Wednesday, May 1, 2024

Bagalkote Loksabha Election Survey 2024 : ಗದ್ದಿಗೌಡ್ರಿಗೆ ಸಂಯುಕ್ತಾ ಪಾಟೀಲ್ ಪ್ರಬಲ ಪೈಪೋಟಿ

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ  ಬೆಳಗ್ಗೆ 9.30 ರಿಂದ ಮಧ್ಯಾಹ್ನ  1.30 ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಬಾಗಲಕೋಟೆ ಲೋಕಸಭಾ ಕ್ಷೇತ್ರ ಪರಿಚಯ :

ಲೋಕಸಭಾ ಕ್ಷೇತ್ರ : ಬಾಗಲಕೋಟೆ

ಹಾಲಿ ಸಂಸದ: ಪಿ.ಸಿ. ಗದ್ದಿಗೌಡ್ರ

=======================

2024ರಲ್ಲಿ ಬಿಜೆಪಿ ಅಭ್ಯರ್ಥಿ  :    ಪಿ.ಸಿ. ಗದ್ದಿಗೌಡ್ರ

2024ರಲ್ಲಿ ಕಾಂಗ್ರೆಸ್​ ಅಭ್ಯರ್ಥಿ :  ಸಂಯುಕ್ತಾ ಪಾಟೀಲ್​

===============================

2019ಬಲಾಬಲ

ಪಿ.ಸಿ. ಗದ್ದಿಗೌಡ್ರ         : ಬಿಜೆಪಿ      :    6,64,638     ಶೇ. 55.17

ವೀಣಾ ಕಾಶಪ್ಪನವರ್  : ಕಾಂಗ್ರೆಸ್   :    4,96,451      ಶೇ. 41.21

ನೋಟಾ   ಯಾರಿಗೂ ಮತ ಇಲ್ಲ     :     11,328         ಶೇ. 0.94

ಚಲಾವಣೆಯಾದ ಒಟ್ಟು ಮತಗಳು         12,04,702      ಶೇ. 70.70

ಗದ್ದಿಗೌಡ್ರ ಗೆಲುವಿನ ಅಂತರ             1,68,187              

============================

ಮತದಾರರ ವಿವಿರ

ಪುರುಷರು                         :    8,87,780

ಮಹಿಳೆಯರು                    :     9,02,239

ಒಟ್ಟು                             :     17,90,118

(ತೃತೀಯ ಲಿಂಗಿಗಳು            :     99)

=================================

ಜಾತಿವಾರು ಲೆಕ್ಕಾಚಾರ

ಲಿಂಗಾಯತ                       :  2,40,000  (ಪಂಚಮಸಾಲಿ&ಬಣಜಿಗ)

ಕುರುಬ                             : 2,20,000

ಪರಿಶಿಷ್ಟ ಜಾತಿ (ಎಸ್ಸಿ)          :  3,00,000

ಪರಿಶಿಷ್ಟ ಪಂಗಡ (ST)         :  1,25,000

ಅಲ್ಪಸಂಖ್ಯಾತ                   :  1,75,000

ಗಾಣಿಗ                             :  1,20,000

ರೆಡ್ಡಿ                               :  70,000

ನೇಕಾರ                            :  50,000

ಇತರೆ                               : 4,00,000

ಒಟ್ಟು                              : 17,55,827

==========================

ಬಿಜೆಪಿ ಪ್ಲಸ್

ಸತತ 4 ಬಾರಿ ಲೋಕಸಭೆಗೆ ಆಯ್ಕೆ ಆಗಿರುವ ಗದ್ದಿಗೌಡರ ಪ್ರಭಾವ

ಮೋದಿ ಅಲೆ ಜೊತೆಗೆ ಗದ್ದಿಗೌಡರ ಸರಳತೆ & ವಿವಾದ ಮುಕ್ತ ಸೇವೆ

ಸ್ಥಳೀಯವಾಗಿ ಬಿಜೆಪಿಯಲ್ಲಿ ಜನಪ್ರಿಯ ನಾಯಕರು ಇರುವುದು

==========================

ಬಿಜೆಪಿ ಮೈನಸ್ :

ನಾಲ್ಕು ಬಾರಿ ಗೆದ್ದರೂ ಕ್ಷೇತ್ರಕ್ಕೆ ಯಾವುದೇ ಮಹತ್ವದ ಯೋಜನೆ ಇಲ್ಲ

ವಿದಾನಸಭೆ ಸೋಲಿನ ಬಳಿಕ ಮುಖಂಡರಲ್ಲಿ ಕುಂದಿದ ಉತ್ಸಾಹ

ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಶಾಸಕರು ಹೆಚ್ಚು ಆಯ್ಕೆ ಆಗಿದ್ದು

==============================================

ಕಾಂಗ್ರೆಸ್ ಪ್ಲಸ್  :

ಸಂಯುಕ್ತಾ ಪಾಟೀಲ್​ ಕ್ಷೇತ್ರಾದ್ಯಂತ ಮಿಂಚಿನ ಪ್ರಚಾರ

ವಿಧಾನಸಭೆ ಗೆಲುವಿನ ಬಳಿಕ ಹೆಚ್ಚಾಗಿರುವ ನಾಯಕರ ಉತ್ಸಾಹ

ಗ್ಯಾರಂಟಿ ಜಾರಿಯ ಪ್ರಭಾವ ಮತಗಳಾಗಿ ಪರಿವರ್ತನೆಯ ಹುಮ್ಮಸ್ಸು

ಸಿದ್ದರಾಮಯ್ಯ ಪ್ರಭಾವ ಮತಗಳಾಗಿ ಪರಿವರ್ತನೆ ಸಾಧ್ಯತೆ   (ಕುರುಬ ಮತಗಳು ಹೆಚ್ಚಾಗಿವೆ / ಬಾದಾಮಿಯಲ್ಲಿ ಗೆದ್ದಿದ್ರು)

=========================

ಕಾಂಗ್ರೆಸ್ ಮೈನಸ್ ಪಾಯಿಂಟ್ :

ವೀಣಾ ಕಾಶಪ್ಪನವರ್​ಗೆ ಟಿಕೆಟ್​ ಕಡೆಗಣಿಸಿದ್ದು ಒಳೇಟು ಸಾಧ್ಯತೆ

ಸಂಯುಕ್ತಾ ಪಾಟೀಲ್​ ಹೊರಗಿನವರು ಮತ್ತು ಅನುಭವ ಇಲ್ಲ

ಮೋದಿ ಅಲೆ ಎದುರಿಸಬಲ್ಲ ಸಮರ್ಥ ನಾಯಕತ್ವದ ಕೊರತೆ

ಗ್ಯಾರಂಟಿ ನೆಪದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗ್ತಿಲ್ಲ

ಪವರ್ ಟಿವಿ ಸಮೀಕ್ಷೆ :

ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ  ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಗಲಕೋಟೆ  ಜನರು ಯಾರಿಗೆ ಹೆಚ್ಚು ಮತ ಹಾಕಿದ್ದಾರೆ? ಈ ಬಾರಿ ಕಮಲದ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ? ಗದ್ದಿಗೌಡರಿಗೆ ಮತ್ತೆ​ ಗದ್ದುಗೆನಾ?  ಸಂಯುಕ್ತಾ ಪಾಟೀಲ್​ ಪಾರಮ್ಯನಾ? ಇಲ್ಲಿದೆ ಮಾಹಿತಿ.

ಪವರ್​ ಟಿವಿ ಸಮೀಕ್ಷೆ ರಿಸಲ್ಟ್​:

ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಒಟ್ಟು ಕರೆಗಳು – 7,881

ಪುರುಷ ಮತದಾರರಿಂದ 7,398.. ಮಹಿಳಾ ಮತದಾರರಿಂದ 483 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3,960.. ಕಾಂಗ್ರೆಸ್​ ಅಭ್ಯರ್ಥಿಗೆ ವೋಟ್ಸ್​ – 3,908

ಬಾಗಲಕೋಟೆ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 13 ಮಾತ್ರ

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 50%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 50%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಕಾಂಗ್ರೆಸ್ ವಿರುದ್ಧ ಬಿಜೆಪಿಗೆ 52 ಮತಗಳ ಮುನ್ನಡೆ .

 

ಕ್ಷೇತ್ರದಲ್ಲಿ ಸದ್ಯದ ಟ್ರೆಂಡ್​ :

ಬಾಗಲಕೋಟೆ ಲೋಕಸಭಾ ಫೈಟ್​ನಲ್ಲಿ ಸದ್ಯಕ್ಕೆ ಸಮಬಲ ಫೈಟ್​

ಬಾಗಲಕೋಟೆಯಲ್ಲಿ ಬಿಜೆಪಿಗೆ ಟಕ್ಕರ್​ ಕೊಡ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ

4 ಬಾರಿ ಗೆದ್ದಿರುವ ಗದ್ದಿಗೌಡ್ರಿಗೆ ಸಂಯುಕ್ತಾ ಪಾಟೀಲ್​ ಪ್ರಬಲ ಪೈಪೋಟಿ

ಬಾಗಲಕೋಟೆಯಲ್ಲಿ ಸದ್ಯದ  ಲೆಕ್ಕಾಚಾರದಂತೆ ಫೋಟೋ ಫಿನಿಶ್  ರಿಸಲ್ಟ್​

ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಅಲ್ಪ ಮುನ್ನಡೆ

ಇದು ಪವರ್ ಟಿವಿ ಸರ್ವೆ ಮೂಲಕ ಬಾಗಲಕೋಟೆ ಮತದಾರರ ಸಂದೇಶ.

RELATED ARTICLES

Related Articles

TRENDING ARTICLES