ  ಮಧ್ಯಾಹ್ನ 1.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಲೋಕಸಭಾ ಕ್ಷೇತ್ರ: ಬಳ್ಳಾರಿ

ಹಾಲಿ ಸಂಸದದೇವೇಂದ್ರಪ್ಪ

===================================

2024ರಲ್ಲಿ ಬಿಜೆಪಿ ಟಿಕೆಟ್​ : ಬಿಜೆಪಿ : ಶ್ರೀರಾಮುಲು (ಮಾಜಿ ಸಚಿವ)

2024ರಲ್ಲಿ ಕಾಂಗ್ರೆಸ್​​ ಟಿಕೆಟ್​ : ಕಾಂಗ್ರೆಸ್ : ಇ. ತುಕಾರಾಂ

==================================

2019 ಬಲಾಬಲ :

ದೇವೇಂದ್ರಪ್ಪ :  ಬಿಜೆಪಿ :  6,01,388  :ಶೇ. 49.22

ವಿ.ಎಸ್.ಉಗ್ರಪ್ಪ :  ಕಾಂಗ್ರೆಸ್ : 5,75,681 : ಶೇ. 47.09

ಕೆ.ಗೂಳಪ್ಪ : ಬಿಎಸ್ಪಿ : 9,961 : ಶೇ. 00.82

ಚಲಾವಣೆಯಾದ ಒಟ್ಟು ಮತಗಳು : 12,21,985 : ಶೇ. 69.76

ಗೆಲುವಿನ ಅಂತರ :  25,707 :  ಶೇ. 02.04

=====================================

ಮತದಾರರ ವಿವಿರ :

ಪುರುಷರು                  : 9,20,129

ಮಹಿಳೆಯರು             : 9,45,191

ಒಟ್ಟು ಮತದಾರರು    : 18,65,586

( ಇತರೆ 266 )

=================================

ಜಾತಿವಾರು ಲೆಕ್ಕಾಚಾರ  :

ಲಿಂಗಾಯತರು          : 3,50,000

ಪರಿಶಿಷ್ಟ ಜಾತಿ           : 3,00,000

ಪರಿಶಿಷ್ಟ ಪಂಗಡ       : 3,50,000

ಕುರುಬರು                   : 2,85,000

ಮುಸ್ಲಿಂ                       : 2,05,000

ಇತರೆ                         : 4,00,000 (ಬಲಿಜ /ಯಾದವ /ಗಂಗಾಮತಸ್ಥ/ ರೆಡ್ಡಿ/ ಕಮ್ಮಾರ/ ವೈಶ್ಯರ/ )

=================================

ಬಿಜೆಪಿ ಪ್ಲಸ್:

ಪ್ರಭಾವಿ ನಾಯಕ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಆಗಿರುವುದು

ಜನಾರ್ದನ ರೆಡ್ಡಿ ಬಿಜೆಪಿ ವಾಪಸ್​ ಆಗಿದ್ದು ಶ್ರೀರಾಮುಲುಗೆ ಆನೆಬಲ

ಪ್ರಧಾನಿ ನರೇಂದ್ರ ಮೋದಿ ಹವಾ, ಹಿಂದೂತ್ವದ ಒಗ್ಗಟ್ಟು

ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಆಗಿರುವುದು ಪ್ಲಸ್ ಪಾಯಿಂಟ್

ಕಾಂಗ್ರೆಸ್​ ಹೋಲಿಸಿದ್ರೆ ಬಿಜೆಪಿಯಲ್ಲಿ ಗುಂಪುಗಾರಿಕೆ, ಗೊಂದಲ ಇಲ್ಲ

==========================

ಬಿಜೆಪಿ ಮೈನಸ್ :

ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯ ಕೇವಲ ಒಬ್ಬ ಶಾಸಕ ಮಾತ್ರ ಜಯ

ಸಂಸದರಿಂದ ಯಾವುದೇ ಹೇಳಿಕೊಳ್ಳುವ ಕೆಲಸ, ಯೋಜನೆ ಇಲ್ಲ

ಅಸೆಂಬ್ಲಿ ಸೋಲಿನಿಂದ ಪಕ್ಷದ ಕಾರ್ಯಕರ್ತರಲ್ಲಿ ಕುಂದಿದ ಹುಮ್ಮಸ್ಸು

=====================================

ಕಾಂಗ್ರೆಸ್ ಪ್ಲಸ್​ :

ಸತತ 4 ಬಾರಿ ಗೆದ್ದಿರುವ ಸಂಡೂರು ಶಾಸಕ ಇ.ತುಕಾರಾಂ ಸ್ಪರ್ಧೆ

ವಿಧಾನಸಭೆ ಎಲೆಕ್ಷನ್ ವೇಳೆ ಕಾಂಗ್ರೆಸ್ ಭರ್ಜರಿ ಜಯಭೇರಿ

ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದು

ಅಲ್ಪಸಂಖ್ಯಾತ, ಅಹಿಂದ ಮತಬ್ಯಾಂಕ್ ಗಟ್ಟಿಯಾಗಿರುವುದು

ಬಿಜೆಪಿ ಸಂಸದರ ನಿಷ್ಕ್ರಿಯತೆ ಬಗ್ಗೆ ಜನರಲ್ಲಿನ ಅಸಮಾಧಾನ

=========================

ಕಾಂಗ್ರೆಸ್ ಮೈನಸ್ :

ಗ್ಯಾರಂಟಿಗಳ ಅಬ್ಬರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತ

ಬಿಜೆಪಿಯಂತೆ ಕಾರ್ಯಕರ್ತರ ಪಡೆಯ ಸಂಘಟನೆ ಇಲ್ಲ

ಸಂಡೂರಲ್ಲಿ 4 ಬಾರಿ ಗೆದ್ದಿದ್ರೂ ಲೋಕ ಕ್ಷೇತ್ರದೆಲ್ಲೆಡೆ ಪರಿಚಯ ಇಲ್ಲ

ಪವರ್ ಟಿವಿ ಸರ್ವೆ ರಿಸಲ್ಟ್​ :

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಳ್ಳಾರಿಯಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ? ಈ ಬಾರಿ ಕಮಲದ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ? ಶ್ರೀರಾಮುಲುಗೆ ಸೋಲುಣಿಸುತ್ತಾರಾ ಇ.ತುಕಾರಾಂ? ಗೆಲುವಿನ ಪತಾಕೆ ಹಾರಿಸುತ್ತಾರಾ ಶ್ರೀರಾಮುಲು? ಇವೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬಳ್ಳಾರಿ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 7365

ಪುರುಷ ಮತದಾರರಿಂದ 6730, ಮಹಿಳಾ ಮತದಾರರಿಂದ 635 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3916, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 3449

ಬಳ್ಳಾರಿ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 53%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 47%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಕಾಂಗ್ರೆಸ್ ವಿರುದ್ಧ ಬಿಜೆಪಿ​​ಗೆ 467 ಮತಗಳ ಮುನ್ನಡೆ

===================================

ಸದ್ಯದ ಟ್ರೆಂಡ್​ :

ಬಳ್ಳಾರಿ ಲೋಕಸಭಾ ಫೈಟ್​ನಲ್ಲಿ ಬಿಜೆಪಿಯತ್ತ ಜನರ ಒಲವು

ಬಿಜೆಪಿ-ಕಾಂಗ್ರೆಸ್​ ನಡುವಿನ ಫೈಟ್​​​ನಲ್ಲಿ ಬಿಜೆಪಿಗೆ ಮುನ್ನಡೆ

ಎರಡನೇ ಬಾರಿ ಸಂಸದರಾಗುವತ್ತ ಶ್ರೀರಾಮುಲು ದಾಪುಗಾಲು

ಬಳ್ಳಾರಿ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳುವ ಮುನ್ಸೂಚನೆ

ಇದು ಪವರ್ ಟಿವಿ ಸರ್ವೆಯಲ್ಲಿ ಮತದಾರರು ನೀಡಿರುವ ಸಂದೇಶ.

RELATED ARTICLES

Related Articles

TRENDING ARTICLES