Friday, May 3, 2024

ಕೋಲಾರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕೆ.ವಿ ಗೌತಮ್ ಹೆಸರು ಘೋಷಣೆ!

ಬೆಂಗಳೂರು : ಕೋಲಾರದಲ್ಲಿ ಕಾಂಗ್ರೆಸ್​ ಪಕ್ಷದ ಟಿಕೆಟ್​ ಫೈಟ್​ ಅಂತಿಮ ಹಂತಕ್ಕೆ ಬಂದಿದ್ದು ಎರಡು ಬಣಗಳ ಜಗಳದ ಮಧ್ಯೆ ಮೂರನೇಯವರಿಗೆ ಲಾಭವಾಗಿದೆ. ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ ಗೌತಮ್​ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ಅಭ್ಯರ್ಥಿಯ ಆಯ್ಕೆಯ ಕುರಿತು ಎಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಮೂಲಕ ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಕ್ಕೆ ಹಿನ್ನಡೆಯಾಗಿದೆ. ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಭಾರೀ ಕಗ್ಗಂಟಾಗಿ ಎಡಗೈ ಮತ್ತು ಬಲಗೈ ಬಣಗಳು ತೀವ್ರ ಹೊಡೆದಾಟ ನಡೆಸಿದ್ದವು.

ಇದನ್ನೂ ಓದಿ: ಕೆರೆಯಲ್ಲಿ ಮೋಟಾರ್ ಕದಿಯಲು ಯತ್ನ: ಗ್ರಾಮಸ್ಥರಿಂದ ಕಳ್ಳನಿಗೆ ಥಳಿತ!

ಸಚಿವ ಕೆಎಚ್‌ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ನಡುವಿನ ಜಗಳ ತಾರಕಕ್ಕೇರಿದ್ದು, ಅಭ್ಯರ್ಥಿ ಆಯ್ಕೆ ಸದ್ಯ ಹೈಕಮಾಂಡ್ ಅಂಗಳಕ್ಕೆ ತಲುಪಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆಯೂ ನಡೆದಿತ್ತು. ಕಾಂಗ್ರೆಸ್​​ ಪರಿಶಿಷ್ಟ ಎಡಗೈ ಸಮುದಾಯದ ಮಾಜಿ ಮೇಯರ್​ ವಿಜಯ್​ ಕುಮಾರ್​ ಅವರ ಪುತ್ರ ಕೆ.ವಿ. ಗೌತಮ್​ ಅವರಿಗೆ ನೀಡಿದೆ.

ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ, ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಕೋಲಾರದಲ್ಲಿ ಅಭ್ಯರ್ಥಿಯಾಗಿ ಕೆವಿ ಗೌತಮ್‌ ಅವರ ಹೆಸರನ್ನು ಒಪ್ಪಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಲ್ಲೇಶ್‌ ಬಾಬು ಕಣಕ್ಕಿಳಿದಿದ್ದಾರೆ.

RELATED ARTICLES

Related Articles

TRENDING ARTICLES