Friday, May 3, 2024

Power TV Survey: ದಾವಣಗೆರೆ ಕ್ಷೇತ್ರದಲ್ಲಿ ಯಾರಿಗೆ ಜಯ? ಯಾರಿಗೆ ಸೋಲು?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಣ್ಣೆ ನಗರಿ ದಾವಣೆಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ಕಾಲ್​ ಮಾಡಿ ಓಟ್ ಮಾಡಿ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 5.30 ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಪರಿಚಯ :

ಲೋಕಸಭಾ ಕ್ಷೇತ್ರ: ದಾವಣಗೆರೆ

ಹಾಲಿ ಸಂಸದ: ಜಿ.ಎಂ. ಸಿದ್ದೇಶ್ವರ

=======================

2024ರಲ್ಲಿ ಬಿಜೆಪಿ ಅಭ್ಯರ್ಥಿ   ಬಿಜೆಪಿ : ಗಾಯತ್ರಿ ಸಿದ್ದೇಶ್ವರ

2024ರಲ್ಲಿ ಕಾಂಗ್ರೆಸ್​ ಅಭ್ಯರ್ಥಿ  ಕಾಂಗ್ರೆಸ್  : ಡಾ. ಪ್ರಭಾ ಮಲ್ಲಿಕಾರ್ಜುನ್ (ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ)

================================

2019ಬಲಾಬಲ

ಜಿ.ಎಂ. ಸಿದ್ದೇಶ್ವರ            ಬಿಜೆಪಿ :  6,52,996             ಶೇ. 54.66

ಹೆಚ್.ಬಿ. ಮಂಜಪ್ಪ       ಕಾಂಗ್ರೆಸ್ : 4,83,294             ಶೇ. 40.46

ಸಿದ್ದಪ್ಪ ಬಿ.ಹೆಚ್.             ಬಿಎಸ್ಪಿ : 7,736                 ಶೇ. 00.65

 

ಚಲಾವಣೆಯಾದ ಒಟ್ಟು ಮತಗಳು                   11,95,225             ಶೇ. 73.19

ಜಿ.ಎಂ. ಸಿದ್ದೇಶ್ವರ            ಗೆಲುವಿನ ಅಂತರ           1,69,702               ಶೇ. 14.20

============================

ಮತದಾರರ ವಿವಿರ

ಪುರುಷರು                  8,44,201

ಮಹಿಳೆಯರು              8,47,662

ಒಟ್ಟು ಮತದಾರರು      16,91,996

 

(ತೃತೀಯ ಲಿಂಗಿಗಳು – 133)

=================================

ಜಾತಿವಾರು ಲೆಕ್ಕಾಚಾರ

ಲಿಂಗಾಯತ       3,80,000

ಎಸ್ಸಿ                2,86,000

ಕುರುಬ             2,45,000

ಎಸ್ಟಿ                2,35,000

ಮುಸ್ಲಿಂ            2,07,000

ಇತರೆ ಜಾತಿಗಳು  : 1,05,594

==========================

ಬಿಜೆಪಿ  ಪ್ಲಸ್ :

ಜಿ.ಎಂ. ಸಿದ್ಧೇಶ್ವರ ಸತತ ಗೆಲುವಿನ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದು

ಪ್ರಧಾನಿ ನರೇಂದ್ರ ಮೋದಿ ಅಲೆ, ಕ್ಷೇತ್ರದಲ್ಲಿ ಬಿಜೆಪಿಯ ಪ್ರಬಲ ಸಂಘಟನೆ

ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು

ರಾಮಮಂದಿರ ನಿರ್ಮಾಣದ ಪ್ರಭಾವ.. ಹಿಂದೂತ್ವದ ಮತ ಬ್ಯಾಂಕ್

==========================

ಬಿಜೆಪಿ ಮೈನಸ್  :

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆ ಆಗಿರುವುದು

ಸಿದ್ಧೇಶ್ವರ್​ ಪತ್ನಿಗೆ ಟಿಕೆಟ್​ ನೀಡಿದ್ದಕ್ಕೆ ಸ್ಥಳೀಯ ಬಿಜೆಪಿಗರ ವಿರೋಧ

ಗ್ರಾಮಾಂತರ ವ್ಯಾಪ್ತಿಯಲ್ಲಿ ಸಂಸದರ ಬಗ್ಗೆ ಇರುವ ಅಸಮಾಧಾನ

=====================================

ಕಾಂಗ್ರೆಸ್ ಪ್ಲಸ್  :

ಲೋಕಸಭಾ ವ್ಯಾಪ್ತಿಯ 8ರ ಪೈಕಿ 7ರಲ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲ

ಅಸೆಂಬ್ಲಿ ಎಲೆಕ್ಷನ್ ಬಳಿಕ 5 ಗ್ಯಾರಂಟಿ ಯೋಜನೆ ಸಮರ್ಪಕ ಜಾರಿ

ಅದ್ಧೂರಿ ಸಿದ್ದರಾಮೋತ್ಸವ.. ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಎಂ ಪ್ರಭಾವ

ಬಿಜೆಪಿ ಮುಖಂಡರೇ ಹಾಲಿ ಸಂಸದರ ವಿರುದ್ಧ ತಿರುಗಿ ಬಿದ್ದಿರುವುದು

=========================

ಕಾಂಗ್ರೆಸ್ ಮೈನಸ್   :

ಟಿಕೆಟ್ ವಂಚಿತ ವಿನಯ್​ ಕುಮಾರ್​ ಪಕ್ಷೇತರ ಸ್ಪರ್ಧೆ ಘೋಷಣೆ

ನಿರಂತರ ಸಂಘಟನೆಯ ಕೊರತೆ, ಬಿಜೆಪಿ ವಿರುದ್ಧ ಸತತ ಸೋಲು

ಲೋಕ ಸಮರಕ್ಕೆ ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗದೇ ಇರುವುದು

 

ಪವರ್ ಟಿವಿ ಸಮೀಕ್ಷೆ :

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ  ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ದಾವಣಗೆರೆಯಲ್ಲಿ ಯಾವ ಪಕ್ಷಕ್ಕೆ  ಅತಿಹೆಚ್ಚು ಮತದಾನವಾಗಿದೆ?, ಕಮಲದ ನಾಗಾಲೋಟಕ್ಕೆ ಬ್ರೇಕ್ ಹಾಕ್ತಾರಾ ಪ್ರಭಾ ಮಲ್ಲಿಕಾರ್ಜುನ್?, ಬಂಡಾಯ ಹಿಮ್ಮೆಟ್ಟಿಸಿ ಜಯಭೇರಿ ಬಾರಿಸ್ತಾರಾ ಗಾಯತ್ರಿ ಸಿದ್ದೇಶ್ವರ್​? ಮತ್ತು ವಿನಯ್​ಕುಮಾರ್ ಸ್ಪರ್ಧೆಯಿಂದ ಕಾಂಗ್ರೆಸ್​​​​​ಗೆ ಹೊಡೆತ ಬೀಳುತ್ತಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಪವರ್ ಟಿವಿ ಸಮೀಕ್ಷೆ ರಿಸಲ್ಟ್​ :

ದಾವಣಗೆರೆ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 8675

ಪುರುಷ ಮತದಾರರಿಂದ 8092, ಮಹಿಳಾ ಮತದಾರರಿಂದ 583 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3991, ಕಾಂಗ್ರೆಸ್​ ಅಭ್ಯರ್ಥಿಗೆ ವೋಟ್ಸ್​ – 3043

ಪಕ್ಷೇತರ ಅಭ್ಯರ್ಥಿ ವಿನಯ್​ಕುಮಾರ್​​ಗೆ ಬಂದ ಮತಗಳು – 1641

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 46%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 35%

ಇತರರಿಗೆ ಬಂದ ಶೇಕಡಾವಾರು ಮತಗಳು – 19%

ಕಾಂಗ್ರೆಸ್ ವಿರುದ್ಧ ಬಿಜೆಪಿಗೆ 948 ಮತಗಳ ಮುನ್ನಡೆ

 

 

ಕ್ಷೇತ್ರದಲ್ಲಿ ಸದ್ಯದ ಟ್ರೆಂಡ್​ :

ದಾವಣಗೆರೆ ಲೋಕಸಭಾ ಫೈಟ್​ನಲ್ಲಿ ಬಿಜೆಪಿಯತ್ತ ಜನರ ಒಲವು

ಈ ಬಾರಿಯೂ ಕಮಲ ಅಭ್ಯರ್ಥಿಗೆ ಜೈ ಎಂದ ಮತದಾರರು

ಇದೇ ಮೊದಲ ಬಾರಿಗೆ ಚುನಾವಣಾ ಕಣದಲ್ಲಿ ಇಬ್ಬರು ಮಹಿಳೆಯರು

ಉತ್ತಮ ಪೈಪೋಟಿ ನೀಡಿ ಹಿನ್ನಡೆ ಅನುಭವಿಸಿದ ಪ್ರಭಾ ಮಲ್ಲಿಕಾರ್ಜುನ್​​​

ಪಕ್ಷೇತರ ಇನ್​​ಸ್ಪೈರ್​ ವಿನಯ್​ಕುಮಾರ್ ಸ್ಪರ್ಧೆಯಿಂದ ಕಾಂಗ್ರೆಸ್​ಗೆ ಹೊಡೆತ

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಗೆಲುವಿನ ಮುನ್ಸೂಚನೆ

ಇದು ಪವರ್ ಟಿವಿ ಸರ್ವೆ ಮೂಲಕ ದಾವಣಗೆರೆ ಜನ ನೀಡಿರುವ ಸಂದೇಶ

RELATED ARTICLES

Related Articles

TRENDING ARTICLES